Sunday, August 9, 2026
Homeವನ್ಯ ಜೀವಿಉಡುಪಿ: ಭಾರೀ ಗಾತ್ರದ ಹಾವು ಹಿಡಿದ ಹುಲಿ ವೇಷದಾರಿ: ಸ್ಥಳೀಯರಿಂದ ಮೆಚ್ಚುಗೆ!

ಉಡುಪಿ: ಭಾರೀ ಗಾತ್ರದ ಹಾವು ಹಿಡಿದ ಹುಲಿ ವೇಷದಾರಿ: ಸ್ಥಳೀಯರಿಂದ ಮೆಚ್ಚುಗೆ!

Telegram Group
Join Now

ಉಡುಪಿ: ನಗರದಲ್ಲಿ ಅಷ್ಟಮಿ ಸಂಭ್ರಮದ ಅಂಗವಾಗಿ ಹುಲಿ ವೇಷದಲ್ಲಿ ಕುಣಿಯುತ್ತಿದ್ದ ಅಕ್ಷಯ್ ಶೇಟ್ ಗುಂಡಿಬೈಲ್ ಅವರಿಗೆ ಅಚ್ಚರಿಯ ಘಟನೆ ಎದುರಾಯಿತು. ಮಧ್ಯದಲ್ಲೇ ಅವರಿಗೆ ಹಾವು ಬಂದಿರುವ ಬಗ್ಗೆ ತುರ್ತು ಕರೆ ಬಂದಿತ್ತು.

ವೃತ್ತಿಯಿಂದ ಐಟಿ ಪ್ರೊಫೆಷನಲ್ ಆಗಿದ್ದರೂ, ಹಾವುಗಳನ್ನು ಸುರಕ್ಷಿತವಾಗಿ ಹಿಡಿದು ಬಿಡುವಲ್ಲಿ ಪರಿಣತಿ ಹೊಂದಿರುವ ಅಕ್ಷಯ್ ಶೇಟ್ ಅವರು ತಮ್ಮ ಜನಪದ ಹುಲಿ ವೇಷ ಬದಲಾಯಿಸದೆ ನೇರವಾಗಿ ಸ್ಥಳಕ್ಕೇ ಧಾವಿಸಿದರು. ಕೆಲವೇ ಕ್ಷಣಗಳಲ್ಲಿ ಹಾವನ್ನು ಹಿಡಿದು ಸುರಕ್ಷಿತವಾಗಿ ಪ್ರಕೃತಿಗೆ ಬಿಟ್ಟರು.

ಜನಪದ ಕಲೆ, ವೃತ್ತಿಜೀವನ ಹಾಗೂ ಸಾಹಸ—ಮೂರನ್ನೂ ಸಮನ್ವಯಗೊಳಿಸಿರುವ ಅಕ್ಷಯ್ ಶೇಟ್ ಅವರ ಈ ಕಾರ್ಯ ಸ್ಥಳೀಯರ ಮೆಚ್ಚುಗೆಗೆ ಪಾತ್ರವಾಗಿದೆ.

RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular

Recent Comments