ಚಿಕ್ಕಮಗಳೂರು: ಬಾಳೆಹೊನ್ನೂರು 66/ 33/11 ಕೆ ವಿ ವಿ ಕೇಂದ್ರದಿಂದ ಹೊರಹೊಮ್ಮುವ ಎಲ್ಲಾ ವಿತರಣಾ ಕೇಂದ್ರಗಳಲ್ಲಿ ನಾಳೆ (ಸೆ.17) ವಿದ್ಯುತ್ ವ್ಯತ್ಯಯವಾಗಲಿದೆ ಸಾರ್ವಜನಿಕರು ಸಹಕರಿಸುವಂತೆ ಕೊಪ್ಪ ವಿಭಾಗದ ಮೆಸ್ಕಾಂ ಇಂಜಿನಿಯರ್ ಎಇಇ ಅವರು ತಿಳಿಸಿದ್ದಾರೆ.

ನಾಳೆ 66/ 33/ 11/ ಕೆ.ಬಿ ವಿವಿ ಕೇಂದ್ರ ಬಾಳೆಹೊನ್ನೂರಿನಲ್ಲಿ 2025 – 26 ನೇ ಸಾಲಿನ ಮೊದಲನೇ ತ್ರೈಮಾಸಿಕ ನಿರ್ವಹಣೆ ಹಮ್ಮಿಕೊಂಡಿದ್ದರಿಂದ ಬಾಳೆಹೊನ್ನೂರು 66/ 33/ 11 ಕೆ ವಿ, ಶೃಂಗೇರಿ 33 /11 ಕೆವಿ, ಜಯಪುರ 33 /11 ಕೆ ವಿ ಉಪ ವಿದ್ಯುತ್ ಕೇಂದ್ರಗಳಿಂದ ಪಟ್ಟಣ ಮತ್ತು ಗ್ರಾಮೀಣ ಫೀಡರ್ ಗಳಲ್ಲಿ ವಿದ್ಯುತ್ ಕಡಿತಗೊಳ್ಳಲಿದೆ.
ನಾಳೆ ಬೆಳಿಗ್ಗೆ 10 ಗಂಟೆಯಿಂದ ಸಂಜೆ 5:00 ವರೆಗೂ ಶೃಂಗೇರಿ ತಾಲೂಕಿನ ನಗರ ಮತ್ತು ಗ್ರಾಮೀಣ ಪ್ರದೇಶಗಳಲ್ಲಿ ಹಾಗೂ ಕೊಪ್ಪ ತಾಲೂಕಿನ ಜಯಪುರ ಕಚಿಗೆ, ಲೋಕನಾಥಪುರ, ಬಸರೀಕಟ್ಟೆ, ಕುಂಚೆಬೈಲು ವ್ಯಾಪ್ತಿಯಲ್ಲಿ ಎನ್ ಆರ್ ಪುರ ತಾಲೂಕಿನ ಬಾಳೆಹೊನ್ನೂರು, ಮಾಗುಂಡಿ, ಗಡಿಗೇಶ್ವರ ವ್ಯಾಪ್ತಿಯಲ್ಲಿ ವಿದ್ಯುತ್ ವ್ಯತ್ಯಯವಾಗದ್ದು ಸಾರ್ವಜನಿಕರು ಸಹಕರಿಸಬೇಕಾಗಿ ಈ ಮೂಲಕ ಕೋರಲಾಗಿದ್ದು ಮೆಸ್ಕಾಂ ಕೊಪ್ಪ ವಿಭಾಗದ ಕಾರ್ಯನಿರ್ವಕ ಇಂಜಿನಿಯರ್ ರವರು ತಿಳಿಸುತ್ತಾರೆ
