Monday, August 10, 2026
Homeಕ್ರೈಮ್ಆದಾಯ ಮೀರಿ ಆಸ್ತಿಗಳಿಕೆ: ಶೃಂಗೇರಿ ಶಾಸಕ ಟಿ.ಡಿ ರಾಜೇಗೌಡ ವಿರುದ್ಧ FIR ದಾಖಲು

ಆದಾಯ ಮೀರಿ ಆಸ್ತಿಗಳಿಕೆ: ಶೃಂಗೇರಿ ಶಾಸಕ ಟಿ.ಡಿ ರಾಜೇಗೌಡ ವಿರುದ್ಧ FIR ದಾಖಲು

Telegram Group
Join Now

ಚಿಕ್ಕಮಗಳೂರು: ಆದಾಯ ಮೀರಿ ಆಸ್ತಿಗಳಿಕೆ ಶೃಂಗೇರಿ ಶಾಸಕರ ವಿರುದ್ಧ FIR ದಾಖಲು ಮಾಡಿ, ತನಿಖೆಗೆ ಆದೇಶ ಮಾಡಿದ ಜನಪ್ರತಿನಿಧಿಗಳ ನ್ಯಾಯಾಲಯ. ನವೆಂಬರ್ 17 ರೊಳಗೆ ವರದಿ ಸಲ್ಲಿಕೆ ಆದೇಶ.

ಶೃಂಗೇರಿ ಶಾಸಕರಾದ ರಾಜೇಗೌಡ, ಪತ್ನಿ ಪುಷ್ಪ ರಾಜೇಗೌಡ ಹಾಗೂ ಮಗ ರಾಜ್ ದೇವ್ ಗೌಡ ವಿರುದ್ಧ FIR ದಾಖಲಾಗಿದೆ.

2022 ರಲ್ಲಿ ದಿನೇಶ್ ಹೊಸೂರು ರವರು ಶಾಸಕರ ಅಕ್ರಮ ಆಸ್ತಿಗಳಿಕೆ ವಿರುದ್ಧ ಲೋಕಾಯುಕ್ತಕ್ಕೆ ದೂರು ನೀಡಿದ್ದರು, ಆದರೆ ತನಿಖೆಯೇ ಮಾಡದೇ ಶಾಸಕರಿಗೆ ಲೋಕಾಯುಕ್ತ ಕ್ಲೀನ್ ಚಿಟ್ ನೀಡಿತ್ತು. ಇದನ್ನ ಪ್ರಶ್ನೆ ಮಾಡಿ ದಿನೇಶ್ ರವರು ಜನಪ್ರತಿನಿಧಿಗಳ ನ್ಯಾಯಲಯದ ಮೊರೆ ಹೋಗಿದ್ದರು.

ಸಂಪೂರ್ಣ ದಾಖಲಾತಿ ಪರಿಶೀಲನೆ ಮಾಡಿದ ನ್ಯಾಯಾಲಯ ಈ ಪ್ರಕರಣ ತನಿಖೆಗೆ ಸೂಕ್ತ ಎಂದು ಭಾವಿಸಿ, FIR ದಾಖಲು ಮಾಡಿ, ತನಿಖೆಗೆ ಆದೇಶ ಮಾಡಲಾಗಿದೆ ಹಾಗೂ ನವೆಂಬರ್ 17 ರೊಳಗೆ ವರದಿ ಸಲ್ಲಿಕೆ ಆದೇಶ ನೀಡಿಲಾಗಿದೆ.

RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular

Recent Comments