Monday, July 13, 2026
Homeಕ್ರೈಮ್ಚಿಕ್ಕಮಗಳೂರು: ಉದ್ಯೋಗ ನೀಡುವುದಾಗಿ ಜಾಹೀರಾತು ಮೂಲಕ ಆಮೀಷ ನೀಡಿ 2,06,000 ರೂ. ವಂಚನೆ!

ಚಿಕ್ಕಮಗಳೂರು: ಉದ್ಯೋಗ ನೀಡುವುದಾಗಿ ಜಾಹೀರಾತು ಮೂಲಕ ಆಮೀಷ ನೀಡಿ 2,06,000 ರೂ. ವಂಚನೆ!

Telegram Group
Join Now

ಚಿಕ್ಕಮಗಳೂರು: ಸಾಮಾಜಿಕ ಮಾಧ್ಯಮವೊಂದರಲ್ಲಿ ಉದ್ಯೋಗ ನೀಡುವುದಾಗಿ ಜಾಹೀರಾತು ಮೂಲಕ ಆಮಿಷ ನೀಡಿ 2,06,000 ರೂಗಳನ್ನು ವ್ಯಕ್ತಿಯೊಬ್ಬರಿಗೆ ವಂಚಿಸಿ ಮೋಸ ಮಾಡಿರುವ ಪ್ರಕರಣ ನಡೆದಿದೆ.

ಬ್ಯಾಚುಲರ್ ಆಫ್ ಇಂಜಿನಿಯರಿಂಗ್ (ಕಂಪ್ಯೂಟರ್ ಸೈನ್ಸ್) ಓದಿರುವ ವ್ಯಕ್ತಿ ಫೇಸ್ ಬುಕ್ ಅನ್ನು ವೀಕ್ಷಣೆ ಮಾಡುತ್ತಿರುವಾಗ ಜಾಹೀರಾತು ಒಂದರಲ್ಲಿ (ಐಬಿಎಂ) IBM ಕಂಪನಿಯಲ್ಲಿ ಕೆಲಸವನ್ನು ಕೊಡಿಸುವುದಾಗಿ ಮಾಹಿತಿ ಬಂದಿದೆ.

ಇದನ್ನು ನಂಬಿದ ವ್ಯಕ್ತಿಯು ಜಾಹೀರಾತಿನಲ್ಲಿದ್ದ ನಂಬರ್ ಗೆ ಕರೆಮಾಡಿದ್ದು, ಸೈಬ‌ರ್ ವಂಚಕರು ತಮಗೆ ಕೆಲವು ಪ್ರೊಸೆಸಿಂಗ್ ಚಾರ್ಜಸ್ ಗಳನ್ನು ನೀಡಿದರೆ ನಿಮಗೆ IBM ಕಂಪನಿಯಿಂದ ಕಾಲ್ ಲೇಟರ್ ನ್ನು ನೀಡುವುದಾಗಿ ನಂಬಿಸಿದ್ದಾರೆ. ನಂತರ ಹಂತ ಹಂತವಾಗಿ ಒಟ್ಟು 2,06,000/- ರೂ ಗಳನ್ನು ಖಾತೆಗೆ ವರ್ಗಾವಣೆ ಮಾಡಿಸಿಕೊಂಡು ಮೋಸ ಮಾಡಿದ್ದಾರೆ.ಈ ಕುರಿತು ಚಿಕ್ಕಮಗಳೂರು ಸೈಬ‌ರ್ ಕ್ರೈಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಕೈಗೊಳ್ಳಲಾಗಿದೆ.

ಹಾಗೆ ಸೈಬರ್‌ ಸಹಾಯವಾಣಿ 1930ಗೆ ಕರೆ ಮಾಡುವಂತೆ ಚಿಕ್ಕಮಗಳೂರು ಪೊಲೀಸ್‌ ಇಲಾಖೆಯಿಂದ ಸಾರ್ವಜನಿಕರಲ್ಲಿ ವಿನಂತಿ ಮಾಡಿಕೊಳ್ಳಲಾಗಿದೆ.

RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular

Recent Comments