ಬಾಳೆಹೊನ್ನೂರು: ಭಾರತದ ಇತಿಹಾಸದಲ್ಲಿ ಚುನಾವಣೆ ಪ್ರಾರಂಭವಾದ ನಂತರ 2009 ರವರೆಗೆ ನಡೆದ ಎಲ್ಲಾ ಚುನಾವಣೆಗಳಲ್ಲಿ ಐದು ವರ್ಷಕ್ಕೊಮ್ಮೆ ಹೊಸ ಮತದಾರರು ಕನಿಷ್ಠ ಒಂದುವರೆ ಕೋಟಿಯಿಂದ ಗರಿಷ್ಠ ಮೂರು ಕೋಟಿಯವರೆಗೆ ಏರಿಕೆಯಾಗಿತ್ತು ಇದರ ಮಧ್ಯ 1989ರ ಚುನಾವಣೆಯಲ್ಲಿ ಆರು ಕೋಟಿ ಹೊಸ ಮತದಾರರು ಮತ ಚಲಾಯಿಸಿದ್ದರು ಇದಕ್ಕೆ ಕಾರಣ ಮತದಾನದ ವಯಸ್ಸನ್ನು 21ರಿಂದ 18ಕ್ಕೆ ಇಳಿಸಿದ್ದು ಅದು ಬಿಟ್ಟರೆ 2014ರ ಚುನಾವಣೆಯಲ್ಲಿ ಮೋದಿ ಅಮಿತ್ ಷಾ ಬಂದ ನಂತರ ಏಕಾಏಕಿ 13 ಕೋಟಿ ಹೊಸ ಮತದಾರರು ಮತ ಚಲಾಯಿಸುತ್ತಾರೆ ಇದು ಹೇಗೆ ಎಂದು ಚುನಾವಣಾ ಆಯೋಗವೇ ತಿಳಿಸಬೇಕು ಅಥವಾ ಇದಕ್ಕೆ ಬಿಜೆಪಿಯ ಉತ್ತರ ನೀಡಬೇಕು ಎಂದು ಬ್ಲಾಕ್ ಯುವ ಕಾಂಗ್ರೆಸ್ ಅಧ್ಯಕ್ಷರಾದ ರತನ್ ಗೌಡ ಅರಗಿ ತಿಳಿಸಿದರು.

2014 ರಿಂದಲೇ ಮತಗಳ್ಳತನ ಮಾಡುತ್ತಾ ಬಂದಿರುವುದು ಇದರಿಂದಲೇ ನಮಗೆ ತಿಳಿಯುತ್ತದೆ.
1984ರ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಯು ದೇಶದಾದ್ಯಂತ ಒಂದು ಕೋಟಿ 82 ಲಕ್ಷ ವೋಟ್ ಪಡೆದಿತ್ತು ಅಲ್ಲಿಂದ 25 ವರ್ಷಗಳ ನಂತರ ಅಂದರೆ 2009ರಲ್ಲಿ ಬಿಜೆಪಿ ಪಡೆದಿದ್ದು ಏಳು ಕೋಟಿ 84 ಲಕ್ಷ ಅಂದರೆ ಈ 25 ವರ್ಷದಲ್ಲಿ ಆರು ಕೋಟಿ ಎರಡು ಲಕ್ಷ ಮತದಾರರನ್ನು ಮಾತ್ರ ಹೆಚ್ಚಿಸಿಕೊಂಡಿತ್ತು ಬಿಜೆಪಿ.
ಆದರೆ ಮೋದಿ ಅಮಿತ್ ಶಾ ಬಂದ ಮೇಲೆ 2014ರ ಲೋಕಸಭಾ ಚುನಾವಣೆಯಲ್ಲಿ 17 ಕೋಟಿ 17000 ವೋಟ್ ಹೆಚ್ಚಳವಾಗಿದ್ದು ಅಂದರೆ ಐದೇ ವರ್ಷಕ್ಕೆ 9 ಕೋಟಿ 33 ಲಕ್ಷ ಹೆಚ್ಚಳವಾಗಿದ್ದು ಹೇಗೆ ಈ ಮತಗಳು ಎಲ್ಲಿಂದ ಬಂದವು ಎಂಬುದೇ ರಾಹುಲ್ ಗಾಂಧಿಯವರ ಪ್ರಶ್ನೆ ಮತ್ತು ಸಾಮಾನ್ಯ ಜನರ ಪ್ರಶ್ನೆಯೇ ಕೂಡ ಆಗಿದೆ.

ಇಂದು ದೇಶದ ಪ್ರಧಾನ ಮಂತ್ರಿಯವರ ಜನ್ಮದಿನವನ್ನು ಯುವ ಕಾಂಗ್ರೆಸ್ ವತಿಯಿಂದ ನಿರುದ್ಯೋಗ ದಿನಾಚರಣೆ ಎಂದು ಆಚರಿಸಲಾಗುತ್ತಿದೆ ಕಾರಣ ಅಧಿಕಾರಕ್ಕೆ ಬರುವ ಮೊದಲು ದೇಶದ ಯುವಕರಿಗೆ ಪ್ರತಿವರ್ಷ 2 ಕೋಟಿ ಉದ್ಯೋಗ ಕೊಡುವುದಾಗಿ ಸುಳ್ಳು ಹೇಳಿ ದೇಶದ ಯುವಕರಿಗೆ ಮೋಸ ಮಾಡಿದ್ದಾರೆ ಈ ಸುಳ್ಳಿನ ಪ್ರಧಾನ ಮಂತ್ರಿಯವರು ಎಂದು ಆಕ್ರೋಶ ವ್ಯಕ್ತಪಡಿಸಿದರು.
