Tuesday, August 11, 2026
Homeಜಿಲ್ಲಾಸುದ್ದಿಭಾರತ ಶಿಕ್ಷಣ ರತ್ನ ಪ್ರಶಸ್ತಿಗೆ ಭಾಜನರಾದ ಮೂಡಿಗೆರೆಯ ಬೆಥನಿ ಶಾಲೆಯ ಕನ್ನಡ ಶಿಕ್ಷಕಿ ಡಾ. ವಿದ್ಯಾ!

ಭಾರತ ಶಿಕ್ಷಣ ರತ್ನ ಪ್ರಶಸ್ತಿಗೆ ಭಾಜನರಾದ ಮೂಡಿಗೆರೆಯ ಬೆಥನಿ ಶಾಲೆಯ ಕನ್ನಡ ಶಿಕ್ಷಕಿ ಡಾ. ವಿದ್ಯಾ!

Telegram Group
Join Now

ಮೂಡಿಗೆರೆ: Anyelp group ರವರು 2025ನೇ ಸಾಲಿನ ಸರ್ವಪಲ್ಲಿ ರಾಧಾಕೃಷ್ಣನ್ ಅವರ ನೆನಪಿನ ಪ್ರಯುಕ್ತ ಭಾರತದ ವಿವಿಧ ಜಿಲ್ಲೆಗಳಿಂದ ಶಿಕ್ಷಕರಾಗಿ ಹಾಗೂ ಕಲಾ ಕ್ಷೇತ್ರದಲ್ಲಿ ಸೇವೆಯನ್ನು ಮಾಡುತ್ತಿರುವಂತಹ ಅತ್ಯುತ್ತಮವಾದ ಶಿಕ್ಷಕರನ್ನು ಆಯ್ಕೆ ಮಾಡಲಾಯಿತು.

ಅದೇ ರೀತಿ ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲೂಕಿನ ಬೆಥನಿ ಶಾಲೆಯ ಕನ್ನಡ ಶಿಕ್ಷಕಿ ಹಾಗೂ ಕಲಾಕ್ಷೇತ್ರದಲ್ಲಿ ಈಗಾಗಲೇ ಅನೇಕ ಸಾಧನೆ ಮಾಡಿರುವ ಡಾ. ವಿದ್ಯಾ. ಕೆ ಇವರು ಆಯ್ಕೆಯಾಗಿದ್ದಾರೆ

ಇವರಿಗೆ ಸೆಪ್ಟೆಂಬರ್ 12 ರಂದು ಬೆಂಗಳೂರಿನ ವಸಂತ ನಗರದಲ್ಲಿರುವ ಅಂಬೇಡ್ಕರ್ ಭವನದಲ್ಲಿ ಅದ್ದೂರಿಯಾಗಿ ಗಣ್ಯರ ಸಮ್ಮುಖದಲ್ಲಿ ಭಾರತ ಶಿಕ್ಷಣ ರತ್ನ ಪ್ರಶಸ್ತಿಯನ್ನು ಕನ್ನಡ ಚಿತ್ರನಟ ಚೇತನ್ ಅವರು ನೀಡಿ ಗೌರವಿಸಲಾಗಿತ್ತು.

ಡಾಕ್ಟರ್ ವಿದ್ಯಾ ಅವರು ಬಹುಮುಖ ಪ್ರತಿಭೆಯಾಗಿದ್ದು, ನಿರೂಪಕಿ, ಗಾಯಕಿಯಾಗಿ ಅಲ್ಲದೆ ಮಲೇಶಿಯಾದಲ್ಲಿ ಭರತನಾಟ್ಯ ನೃತ್ಯ ಪ್ರದರ್ಶನ ನೀಡಿ ಮೆಚ್ಚುಗೆ ಪಾತ್ರರಾಗಿದ್ದಾರೆ.

ಶಿಕ್ಷಕಿ ವಿದ್ಯಾ ಅವರು ಶಿಕ್ಷಣ ಕ್ಷೇತ್ರ, ಶಿಕ್ಷಕ ವೃತ್ತಿಯಿಂದ ತಾಲ್ಲೂಕಿಗೂ ಕೀರ್ತಿ ತಂದಿದ್ದಾರೆ ಇವರ ಸಾಧನೆಗೆ ಬೇಥನಿ ಶಾಲಾ ಆಡಳಿತ ಮಂಡಳಿ ಸಂತಸ ವ್ಯಕ್ತಪಡಿಸದ್ದು ಅಭಿನಂದನೆ ತಿಳಿಸಿದ್ದಾರೆ.

ವರದಿ :ಪುನೀತ್ ಕಡಿದಾಳ್ 
9483811948

RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular

Recent Comments