Tuesday, August 11, 2026
Homeಜಿಲ್ಲಾಸುದ್ದಿಕೊಪ್ಪ: ಕಾಡಾನೆಗಳ ಹಾವಳಿ ತಡೆಯಲು ಶಾಶ್ವತ ಪರಿಹಾರ ಹುಡುಕುವಂತೆ ಒತ್ತಾಯ!

ಕೊಪ್ಪ: ಕಾಡಾನೆಗಳ ಹಾವಳಿ ತಡೆಯಲು ಶಾಶ್ವತ ಪರಿಹಾರ ಹುಡುಕುವಂತೆ ಒತ್ತಾಯ!

Telegram Group
Join Now

ಎನ್‌ ಆರ್‌ ಪುರ: ಶೃಂಗೇರಿ ಕ್ಷೇತ್ರದ ಕೊಪ್ಪ, ಬಾಳೆಹೊನ್ನೂರು ಭಾಗದಲ್ಲಿ ಓಡಾಡುತ್ತಿರುವ ಕಾಡಾನೆಗಳನ್ನು ತಕ್ಷಣ ಸ್ಥಳಾಂತರಿಸುವಂತೆ ಜೆಡಿಎಸ್‌ ರಾಜ್ಯ ಉಪಾಧ್ಯಕ್ಷ ಸುಧಾಕರ್‌ ಶೆಟ್ಟಿ ಅವರು ಆಗ್ರಹಿಸಿದ್ದಾರೆ. ಈಗ ಕಾಡಾನೆಗಳ ಸಮಸ್ಯೆ ದೊಡ್ಡದಾಗಿದೆ. ಈಗಾಗಲೇ 5 ಜನ ಮೃತಪಟ್ಟಿದ್ದಾರೆ ಹಾಗೆ ಅನೇಕ ಜನರ ಬೆಳೆಗಳು ಕೂಡ ನಾಶವಾಗಿದೆ ಎಂದು ಹೇಳಿದರು .

ಪರಿಹಾರ ಕೇಳಿದರೆ ಅರಣ್ಯ ಇಲಾಖೆ 3 – 4 ಸಾವಿರ ನೀಡುತಾರೆ ಹಾಗೆ ಶಾಸಕ ಟಿ.ಡಿ ರಾಜೇಗೌಡ ಅವರು ಶಾಶ್ವತವಾಗಿ ಸಮಸ್ಯೆಯನ್ನು ಬಗೆಹರಿಸುತ್ತೇನೆ ಎಂದಿದ್ದರು ಆದರೆ ಅವರು ಬಗೆಹರಿಸಿಲ್ಲ. ರೈಲ್ವೇ ಬ್ಯಾರಿಕೇಡ್‌ , ಸೋಲಾರ್‌ ಬೇಲಿ, ಆನೆ ಕಂದಕವನ್ನು ನಿರ್ಮಿಸಿಲ್ಲ.

ಕಾಡಾನೆಗಳು ಕೊಪ್ಪ ಸಮೀಪದ ಪೆಟ್ರೋಲ್‌ ಬಂಕ್‌ ಸಮೀಪ ಹಾದು ಹೋಗುತ್ತಿವೆ ಇದರಿಂದ ಜನ ಭಯ ಭೀತರಾಗಿದ್ದಾರೆ. ಅರಣ್ಯ ಸಚಿವರಿಗೆ ಮಲೆನಾಡಿನ ಜನರ ಕಷ್ಟ ಗೊತ್ತಿಲ್ಲ ತಕ್ಷಣ ಶಾಸಕರಾದ ಟಿ.ಡಿ ರಾಜೇಗೌಡ ಅವರು ಕಾಡಾನೆ ಸ್ಥಳಾಂತರಕ್ಕೆ ತಕ್ಷಣ ಶಾಶ್ವತ ಪರಿಹಾರ ಸೂಚಿಸಲೇ ಬೇಕು ಎಂದು ಒತ್ತಾಯಿಸಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular

Recent Comments