ಹಾಸನ: ಹೊಳೆನರಸೀಪುರ ತಾಲೂಕಿನ ಹಳ್ಳಿ ಮೈಸೂರು ಗ್ರಾಮದ ನಾಡ ಕಚೇರಿಯ ಗ್ರಾಮ ಲೆಕ್ಕಾಧಿಕಾರಿ ವಿಎ ರಮೇಶ್ ಲಂಚ ಪಡೆಯುವಾಗ ಲೋಕಾಯಕ್ತ ಬಲೆಗೆ ಬಿದ್ದಿದ್ದಾರೆ.
ಮುದ್ದೇಗೌಡ ಎಂಬುವರ ಪೌತಿ ಖಾತೆ ಮಾಡಿಕೊಡುವ ನೆಪದಲ್ಲಿ ರಮೇಶ್ ಒಟ್ಟು 4 ಸಾವಿರ ಲಂಚ ಕೇಳಿದ್ದ ಎಂದು ತಿಳಿದುಬಂದಿದೆ. ಮೊದಲ ಹಂತದಲ್ಲೇ 1 ಸಾವಿರ ಲಂಚದ ಹಣ ಪಡೆದಿದ್ದ, ಇಂದು ನಾಡಕಚೇರಿಯಲ್ಲಿ ಉಳಿದ 3 ಸಾವಿರ ಹಣವನ್ನು ಸ್ವೀಕರಿಸುವ ವೇಳೆ ಲೋಕಾಯುಕ್ತ ಪೊಲೀಸರು ಟ್ರ್ಯಾಪ್ ಮಾಡಿ ಬಲೆ ಬೀಸಿದ್ದಾರೆ.
ಹಣದ ಸಮೇತ ರಮೇಶ್ ಅವರನ್ನ ಲೋಕಾಯುಕ್ತ ಪೊಲೀಸರು ಹಿಡಿದಿದ್ದಾರೆ. ಲೋಕಾಯುಕ್ತ ಪೊಲೀಸರಾದ ಶಿಲ್ಪಾ ಹಾಗೂ ಚಂದ್ರಶೇಖರ್ ಅವರ ನೇತೃತ್ವದಲ್ಲಿ ಯಶಸ್ವಿಯಾಗಿ ಕಾರ್ಯಾಚರಣೆ ನಡೆದಿದೆ.
