Saturday, August 8, 2026
Homeಜಿಲ್ಲಾಸುದ್ದಿಕೊಪ್ಪ: ಜಯಪುರ ಸಾರ್ವಜನಿಕ ಆಸ್ಪತ್ರೆಯನ್ನು ಶೀಘ್ರವಾಗಿ ಉದ್ಘಾಟಿಸುವಂತೆ ಒತ್ತಾಯ!

ಕೊಪ್ಪ: ಜಯಪುರ ಸಾರ್ವಜನಿಕ ಆಸ್ಪತ್ರೆಯನ್ನು ಶೀಘ್ರವಾಗಿ ಉದ್ಘಾಟಿಸುವಂತೆ ಒತ್ತಾಯ!

Telegram Group
Join Now

ಕೊಪ್ಪ: ಜಯಪುರದ ಸಾರ್ವಜನಿಕ ಆಸ್ಪತ್ರೆಯನ್ನು ಹದಿನೈದು ದಿನಗಳೊಳಗೆ ಉದ್ಘಾಟನೆ ಮಾಡಿ ಸಾರ್ವಜನಿಕರಿಗೆ ಅನುಕೂಲವಾಗುವಂತೆ ಮಾಡಿಕೊಡಬೇಕು ಎಂದು ದಿಶಾ ಸಮಿತಿ ಸಂಘಟನೆ ಸದಸ್ಯರಾದ ಮಣಿಕಂಠನ್‌ ಕಂದಸ್ವಾಮಿ ಆಗ್ರಹಿಸಿದ್ದಾರೆ.

ಹೌದು .. ಕಳೆದ ಸರ್ಕಾದ ಅವಧಿಯಲ್ಲಿ ಆರಂಭವಾದ ಈ ಆಸ್ಪತ್ರೆ ಕಾಮಗಾರಿ ಮುಗಿದು ಅನೇಕ ತಿಂಗಳುಗಳಾದ್ರು ಇನ್ನೂ ಉದ್ಘಾಟನೆಗೊಂಡಿಲ್ಲ ಹಾಗೆ ಸಾಋವಜನಿಕರು ಸುಮಾರು 20 ಕಿ ಮೀ ದೂರದ ವ್ಯಾಪ್ತಿಯ ಜನತೆಗೆ ಸರಿಯಾದ ತುರ್ತು ಚಿಕಿತ್ಸೆ ಸಿಗದೇ ಪರದಾಡಬೇಕಾದ ಸ್ಥಿತಿ ನಿರ್ಮಾಣವಾಗಿದೆ.

ಕಳೆದ ಬಾರಿ ಉದ್ಘಾಟನೆಗಾಗಿ ಪ್ರತಿಭಟನೆ ನಡೆಸಿದಾಗ ಉದ್ಘಾಟನಾ ದಿನಾಂಕವನ್ನು ಗೊತ್ತು ಮಾಡಿ ಆನಂತರ ಕಾರಣಗಳಿಂದ ಮುಂದೂಡಿದ್ದರೂ ಆದರೆ ಇಲ್ಲಿಯವರೆಗೆ ಇದರ ಬಗ್ಗೆ ಯಾವುದೇ ಒಂದು ಪ್ರಗತಿಪರ ಯೋಚನೆ ಮಾಡುತ್ತಿಲ್ಲ ಇದರಿಂದ ಹಲವು ಸಂಶಯಗಳು ಉಂಟಾಗುತ್ತಿವೆ ಈಗ ನೀವು ಉದ್ಘಾಟನೆಯ ದಿನಾಂಕ ಗೊತ್ತುಪಡಿಸುವವರೆಗೂ ನಾವು ಪ್ರತಿಭಟನೆಯನ್ನು ಕೈ ಬಿಡುವುದಿಲ್ಲವೆಂದು ಆಗ್ರಹಿಸಿದ್ದಾರೆ.

ಈ ಹಿನ್ನೆಲೆಯಲ್ಲಿ ಸ್ಥಳೀಯ ವೈದ್ಯಾಧಿಕಾರಿ ಹಾಗೂ ಡಿಎಚ್‌ ಒ ದೂರವಾಣಿ ಮೂಲಕ ಮಾತನಾಡಿ ಹದಿನೈದು ದಿನದೊಳಗಾಗಿ ಉದ್ಘಾಟನೆ ಮಾಡಿ ಸಾರ್ವಜನಿಕರಿಗೆ ಸೇವೆಯನ್ನು ಪ್ರಾಂಭಿಸುವುದಾಗಿ ಭರವಸೆ ನೀಡಿದರು.

RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular

Recent Comments