Wednesday, February 11, 2026
Homeಜಿಲ್ಲಾಸುದ್ದಿಕೊಪ್ಪ: ಲೋಕನಾಥಪುರ ಸರ್ಕಾರಿ ಪ್ರೌಢಶಾಲೆಯ ಕನ್ನಡ ಶಿಕ್ಷಕ ಆರ್‌ ಡಿ ರವೀಂದ್ರರಿಗೆ ಗೌರವ ಸನ್ಮಾನ!

ಕೊಪ್ಪ: ಲೋಕನಾಥಪುರ ಸರ್ಕಾರಿ ಪ್ರೌಢಶಾಲೆಯ ಕನ್ನಡ ಶಿಕ್ಷಕ ಆರ್‌ ಡಿ ರವೀಂದ್ರರಿಗೆ ಗೌರವ ಸನ್ಮಾನ!

ಕೊಪ್ಪ ತಾಲೂಕು ಲೋಕನಾಥಪುರ ಸರ್ಕಾರಿ ಪ್ರೌಢಶಾಲೆಯ ಕನ್ನಡ ಶಿಕ್ಷಕರು ಹಾಗೂ ರಾಜ್ಯ ಸಂಪನ್ಮೂಲ ವ್ಯಕ್ತಿಗಳು ಮತ್ತು ತಾಲೂಕು ಮತ್ತು ಜಿಲ್ಲಾ ಮಟ್ಟದ ಪ್ರಶಸ್ತಿಗಳನ್ನು ಸ್ವೀಕರಿಸಿದ ಆರ್‌ ಡಿ ರವೀಂದ್ರ ಅವರಿಗೆ ಸನ್ಮಾನ ಮಾಡಲಾಯಿತು.

ಹೌದು .. ಸೆಪ್ಟಂಬರ್‌ 19ರಂದು ಶುಕ್ರವಾರ ಆರ್‌ ಡಿ ರವೀಂದ್ರ ಅವರಿಗೆ 2025 ,26 ನೇ ಸಾಲಿನ ರಾಜ್ಯ ಮಟ್ಟದ ಗುರುಶ್ರೀ ಪ್ರಶಸ್ತಿಯು ಲಭಿಸಿದ್ದು ಇವರನ್ನು ಸನ್ಮಾನಿಸಿ ಗೌರವಿಸಿ ಅಭಿನಂದನೆಗಳು ತಿಳಿಸಿದರು.

ಭಾರತೀಯ ಜನತಾ ಪಾರ್ಟಿ ಕೊಪ್ಪ ಮಂಡಲದ ಅಧ್ಯಕ್ಷರಾದ ಹೆಚ್ ಕೆ ದಿನೇಶ್ ರವರು ಮತ್ತು ಹೆಚ್ ಆರ್ ಜಗದೀಶ್ ನುಗ್ಗಿ ರವರು ಮಂಡಲದ ಸರ್ವ ಸದಸ್ಯರು ಹಾಗೂ ತುಳುವಿನಕೊಪ್ಪ ಹಾಗೂ ಭುವನಕೋಟೆ ಗ್ರಾಮ ಪಂಚಾಯತಿಯ ಅಧ್ಯಕ್ಷರು ಮತ್ತು ಉಪಾಧ್ಯಕ್ಷರು ಸರ್ವ ಸದಸ್ಯರು ಮತ್ತು ಎಸ್‌ಡಿಎಂಸಿಯ ಅಧ್ಯಕ್ಷರು ಮತ್ತು ಸರ್ವ ಸದಸ್ಯರು ಮತ್ತು ಗ್ರಾಮಸ್ಥರು ಶಾಲೆಗೆ ತೆರಳಿ ಮುಖ್ಯೋಪಾಧ್ಯಾಯರು ಮತ್ತು ಸಹ ಶಿಕ್ಷಕರು ಮತ್ತು ಮಕ್ಕಳ ಸಮ್ಮುಖದಲ್ಲಿ ಇವರನ್ನು ಗೌರವಿಸಿ ಅಭಿನಂದನೆಗಳು ತಿಳಿಸಿದರು.

RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular

Recent Comments

error: Content is protected !!