Saturday, August 8, 2026
Homeಜಿಲ್ಲಾಸುದ್ದಿದಾರದಹಳ್ಳಿ ಪ್ರಾಥಮಿಕ ವ್ಯವಸಾಯ ಸಹಕಾರ ಬ್ಯಾಂಕ್ ನಿವ್ವಳ ಲಾಭದಾಯಕವಾಗಿದೆ : ರವಿ ಹಾಲೂರು

ದಾರದಹಳ್ಳಿ ಪ್ರಾಥಮಿಕ ವ್ಯವಸಾಯ ಸಹಕಾರ ಬ್ಯಾಂಕ್ ನಿವ್ವಳ ಲಾಭದಾಯಕವಾಗಿದೆ : ರವಿ ಹಾಲೂರು

Telegram Group
Join Now

ಮೂಡಿಗೆರೆ: ತಾಲೂಕಿನ ದಾರದಹಳ್ಳಿಯ ಪ್ತಾಥಾಮಿಕ ಕೃಷಿ ಪತ್ತಿನ ಸಹಕಾರ ಸಂಘ ಶಾಖೆ 2024-25 ನೇ ಸಾಲಿನ ವಾರ್ಷಿಕ ಮಹಾ ಸಭೆಯನ್ನು ಸಂಘದ ಸಭಾಂಗಣದಲ್ಲಿ ಹಮ್ಮಿಕೊಳ್ಳಲಾಯಿತು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ರವಿ ಹಾಲೂರು ನಿಮ್ಮೆಲ್ಲರ ಸಹಕಾರದಿಂದಾಗಿ ಸಂಘವು ಲಾಭಧಾಯಕವಾಗಿದೆ ಹಾಗೆ ಒಳ್ಳೆಯ ರೀತಿಯಲ್ಲಿ ಕಾರ್ಯನಿರ್ವಹಿಸುತ್ತಿದೆ ಹಿರಿಯರ ಮಾರ್ಗದರ್ಶನ ಅತ್ಯಾಮೂಲ್ಯವಾಗಿದೆ ಎಂದರು.

ಹಾಗೆ ರೈತರ ಹಿತಾ ದೃಷ್ಟಿಯಿಂದ ಹೆಚ್ಚು ಸಾಲ ನೀಡಲು ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್ ಎರಡು ಕೋಟಿ ಸಾಲಕ್ಕೆ ಬೇಡಿಕೆ ಇಟ್ಟಿರುವುದಾಗಿ ತಿಳಿಸಿದರು. ಮುಂದಿನ ದಿನಗಳಲ್ಲಿ ಪ್ರಾಮಾಣಿಕನ್ನಾಗಿ ಸಂಘವನ್ನು ಮತ್ತಷ್ಟು ಸದೃಢತೆಯಲ್ಲಿ ಮುಂದುವರೆಸಿಕೊಂಡು ಹೋಗುವ ಭರವಸೆ ನೀಡಿದರು

ಇದೇ ಸಂದರ್ಭದಲ್ಲಿ ಪಿಯುಸಿ ಪರೀಕ್ಷೆಯಲ್ಲಿ ಶೇ. 93% ಅಂಕ ಪಡೆದು ಉತ್ತಿರ್ಣರಾಗಿ ದಾರದಹಳ್ಳಿ ಪಂಚಾಯಿತಿಯ ಕೀರ್ತಿ ಹೆಚ್ಚಿಸಿದ್ದಕ್ಕೆ ಅಬಚೂರಿನ ಸುರೇಶ್ ಗೌಡ ಹಾಗೂ ಶಿಕ್ಷಕಿ ಸಂಗೀತ ರವರ ಪುತ್ರಿ ಕುಮಾರಿ ಮಂದಿರ ಅವರನ್ನು ಶ್ಲಾಘಿಸಿ ಗಣ್ಯರು ಸುರೇಶ್ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು

ದಾರದಹಳ್ಳಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಬ್ಯಾಂಕ್ ಮೇಲ್ವಿಚಾರಕ ಸಂಪತ್ ದಾರದಹಳ್ಳಿ ಲೆಕ್ಕಾಚಾರದ ಅಂಕಿ ಅಂಶಗಳನ್ನು ಸಾರ್ವಜನಿಕರಿಗೆ ತಿಳಿಸಿದರು.

ಈ ಕಾರ್ಯಕ್ರಮದಲ್ಲಿ ಸಂಘದ ಉಪಾಧ್ಯಕ್ಷೇ ಶ್ರೀಮತಿ ಸುನೀತಾ ನಿರ್ದೆಶಕರಾದ ರಂಜನ್ ಅಜಿತ್ ಕುಮಾರ್, ದೀಪಕ್ ಕಡಿದಾಳು ಧಾರ್ಮಿಕ, ಸುಮಿತ್ರಾ, ರಂಜಿತ್ ದಾರದಹಳ್ಳಿ, ವಿಕ್ರಂ ಗೌಡ, ರಂಜಿತ್ ಕೆಸವಳಲು, ಸಿದ್ದಯ್ಯ, ಸೀನ ಸೇರಿದಂತೆ ಬ್ಯಾಂಕ್ ಸಿಬ್ಬಂದಿಗಳಾದ ಶ್ರೀಮತಿ ಸ್ಮಿತಾ, ಆನಂದ್, ಶ್ರೀಮನ್, ವಿಘ್ನಶ್ ಅಶ್ವಥ್, ರಾಮಚಂದ್ರ ಡಿಸಿಸಿ ಬ್ಯಾಂಕ್ ಮೇಲ್ವಿಚಾರಕ ನಿತಿನ್ ಪಟೇಲ್ ಉಪಸ್ಥಿತರಿದ್ದರು.

ವರದಿ :ಪುನೀತ್ ಕಡಿದಾಳ್ 
9483811948

RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular

Recent Comments