Saturday, August 8, 2026
Homeಕ್ರೈಮ್ಕೆಮ್ಮಣ್ಣಗುಂಡಿ: ಸೆಲ್ಫಿ ಪ್ರಿಯರೇ ಗಮನಿಸಿ: ಸೆಲ್ಫಿ ತೆಗೆಯುವಾಗ ಪ್ರಪಾತಕ್ಕೆ ಬಿದ್ದ ವ್ಯಕ್ತಿ ಸಾವು!

ಕೆಮ್ಮಣ್ಣಗುಂಡಿ: ಸೆಲ್ಫಿ ಪ್ರಿಯರೇ ಗಮನಿಸಿ: ಸೆಲ್ಫಿ ತೆಗೆಯುವಾಗ ಪ್ರಪಾತಕ್ಕೆ ಬಿದ್ದ ವ್ಯಕ್ತಿ ಸಾವು!

Telegram Group
Join Now

ಚಿಕ್ಕಮಗಳೂರು: ಸೆಲ್ಫಿ ತೆಗೆದುಕೊಳ್ಳುವಾಗ ಪ್ರಪಾತಕ್ಕೆ ಬಿದ್ದ ವ್ಯಕ್ತಿ ಸಾವನ್ನಪ್ಪಿರುವ ದುರ್ಘಟನೆ ಚಿಕ್ಕಮಗಳೂರು ಜಿಲ್ಲೆ ತರೀಕೆರೆ ತಾಲೂಕಿನ ಕೆಮ್ಮಣ್ಣಗುಂಡಿಯಲ್ಲಿ ನಡೆದಿದೆ.

ಹೌದು.. ಪತ್ನಿ ಜೊತೆ ಸೆಲ್ಫಿ ತೆಗೆದುಕೊಳ್ಳುವ ನಡೆದ ಅವಘಡವಾಗಿದ್ದು ಸುಮಾರು 60 ಅಡಿ ಆಳದ ಪ್ರಪಾತಕ್ಕೆ ಬಿದ್ದು ಸಂತೋಷ್ ದುರ್ಮರಣ ಹೊಂದಿದ್ದಾರೆ.

ಶಿಕಾರಿಪುರ ಮೂಲದ ಸಂತೋಷ್ ತರೀಕೆರೆಯಲ್ಲಿ ಶಿಕ್ಷಕರಾಗಿದ್ದರು. ಸ್ಥಳಕ್ಕೆ ಅಗ್ನಿಶಾಮಕದಳ ಸಿಬ್ಬಂದಿ ಆಗಮಿಸಿ ಅವರ ಮೃತದೇಹವನ್ನ ಮೇಲಕ್ಕೆತ್ತಿದ್ದಾರೆ.

ಘಟನೆ ಸಂಬಂಧ ಲಿಂಗದಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಹಾಗಾಗಿ ಸೆಲ್ಫಿ ಪ್ರಿಯರೇ ಎಚ್ಚರವಹಿಸುವುದು ತುಂಬಾ ಒಳ್ಳೆಯದು. ಯಾರೇ ಆಗಲಿ ಹಿಂದೆ ಮುಂದೆ ನೋಡಿಕೊಂಡು ನಿಮ್ಮ ಜೀವ ನಿಮ್ಮ ಕೈಯಲ್ಲಿ ಇರತಕ್ಕದು ಹಾಗಾಗಿ ಸೆಲ್ಫಿ ತೆಗೆದುಕೊಳ್ಳುವಾಗ ಎಚ್ಚರವಹಿಸುವುದು ತುಂಬಾ ಒಳ್ಳೆಯದು ಎಂದು ಈ ಮೂಲಕ ಪಬ್ಲಿಕ್‌ ಇಂಪ್ಯಾಕ್ಟ್‌ ಮನವಿ ಮಾಡಲಾಗುತ್ತೆ.

RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular

Recent Comments