Tuesday, February 10, 2026
Homeಜಿಲ್ಲಾಸುದ್ದಿಶೃಂಗೇರಿ: ಕನ್ನಡ ಭವನದಲ್ಲಿ ಶೃಂಗಗಿರಿ ಜಾನಪದ ಉತ್ಸವ: ಸಮಾಜದ ಅಂಕುಡೊಂಕುಗಳನ್ನು ತಿದ್ದುವ ಶಕ್ತಿ ಜಾನಪದಕ್ಕಿದೆ

ಶೃಂಗೇರಿ: ಕನ್ನಡ ಭವನದಲ್ಲಿ ಶೃಂಗಗಿರಿ ಜಾನಪದ ಉತ್ಸವ: ಸಮಾಜದ ಅಂಕುಡೊಂಕುಗಳನ್ನು ತಿದ್ದುವ ಶಕ್ತಿ ಜಾನಪದಕ್ಕಿದೆ

ಶೃಂಗೇರಿ: ಕರ್ನಾಟಕ ಜಾನಪದ ಪರಿಷತ್ತು ಶೃಂಗೇರಿ ತಾಲೂಕು, ಚಿಕ್ಕಮಗಳೂರು ಜಿಲ್ಲೆ ವತಿಯಿಂದ ಶೃಂಗೇರಿಯ ಕನ್ನಡ ಭವನದಲ್ಲಿ ಶೃಂಗ ಗಿರಿ ಜಾನಪದ ಉತ್ಸವ ಮತ್ತು ಕರ್ನಾಟಕ ಜಾನಪದ ಪರಿಷತ್ತುಮಹಿಳಾ ಘಟಕ ಉದ್ಘಾಟನಾ ಸಮಾರಂಭವನ್ನು ಶುಕ್ರವಾರದಂದು ವಿಜೃಂಭಣೆಯಿಂದ ಹಮ್ಮಿಕೊಳ್ಳಲಾಗಿತ್ತು.

ಕಾರ್ಯಕ್ರಮ ಉದ್ಘಾಟನೆ ಮಾಡಿ ಮಾತನಾಡಿದ ನವೋದಯ ಶೈಕ್ಷಣಿಕ ಸಂಸ್ಥೆಯ ಅಧ್ಯಕ್ಷ ಎಚ್ಎಲ್ ತ್ಯಾಗರಾಜ ರಾವ್ ಅವರು, ಜಾನಪದ ಸಾಹಿತ್ಯ, ಸಂಗೀತ ಕಲೆ, ಸಂಸ್ಕೃತಿ ಇವೆಲ್ಲವೂ ಜೀವಂತವಾಗಿ ಮುಂದಿನ ಪೀಳಿಗೆಗೆ ವರ್ಗಾವಣೆಯಾಗಬೇಕಾದರೆ ಇಂದಿನ ಯುವಕ ಯುವತಿಯರ ಪಾತ್ರ ಬಹಳ ಪ್ರಮುಖವಾಗಿದೆ.

ಜಾನಪದ ಸಾಹಿತ್ಯ, ಸಂಗೀತಕ್ಕೆ, ಮಾನವನನ್ನು ನಾಗರಿಕನನ್ನಾಗಿ ಮಾಡಿ, ಸುಸಂಸ್ಕೃತ ವ್ಯಕ್ತಿತ್ವವನ್ನು ರೂಪಿಸುವ ಶಕ್ತಿ ಜಾನಪದ ಸಂಸ್ಕೃತಿ, ಸಂಗೀತ, ಸಾಹಿತ್ಯಕ್ಕೆ ಇದೆ. ಹಾಗಾಗಿ ಇಂದಿನ ಯುವಕ ಯುವತಿಯರು ವಿದ್ಯಾರ್ಥಿಗಳು, ಜಾನಪದ ವಿದ್ವಾಂಸರು, ಸಾಹಿತಿಗಳ, ಸಾಹಿತ್ಯವನ್ನು, ಹಾಡುಗಳನ್ನು,ಕಲಿತುಕೊಳ್ಳಬೇಕು ಅರ್ಥ ಮಾಡಿಕೊಳ್ಳಬೇಕು ಎಂದು ತಿಳಿಸಿ ಸಮಾಜದ ಅಂಕುಡೊಂಕುಗಳನ್ನು ತಿದ್ದುವ ಶಕ್ತಿ ಜಾನಪದಕ್ಕಿದೆ ಎಂದು ತಿಳಿಸಿದರು.

ಕರ್ನಾಟಕ ಜಾನಪದ ಪರಿಷತ್ತು ಜಿಲ್ಲಾಧ್ಯಕ್ಷ ಜಿ.ಬಿ ಸುರೇಶ್ ಮುಖ್ಯ ಅತಿಥಿಗಳಾಗಿ ಮಾತನಾಡುತ್ತಾಮತ್ತು ಮಹಿಳಾ ಘಟಕವನ್ನು ಉದ್ಘಾಟಿಸುತ್ತಾ…ಸ್ವಾಸ್ಥ ಸಮಾಜವನ್ನು ನಿರ್ಮಾಣವ ಶಕ್ತಿ ಜಾನಪದಕ್ಕಿದೆ ಎಂದು ತಿಳಿಸಿ ಶಿಷ್ಟ ಸಾಹಿತ್ಯ, ದಾಸ ಸಾಹಿತ್ಯ, ವಚನ ಸಾಹಿತ್ಯ, ದಲಿತ ಸಾಹಿತ್ಯ, ಬಂಡಾಯ ಸಾಹಿತ್ಯ, ಎಲ್ಲಾ ಸಾಹಿತ್ಯಗಳ ಮೂಲ ಬೇರು ಜಾನಪದವೇ ಆಗಿದೆ. ಮತ್ತು ಭಾರತೀಯ ಸಂಸ್ಕೃತಿ, ಕಲೆ,ಆಹಾರ ಪದ್ಧತಿ,ಸಾಹಿತ್ಯ,ಸಂಗೀತ, ಆಚಾರ ವಿಚಾರ,ಉಡುಗೆ, ತೊಡುಗೆ, ಕೃಷಿ,ಜೀವನ ಶೈಲಿ, ಸಾಮಾಜಿಕ ಮತ್ತು ಆರ್ಥಿಕ, ವೈಜ್ಞಾನಿಕ ನೆಲೆಗಟ್ಟಿನ ಮೂಲಭೇರು ಜಾನಪದವೇ ಆಗಿದೆಎಂದು ತಿಳಿಸಿದರು.

ಮಹಿಳಾ ಘಟಕದ ಅಧ್ಯಕ್ಷ ರೇಣುಕಾ ರಾಮಪ್ಪ ರವರನ್ನು ಆಯ್ಕೆ ಮಾಡಲಾಯಿತು ಕರ್ನಾಟಕ ಜಾನಪದ ಪರಿಷತ್ತು ತಾಲೂಕ್ ಅಧ್ಯಕ್ಷ ಅಂಗುರುಡಿ ದಿನೇಶ್ ಮಾತನಾಡಿ ಶಾಲಾ ಕಾಲೇಜುಗಳಲ್ಲಿ, ಸಾರ್ವಜನಿಕ ಮತ್ತು ಖಾಸಗಿ ವೇದಿಕೆಗಳಲ್ಲಿ ಜಾನಪದ ಕಲೆ ಸಾಹಿತ್ಯ ಸಂಗೀತಕ್ಕೆ ಹೆಚ್ಚು ಒತ್ತನ್ನು ನೀಡಬೇಕಾಗಿದೆ ಎಂದು ಅಭಿಪ್ರಾಯ ಪಟ್ಟರು.

ವಾಸ್ತವಿಕವಾಗಿ ಸಾಹಿತಿ ಶೃಂಗೇರಿ ಶಿವಣ್ಣ ಮಾತನಾಡಿ, ಮನುಷ್ಯನು ನಾಗರಿಕನಾಗಿ ವೈಜ್ಞಾನಿಕವಾಗಿ. ಸಾಮಾಜಿಕವಾಗಿ. ಸಾಂಸ್ಕೃತಿಕವಾಗಿ. ಸಂಸ್ಕೃತಿ ಆಚಾರ ವಿಚಾರ ಸೊಗಡು,ಕಲೆ ಸಾಹಿತ್ಯ ಸಂಗೀತ ಇನ್ನೂ ಗ್ರಾಮಾಂತರ ಪ್ರದೇಶದಲ್ಲಿ ಜೀವಂತವಾಗಿ ಉಳಿದಿದೆ, ಗ್ರಾಮಾಂತರ ಪ್ರದೇಶದ ವಿದ್ಯಾರ್ಥಿಗಳು ಹೆಚ್ಚು ಆಸಕ್ತಿಯಿಂದ ಈ ಸಂಸ್ಕೃತಿಯನ್ನು ಉಳಿಸಿ ಬೆಳೆಸಬೇಕೆಂದರು.

ಹಾಗೆ ಪಟ್ಟಣ ಪಂಚಾಯಿತಿ ಅಧ್ಯಕ್ಷ ವೇಣುಗೋಪಾಲ್ ಮಾತನಾಡಿ, ಶೃಂಗೇರಿ ತಾಲೂಕಿನಲ್ಲಿ ಬಹಳಷ್ಟು ಜನಪದ ಕಲೆಗಳು ಬೆಳೆದು ಬಂದಿದ್ದು ಅವುಗಳನ್ನು ಇಂದಿನ ಯುವಕ ಯುವತಿಯರು ಮುಂದಿನ ತಲೆಮಾರಿಗೆ ವರ್ಗಾಯಿಸಬೇಕೆಂದು ತಿಳಿಸಿದರು. ಮತ್ತು ಹಿರಿಯ ಜನಪದ ಕಲಾವಿದರಿಗೆ ಸರ್ಕಾರ ಮಾಶಾಸನ ನೀಡುವುದರೊಂದಿಗೆ ಆರ್ಥಿಕ ಶಕ್ತಿ ತುಂಬಬೇಕೆಂದು ತಿಳಿಸಿದರು.

ಹಿರಿಯ ಜನಪದ ಕಲಾವಿದರು ಮತ್ತು ಸಾಹಿತಿಗಳಾದ ಶ್ರೀಮತಿ ಪದ್ಮಾವತ್ತಮ್ಮ ಶ್ರೀಮತಿ ಪುಷ್ಪ ಪ್ರಕಾಶ್, ಸುರೇಶ್ ಶಂಕು ರವರನ್ನು, ಪ್ರಸನ್ನ ಭಟ್ರು, ಸುನಿತಾ ನವೀನ ಗೌಡ, ಶೂನ್ಯ ರಮೇಶ ಆನಂದ, ಸ್ವಾಮಿ ಸನ್ಮಾನಿಸಲಾಯಿತು.

ಸಮಾರಂಭದಲ್ಲಿ ಶೃಂಗೇರಿಯ ಟಿಎಪಿಸಿಎಂಎಸ್ ಅಧ್ಯಕ್ಷ ಕೆ ಎಸ್ ರಮೇಶ್,ಗ್ರಾಮ ಪಂಚಾಯಿತಿ ಅಧ್ಯಕ್ಷ ಪ್ರವೀಣ್ ಪೂಜಾರ್, ಪ್ರಕಾಶ್ ಕೆ ಆರ್, ಶಂಕರ್ ಬಿ. ಯೋಗಪ್ಪ, ವಿಶ್ವನಾಥ್, ವೇಣುಗೋಪಾಲ್ ಮುಂತಾದವರು ಉಪಸ್ಥಿತರಿದ್ದರು.

ವರದಿ: ವಿಠಲ್‌ ಶೃಂಗೇರಿ

7676798969

RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular

Recent Comments

error: Content is protected !!