ಮೂಡಿಗೆರೆ: ಮೈಸೂರು ದಸರಾ ಉದ್ಘಾಟನೆ ವಿಚಾರವಾಗಿ ಯತ್ನಾಳ್ ನಾಲಿಗೆ ಬಿಗಿ ಹಿಡಿದು ಹೇಳಿಕೆ ನೀಡುವಂತೆ DSS ಜಿಲ್ಲಾಧ್ಯಕ್ಷ ಸುಂದ್ರೇಶ್ ಹೊಯ್ಸಳಲು ಎಚ್ಚರಿಕೆ ನೀಡಿದ್ದಾರೆ.
ಈ ಕುರಿತು ಪಬ್ಲಿಕ್ ಇಂಪ್ಯಾಕ್ಟ್ ಗೆ ಜೊತೆ ಪ್ರತಿಕ್ರಿಯಿಸಿದ ಅವರು, ಯತ್ನಾಳ್ ನೀಡಿರುವುದು ಅವರವರ ಯೊಗ್ಯತೆಗೆ ಭಿನ್ನವಾಗಿದೆ. ಈ ದೇಶದ ಮೂಲ ನಿವಾಸಿಗಳಾದ ದಲಿತರ ಸಾಧನೆಗಳ ಬಗ್ಗೆ ತಿಳಿದುಕೊಳ್ಳಬೇಕಾದ ಅವಶ್ಯಕತೆಯಿದೆ
ಎಲುಬಿಲ್ಲದ ನಾಲಿಗೆ ಏನೂ ಬೇಕಾದರೂ ಮಾತನಾಡಬೇಕಿಂದಿದ್ದರೆ ಯತ್ನಾಳ್ ರವರ ಮೂರ್ಖತನ ಎಂದರು. ಈ ದೇಶದಲ್ಲಿ ಈ ರೀತಿಯ ಹೇಳಿಕೆ ದಲಿತರಿಗೆ ಅವಮಾನವಾಗಿದೆ.ಯತ್ನಾಳ್ ಗೆ ಕಾನೂನು ರೀತಿಯ ಕ್ರಮಕೈಗೊಳ್ಳಬೇಕು ಎಂದು ಅಗ್ರಹಿಸಿದರು.
ದಲಿತರ ವಿರುದ್ಧ ಇವರ ಹೇಳಿಕೆ ಖಂಡನೀಯ. ಇಂತಹವರ ವಿರುದ್ದ ಬೀದಿಯಲಿ ನಿಂತು ಹೊರಾಟಮಾಡಬೇಕಾಗಿರುವುದು ಅನಿವಾರ್ಯವಾಗಿದೆ.
ಮೈಸೂರು ದಲಿತರ ಪಾಲಿನ ಸಮಾನತೆಯ ಸಂಕೇತವು ಆಗಿದ್ದು ನಾಲ್ವಡಿ ಕೃಷ್ಣರಾಜ ಒಡೆಯರ್ ದಲಿತರ ಏಳಿಗೆಗಾಗಿ,ಸಮಾನತೆಗಾಗಿ ಶ್ರಮಿಸಿರುವುದು ಪ್ರತಿಯೊಬ್ಬನು ನಾಗರಿಕನಿಗೂ ತಿಳಿದಿದೆ.ಒಡೆಯರವರ ಇತಿಹಾಸನ್ನು ಯತ್ನಾಳ್ ಓದಿ ತಿಳಿದುಕೊಳ್ಳಬೇಕು ಎಂದರು.
ದಲಿತ ಸಮುದಾಯದ ವಿರುದ್ಧ ಅವಹೇಳನ ಹೇಳಿಕೆ ಸರಿಯಲ್ಲ ಕೂಡಲೇ ಸಮುದಾಯವನ್ನು ಕ್ಷಮೆಯಾಚಿಸಬೇಕು ಇಲ್ಲವಾದಲ್ಲಿ ರಾಜ್ಯದ್ಯಾಂತ ಉಗ್ರ ಪ್ರತಿಭಟನೆಗೆ ಮುಂದಾಗಬೇಕಾಗುತ್ತದೆ. ಎಂದು ಎಚ್ಚರಿಕೆ ನೀಡಿದರು.
