Tuesday, August 11, 2026
Homeಕ್ರೈಮ್ಚಿಕ್ಕಮಗಳೂರು: ಲಾರಿ ರಿವರ್ಸ್ ತೆಗೆಯುವಾಗ ಕಾಂಪೌಂಡ್ ಗೆ ಡಿಕ್ಕಿ: ವ್ಯಕ್ತಿ ಸಾವು!

ಚಿಕ್ಕಮಗಳೂರು: ಲಾರಿ ರಿವರ್ಸ್ ತೆಗೆಯುವಾಗ ಕಾಂಪೌಂಡ್ ಗೆ ಡಿಕ್ಕಿ: ವ್ಯಕ್ತಿ ಸಾವು!

Telegram Group
Join Now

ಚಿಕ್ಕಮಗಳೂರು: ಲಾರಿ ರಿವರ್ಸ್ ತೆಗೆಯುವಾಗ ಚಾಲಕನ ಬೇಜವಾಬ್ದಾರಿಯಿಂದ ವ್ಯಕ್ತಿ ಸಾವನಪ್ಪಿರುವ ಘಟನೆ ಚಿಕ್ಕಮಗಳೂರು ನಗರದ ಬೇಲೂರು ರಸ್ತೆಯಲ್ಲಿ ನಡೆದಿದೆ. 

ವೆಂಕಟೇಶ್ವರ ಟ್ರಾಸ್ಪೋರ್ಟ್ ನ ಗೋಡೌನಲ್ಲಿ ಲಾರಿ ರಿವರ್ಸ್ ತೆಗೆಯುವಾಗ ಕಾಂಪೌಂಡ್ ಗೆ ಗುದ್ದಿದ ರಭಸಕ್ಕೆ ಕಾಂಪೌಂಡ್ ಹೊರಭಾಗದಲ್ಲಿ ಕುಳಿತ್ತಿದ್ದ ವ್ಯಕ್ತಿಯ ಮೇಲೆ ಕಾಂಪೌಂಡ್‌ ಕುಸಿದು ಬಿದ್ದ ಪರಿಣಾಮ ವ್ಯಕ್ತಿ ಸ್ಥಳದಲ್ಲೇ,  ಸಾವನ್ನಪ್ಪಿದ್ದಾರೆ. 

ಮೃತಪಟ್ಟ ವ್ಯಕ್ತಿ ಅದೇ ಜಾಗದಲ್ಲಿ ಕಳೆದ ಕೆಲ ದಿನಗಳಿಂದ ಭಿಕ್ಷೆ ಬೇಡುತ್ತಿದ್ದರು ಎನ್ನಲಾಗಿದೆ. ವ್ಯಕ್ತಿಗೆ ಸಂಬಂಧಿಸಿದವರು ಇಲ್ಲದ ಕಾರಣ ಮೃತದೇಹವನ್ನು ಜಿಲ್ಲಾ ಆಸ್ಪತ್ರೆಯ ಶವಗಾರದಲ್ಲಿ ಇರಿಸಲಾಗಿದೆ. 

RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular

Recent Comments