Tuesday, August 11, 2026
Homeಜಿಲ್ಲಾಸುದ್ದಿಮೂಡಿಗೆರೆ :ಫ್ಯಾಸಿಸಂ ವಿರೋಧಿ ಸಮರಕ್ಕೆ ದನಿಗೂಡಿಸಿ : ರಾಜ್ಯ ದಲಿತ ಒಕ್ಕೂಟ ಸಮಿತಿ ಸದಸ್ಯೆ ಆಶಾ...

ಮೂಡಿಗೆರೆ :ಫ್ಯಾಸಿಸಂ ವಿರೋಧಿ ಸಮರಕ್ಕೆ ದನಿಗೂಡಿಸಿ : ರಾಜ್ಯ ದಲಿತ ಒಕ್ಕೂಟ ಸಮಿತಿ ಸದಸ್ಯೆ ಆಶಾ ಸಂತೋಷ್ ಕರೆ

Telegram Group
Join Now

ಮೂಡಿಗೆರೆ: ಭಾರತ ಸಂವಿಧಾನ ಒಪ್ಪದವರು ಭಾರತ ಬಿಟ್ಟು ತೊಲಗಲಿ ಎಂಬ ಧ್ಯೆಯ ದೊಂದಿಗೆ ಪ್ಯಾಸಿಸಂ ಸಮರಕ್ಕೆ ಧ್ವನಿ ಗುಡಿಸಲು ರಾಜ್ಯ ದಲಿತ ಒಕ್ಕೂಟ ಸಮಿತಿ ಸದಸ್ಯೆ ಆಶಾ ಸಂತೋಷ್ ಮನವಿ ಮಾಡಿದ್ದಾರೆ.

ಈ ಕುರಿತು ಸುದ್ದಿ ಗಾರರೊಂದಿಗೆ ಮಾತನಾಡಿದ ಅವರು ಶನಿವಾರ ಜಿಲ್ಲೆಯ ಪ್ರಗತಿಪರರ ಚಿಂತನ ಮಂಥನ!
ವಿಚಾರ ಸಂಕಿರಣ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಕೋಮುವಾದಿ ಫ್ಯಾಸಿಸ್ಟ್ ಶಕ್ತಿಗಳ ವಿರುದ್ಧ ನಿರ್ಣಾಯಕ ಹೋರಾಟಕ್ಕೆ ಕರೆ ನೀಡಲಾಗಿದೆ ಎಂದರು.

ಪ್ರಜಾಪ್ರಭುತ್ವದ ಮೌಲ್ಯಗಳು ಮತ್ತು ಸಂವಿಧಾನದ ಆಶಯಗಳು ಸವಾಲಿಗೆ ಗುರಿಯಾಗಿರುವ ಈ ಸಂದರ್ಭದಲ್ಲಿ, ಜಿಲ್ಲೆಯ ಸಮಸ್ತ ಪ್ರಗತಿಪರ, ದಲಿತ ಮತ್ತು ಜನಪರ ಸಂಘಟನೆಗಳು ಸಮ್ಮುಖದಲ್ಲಿ ಒಂದು ದಿನದ ಮಹತ್ವದ ವಿಚಾರ ಸಂಕಿರಣವನ್ನು ಆಯೋಜಿಸಿದೆ ಎಂದರು.

ಪ್ರಸಕ್ತ ರಾಜಕೀಯ ಸವಾಲುಗಳ ಕುರಿತು ಗಂಭೀರ ಚಿಂತನೆ ನಡೆಸಲು ವೇದಿಕೆ ಕಲ್ಪಿಸಲಿದೆ. ಎಂದು ತಿಳಿಸಿದರು.

ಇಂದಿನ ದೇಶದ ಪರಿಸ್ಥಿತಿಯಲ್ಲಿ ಧರ್ಮದ ಹೆಸರಿನಲ್ಲಿ ಸಮಾಜ ಒಡೆಯುವ, ಅಸಮಾನತೆಯನ್ನು ಹೆಚ್ಚಿಸುವ ಶಕ್ತಿಗಳು ಪ್ರಬಲವಾಗುತ್ತಿವೆ. ಸಂವಿಧಾನದ ಆಶಯಗಳನ್ನು ಬದಿಗೊತ್ತಿ ಸರ್ವಾಧಿಕಾರಿ ಧೋರಣೆಗಳು ತಲೆ ಎತ್ತುತ್ತಿವೆ.

ಈ ವಿಷಮ ಸ್ಥಿತಿಯನ್ನು ಎದುರಿಸಲು ಬರೀ ಟೀಕೆ ಸಾಕಾಗದು, ಸಂಘಟಿತ ಪ್ರತಿರೋಧ ಅತ್ಯಗತ್ಯ. ಈ ಹಿನ್ನೆಲೆಯಲ್ಲಿ, ರಾಜ್ಯದ ಖ್ಯಾತ ದಲಿತ ಸಂಘಟನೆಯ ನಾಯಕರುಗಳು ಮತ್ತು ಕಮ್ಯುನಿಸ್ಟ್ ಪಾರ್ಟಿಯ ಮುಖಂಡರುಗಳು ಈ ವಿಚಾರ ಸಂಕಿರಣದಲ್ಲಿ ಭಾಗವಹಿಸಿ, ವಿಶ್ಲೇಷಣೆ ಮತ್ತು ಹೋರಾಟದ ದಿಕ್ಸೂಚಿ ನೀಡಲಿದ್ದಾರೆ.

ಈ ಮೂಲಕ ಜನಪರ ಶಕ್ತಿಗಳಿಗೆ ಜಿಲ್ಲೆಯ ಸಮಸ್ತ ದಲಿತ ಸಂಘಟನೆಗಳ ಪದಾಧಿಕಾರಿಗಳು, ಪ್ರಗತಿಪರ ಚಿಂತಕರು, ಜನಪರ ಸಂಘಟನೆಗಳ ಕಾರ್ಯಕರ್ತರು, ಹೋರಾಟದ ಮುಂಚೂಣಿಯಲ್ಲಿರುವ ವಿದ್ಯಾರ್ಥಿ ಯುವಕರು ಹಾಗೂ ಸಮಾನತೆಗಾಗಿ ದುಡಿಯುತ್ತಿರುವ ಮಹಿಳಾ ಸಂಘಟನೆಗಳ ಕಾರ್ಯಕರ್ತರು ಈ ಸಭೆಯನ್ನು ಕೇವಲ ಒಂದು ಕಾರ್ಯಕ್ರಮವೆಂದು ಪರಿಗಣಿಸದೇ, ಪ್ರಜಾಪ್ರಭುತ್ವ ಉಳಿವಿನ ಮಹತ್ವದ ಅಡಿಪಾಯವೆಂದು ಭಾವಿಸಿ ತಪ್ಪದೇ ಭಾಗವಹಿಸಬೇಕು. ಎಂದರು

ನಮ್ಮ ಸಂವಿಧಾನ ಮತ್ತು ಸಾಮಾಜಿಕ ನ್ಯಾಯದ ಪರ ದನಿ ಎತ್ತಲು ಇದೊಂದು ನಿರ್ಣಾಯಕ ಸಮಯವಾಗಿದ್ದು ಕೈ ಜೋಡಿಸುವಂತೆ ಮನವಿ ಮಾಡಿದರು

RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular

Recent Comments