ಮೂಡಿಗೆರೆ: ತಾಲೂಕಿನ ಹೃದಯ ಭಾಗವಾಗಿರುವ ಮೂಡಿಗೆರೆ ಅಂಚೆ ಕಛೇರಿ ಬಳಿ ಹೊಸದಾಗಿ ಶುರುಮಾಡಿರುವ ಶೌಚಾಲಯ ನಿರ್ಮಾಣ ಕಾರ್ಯವನ್ನು ಕೈ ಬಿಡುವಂತೆ ರತನ್ ಊರುಬಗೆ ಒತ್ತಾಯಿಸಿದ್ದಾರೆ.
ಈ ಕುರಿತು ಪ್ರತಿಕ್ರಿಯಿಸಿ ಮಾತನಾಡಿದ ಅವರು, ಈ ಭಾಗದಲ್ಲಿ ಶೌಚಾಲಯ ನಿರ್ಮಾಣ ಮಾಡಲು
ಹೊರಟಿರುವ ಪಟ್ಟಣ ಪಂಚಾಯಿತಿ ಕ್ರಮ ಸರಿಯಲ್ಲ, ಅಂಚೆ ಕಚೇರಿಗೆ ಸಂಪರ್ಕಿಸುವ ದಾರಿ ಮುಚ್ಚಿ ಶೌಚಾಲಯ ನಿರ್ಮಿಸಿ ಗಬ್ಬು ನಾರುವಂತೆ ಮಾಡಲು ಹೊರಟಿರುವುದು ಎಷ್ಟು ಸರಿ ಎಂದು ಪ್ರಶ್ನಿಸಿದರು.
ಜನಸಾಮಾನ್ಯರು ಪಕ್ಕದಲ್ಲೆ ಇರುವ ಬಸ್ ಸ್ಯ್ಟಾಂಡ್ ಬಳಿ ಶೌಚಾಲಯವನ್ನು ಈಗ ಬಳಕೆ ಮಾಡಿಕೊಳ್ಳುತ್ತಿದ್ದಾರೆ
ಜೊತೆಗೆ ಮಿನಿ ವಿಧಾನ ಸೌಧ ಬಳಿ ಇರುವ ಶೌಚಾಲಯವನ್ನೇ ಸರಿಯಾಗಿ ನಿರ್ವಹಣೆ ಮಾಡದೇ ಗಬ್ಬು ನಾರುತ್ತಿದೆ ಅದನ್ನ ಸರಿಪಡಿಸಿ ಜನ ಸಾಮಾನ್ಯರಿಗೆ ಶೌಚಾಲಯಕ್ಕೆ ವ್ಯವಸ್ಥೆ ಮಾಡಿಕೊಡಬಹುದಾಗಿದೆ. ಅದನ್ನು ಬಿಟ್ಟು ಸರ್ಕಾರದ ಹಣ ಪೋಲು ಮಾಡಲು ಅನಗತ್ಯವಾಗಿ ಶೌಚಾಲಯ ನಿರ್ಮಿಸುವ ಅಗತ್ಯವಿಲ್ಲ. ಸಾರ್ವಜನಿಕರ ಅಭಿಪ್ರಾಯ ಕೂಡ ಅಲ್ಲಿ ಶೌಚಾಲಯ ಬೇಡ ಎನ್ನುವುದಾಗಿದೆ ಎಂದರು
ಅದನ್ನು ಮೀರಿ ಶೌಚಾಲಯ ನಿರ್ಮಿಸಲು ಹೊರಟರೆ ಉಗ್ರ ಹೋರಾಟ ಮಾಡಬೇಕಾಗುತ್ತದೆ ಕೂಡಲೇ ಈ ಕಾಮಗಾರಿ ನಿಲ್ಲಿಸುವಂತೆ ಹಸಿರು ಫೌಂಡೇಷನ್ ಅಧ್ಯಕ್ಷ ರತನ್ ಊರುಬಗೆ ಒತ್ತಾಯಿಸಿದ್ದಾರೆ
ವರದಿ :ಪುನೀತ್ ಕಡಿದಾಳ್
9483811948
