Wednesday, March 25, 2026
Homeಜಿಲ್ಲಾಸುದ್ದಿಮೂಡಿಗೆರೆ : ಶಾಸಕರೇ ಇತ್ತ ಗಮನಿಸಿ: ಈ ಗ್ರಾಮಗಳಲ್ಲಿ ಇನ್ನೂ ಓಡಾಟವಿಲ್ಲ ಸರ್ಕಾರಿ ಬಸ್​

ಮೂಡಿಗೆರೆ : ಶಾಸಕರೇ ಇತ್ತ ಗಮನಿಸಿ: ಈ ಗ್ರಾಮಗಳಲ್ಲಿ ಇನ್ನೂ ಓಡಾಟವಿಲ್ಲ ಸರ್ಕಾರಿ ಬಸ್​

ಮೂಡಿಗೆರೆ: ತಾಲೂಕಿನ ಕೆಲವು ಹಳ್ಳಿಗಳಿಗೆ ಈಗಲೂ ಬಸ್ ಸೌಲಭ್ಯ ವಿಲ್ಲದೆ ಪರದಾಡುತ್ತಿದ್ದಾರೆ ಶಾಸಕಿಯ ತವರೂರಲ್ಲೇ ಈ ರೀತಿ ಸೌಲಭ್ಯವಾದ್ರೆ ಇನ್ನ ಬೇರೆ ಊರುಗಳ ಗತಿಯೇನು ಏನಂತೀರಾ ಹಾಗಾದ್ರೆ ಈ ಸ್ಟೋರಿ ತಪ್ಪದೆ ಗಮನಿಸಿ ನಿಮಗೆ ಇದರ ಸಂಕ್ಷಿಪ್ತವಾಗಿ ಗೊತ್ತಾಗುತ್ತೆ.

ಹೌದು.. ಇಲ್ಲಿ ಕಾಣುವಂತ ಗ್ರಾಮಗಳಾದ ಮೆಣಸಿನಮಕ್ಕಿ, ಮಗ್ಗಲಮಕ್ಕಿ, ಕೊಣಗೆರೆ, ಕುಂಬರಡಿ, ಹೇರಿಕೆ, ಹಾಲೂರು, ಅಬಚೂರು ಹೀಗೆ ಸೇರಿದಂತೆ ಹಲವಾರು ಗ್ರಾಮಗಳಿಗೆ ಬಸ್ ಬರುತ್ತಿಲ್ಲ ಅಂದರೆ ಆಶ್ಚರ್ಯ ಆಗಬಹುದು ಆದರೂ ಇದು ಕಹಿ ಸತ್ಯ..

ನಾವು ಸರ್ಕಾರಕ್ಕೆ ತೆರಿಗೆ ಕಟ್ಟುತ್ತೇವೆ ನಮಗೇಕೆ ಇಲ್ಲಾ ಬಸ್ ಸೌಲಭ್ಯ ಬೇಕೇ ಬೇಕು ಬಸ್ ಬರಲೇ ಬೇಕು. ಅಂತಾರೆ ಈ ಹಳ್ಳಿನ ಜನ

ಹೌದು ಶಾಲಾ ಮಕ್ಕಳು, ಕೆಜಿ ತೂಕದ ಶಾಲಾ ಬ್ಯಾಗ್ ಬೆನ್ನ ಮೇಲೆ ಹೊತ್ತುಕೊಂಡು ಕಿಲೋ ಮೀಟರ್ ಗಟ್ಟಲೆ ಮುಖ್ಯ ರಸ್ತೆಗೆ ನಡೆದು ಬಂದು ಸರಿಯಾದ ಸಮಯಕ್ಕೆ ಬಾರದ ಬಸ್​ಗಾಗಿ ಕಾದು ನಿಂತು ಸಾಕಾಗಿದೆ. ದಯವಿಟ್ಟು ನಮ್ಮ ಊರಿಗೆ ಬಸ್ ವ್ಯವಸ್ಥೆ ಕಲ್ಪಿಸಿ ಅನ್ನೋ ಶಾಲಾ ಮಕ್ಕಳ ಅಳಲು.
ಒಂದೆಡೆ ಆದರೆ

ಬಸ್ ವ್ಯವಸ್ಥೆ ಇಲ್ಲದೆ ಸಮಯಕ್ಕೆ ಸರಿಯಾಗಿ ಕೆಲಸಕ್ಕೆ ಹೋಗದೆ ಮಾಲೀಕರ ಬೈಗುಳ ಕೇಳೋ ಕಾರ್ಮಿಕರ ನೋವು ಇನ್ನೊಂದೆಡೆ ಆದರೆ ಇದು ನಿಮ್ಮ ಕ್ಷೇತ್ರ ನೀವು ಮನಸ್ಸು ಮಾಡಿದ್ದಲ್ಲಿ ಎಲ್ಲವು ಸಾಧ್ಯ ಮನಸ್ಸು ಮಾಡಿ ಭರವಸೆ ಉಳಿಸಿಕೊಳ್ಳಿ ಅನ್ನೋ ಸಾರ್ವಜನಿಕ ವಲಯ ಇನ್ನೊಂದೆಡೆ ಕೂಗಿ ಹೇಳುತ್ತಿದೆ.

ಶಾಲಾ ಮಕ್ಕಳು ತುಂಬಾ ತೊಂದರೆ ಅನುಭವಿಸುತ್ತಿದ್ದಾರೆ. ತಕ್ಷಣ ಬಸ್​ ವ್ಯವಸ್ಥೆ ಕಲ್ಪಿಸುವಂತೆ ಒತ್ತಾಯಿಸಿ ಗ್ರಾಮಸ್ಥರು ಮತ್ತು ಶಾಲಾ ಮಕ್ಕಳು ಒತ್ತಾಯಿಸಿದ್ದಾರೆ

ಗ್ರಾಮಕ್ಕೆ ಬಸ್‌ ಸೌಲಭ್ಯ ಕಲ್ಪಿಸುವಂತೆ ಆಗ್ರಹಿಸಿ ಶಾಲಾ ಮಕ್ಕಳು, ಗ್ರಾಮಸ್ಥರಿಂದ ಶಾಸಕರಿಗೆ ಪಬ್ಲಿಕ್ ಇಂಪ್ಯಾಕ್ಟ್ ಮೂಲಕ ಮನವಿ ಹೀಗಿದೆ.

ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲೂಕಿನ ಕುಂಬರಡಿ. ಮಗ್ಗಲಮಕ್ಕಿ ಕೊಣಗೆರೆ ಸೇರಿದಂತೆ ಹಲವು ಗ್ರಾಮಗಳಿಗೆ ಸರಿಯಾದ ಬಸ್ ವ್ಯವಸ್ಥೆಯಿಲ್ಲದ ಕಾರಣ ನಾವು ಕಟ್ಟಿದ ತೆರಿಗೆ ಹಣ ವಾಪಸ್ ಕೊಡಿಸಿ ಇಲ್ಲವೇ ಬಸ್ ಸೌಲಭ್ಯ ಕಲ್ಪಿಸಿ ಎಂಬ ಮಾತು ಕೇಳಿಬಂದಿದ್ದು ಇನ್ನಾದರೂ ಬಸ್ ಭಾಗ್ಯ ಸಿಗುತ್ತಾ ಅನ್ನೋ ಭರವಸೆ ಕೋಣಗೆರೆ ಗ್ರಾಮಸ್ಥರದು

ಕಿಲೋ ಮೀಟರ್ ನಡೆದು ಸುಸ್ತಾಗಿ ಸಾಕಾಗಿದೆ ಸರಿಯಾದ ಬಸ್ ವ್ಯವಸ್ಥೆ ಇಲ್ಲದೇ, ವಿದ್ಯಾರ್ಥಿಗಳು ಪ್ರಯಾಣಿಕರು ದಿನನಿತ್ಯ ಸಂಕಷ್ಟ ಪಡುವಂತಾಗಿದೆ. .ಇನ್ನಾದರೂ ಸರಿಯಾದ ಬಸ್ ವ್ಯವಸ್ಥೆ ಕಲ್ಪಿಸುವಂತೆ ಆಕ್ರೋಶ ಹೊರ ಹಾಕುತ್ತಾರೆ ಕುಂಬರಡಿ ಗ್ರಾಮಸ್ಥರು.

ಆದಷ್ಟು ಬೇಗನೆ ಸಾರಿಗೆ ಇಲಾಖೆ ಅಧಿಕಾರಿಗಳು ಎಚ್ಚೆತ್ತುಕೊಂಡು ಗ್ರಾಮಸ್ಥರಿಗೆ ಹಾಗೂ ವಿದ್ಯಾರ್ಥಿಗಳಿಗೆ ಸರಿಯಾದ ಬಸ್ ವ್ಯವಸ್ಥೆ ಕಲ್ಪಿಸಬೇಕು ಎಂದು ಸ್ಥಳೀಯರು ಆಗ್ರಹಿಸಿದ್ದಾರೆ.

ಒಂದು ವೇಳೆ ಮೀನಾಮೇಷ ಮಾಡಿದರೆ ಉಗ್ರ ಹೋರಾಟ ಮಾಡಲಾಗುವುದು ಎಂದು ಎಚ್ಚರಿಕೆ ನೀಡಿದ್ದಾರೆ ಮಗ್ಗಲಮಕ್ಕಿ ಗ್ರಾಮಸ್ಥರು

ಒಂದು ಕಡೆ ಕಾಡಾನೆಗಳ ಕಾಟದ ಭಯವಿದ್ದರೆ ಇನ್ನೊಂದು ಕಡೆ ಬಸ್‌ ಗಳ ಸಮಸ್ಯೆ ಆಗಿದೆ.ಹಾಗಾಗಿ ಆದಷ್ಟು ಬೇಗನೆ ಕ್ಷೇತ್ರದ ಜನ ನಾಯಕಿ ನಯನ ಮೋಟಮ್ಮ ಅವರು ಸಾರಿಗೆ ಇಲಾಖೆ ಅಧಿಕಾರಿಗಳ ಜೊತೆ ಮಾತನಾಡಿ ಎಚ್ಚೆತ್ತುಕೊಂಡು ಗ್ರಾಮಸ್ಥರಿಗೆ ಹಾಗೂ ವಿದ್ಯಾರ್ಥಿಗಳಿಗೆ ಸರಿಯಾದ ಬಸ್ ವ್ಯವಸ್ಥೆ ಕಲ್ಪಿಸಬೇಕು ಎಂದು ಸ್ಥಳೀಯರು ಆಗ್ರಹಿಸಿದ್ದಾರೆ.

ಇವರ ಒತ್ತಾಯ ಈಡೇರಲಿ ಇವರಿಗೆ ಧ್ವನಿಯಾಗಿ ನಿಲ್ಲುವುದರ ಜೊತೆಗೆ ಪಬ್ಲಿಕ್ ಇಂಪ್ಯಾಕ್ಟ್ ಸಹಕರಿಸಲಿದೆ.

ವರದಿ :ಪುನೀತ್ ಕಡಿದಾಳ್ 

9483811948

RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular

Recent Comments

error: Content is protected !!