Monday, March 30, 2026
Homeಜಿಲ್ಲಾಸುದ್ದಿಮೂಡಿಗೆರೆ: ಗುದ್ದಲಿ ಪೂಜೆ ನೆರವೇರಿಸಿ 6 ತಿಂಗಳಾದ್ರೂ ರಸ್ತೆ ಕಾಮಗಾರಿ ಅಪೂರ್ಣ: ಸ್ಥಳೀಯರ ಆಕ್ರೋಶ!

ಮೂಡಿಗೆರೆ: ಗುದ್ದಲಿ ಪೂಜೆ ನೆರವೇರಿಸಿ 6 ತಿಂಗಳಾದ್ರೂ ರಸ್ತೆ ಕಾಮಗಾರಿ ಅಪೂರ್ಣ: ಸ್ಥಳೀಯರ ಆಕ್ರೋಶ!

ಮೂಡಿಗೆರೆ: ಗುದ್ದಲಿ ಪೂಜೆ ನೆರವೇರಿಸಿ ಆರು ತಿಂಗಳಾದರೂ ರಸ್ತೆ ಕಾಮಗಾರಿ ಇನ್ನೂ ಅಪೂರ್ಣವಾಗಿದ್ದು ಈ ಹಿನ್ನೆಲೆಯಲ್ಲಿ ಸ್ಥಳಿಯರು ತೀವ್ರ ಆಕ್ರೋಶ ವ್ಯಕ್ತ ಪಡಿಸುತ್ತಿರುವ ಘಟನೆ ಮೂಡಿಗೆರೆ ನಗರದ ಛತ್ರ ಮೈದಾನದಲ್ಲಿ ನಡೆದಿದೆ.

ಹೌದು .. ಈ ರಸ್ತೆಗೆ ಫೆಬ್ರವರಿ ತಿಂಗಳಲ್ಲಿ ಗುದ್ದಲ್ಲಿ ಪೂಜೆ ನೆರವೇರಿಸಿದ್ದ ಶಾಸಕಿ ನಯನ ಮೋಟಮ್ಮ ಆಮೇಲೆ ಏನಾಯ್ತು ಅಂತ ಕೇಳೋರೆ ಗತಿ ಇಲ್ಲದಂತಾಗಿದೆ ಹಾಗೆ ಶಾಸಕಿ ಹಾಗೂ ಪಟ್ಟಣ ಪಂಚಾಯ್ತಿ ಅಧಿಕಾರಿಗಳ ನಿರ್ಲಕ್ಷ್ಯವೇ ಇದಕ್ಕೆಲ್ಲಾ ಕಾರಣವೆಂದು ಛತ್ರ ಮೈದಾನ ನಿವಾಸಿಗಳು ದೂರು ಹೇಳುತ್ತಿದ್ದಾರೆ.

ಈ ವಾರ್ಡ್ ಬರಿ ಗುಂಡಿಗಳದ್ದೆ ದರ್ಬಾರ್‌ ಆಗಿದ್ದು ಇಲ್ಲಿನ ಸದಸ್ಯರ ಬೊಗಳೆ ಭರವಸೆಗೆ ಸ್ಥಳೀಯರ ಬೇಸರ ವ್ಯಕ್ತ ಪಡಿಸಿದ್ದು ಇನ್ಯಾವಾಗ ರಸ್ತೆ ಕಾರ್ಯ ಆರಂಭ ಎಂದು ಪ್ರಶ್ನೆ ಎತ್ತಿದ್ದಾರೆ.

ಹಾಗೆ ಪೊಳ್ಳು ಭರವಸೆಗಳ ಪುಸ್ತಕದಲ್ಲಿನ ಪಾಠ ಕರಗತ ಮಾಡಿರುವ ಜನಪ್ರತಿನಿದಿಗಳು ರಸ್ತೆ ಕಾಮಗಾರಿ ಕಾರ್ಯ ಆರಂಬಿಸಲು ಒತ್ತಾಯ ಮಾಡಿದ್ದು ಇಲ್ಲದಿದ್ದರೆ ಪಟ್ಟಣ ಪಂಚಾಯಿತಿ ಕಚೇರಿ ಮುಂದೆ ಪ್ರತಿಭಟನೆ ಮಾಡೋದಾಗಿ ಎಚ್ಚರಿಕೆ ನೀಡಿರುತ್ತಾರೆ.

RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular

Recent Comments

error: Content is protected !!