Tuesday, August 11, 2026
Homeಕ್ರೈಮ್ಸಕಲೇಶಪುರ: ನೀರಿನ ಹೊಂಡದಲ್ಲಿ ಮುಳುಗಿ ಇಬ್ಬರು ಬಾಲಕರ ದುರ್ಮರಣ!

ಸಕಲೇಶಪುರ: ನೀರಿನ ಹೊಂಡದಲ್ಲಿ ಮುಳುಗಿ ಇಬ್ಬರು ಬಾಲಕರ ದುರ್ಮರಣ!

Telegram Group
Join Now

ಸಕಲೇಶಪುರ: ತಾಲೂಕಿನ ಒಸ್ಸೂರು ಗ್ರಾಮದ ಐಬಿಸಿ ಎಸ್ಟೇಟ್‌ನಲ್ಲಿ ನೀರಿನ ಹೊಂಡದಲ್ಲಿ ಮುಳುಗಿ ಇಬ್ಬರು ಬಾಲಕರು ಸಾವಿಗೀಡಾಗಿದ್ದು ಪೋಷಕರ ಎದುರೇ ನಡೆಯಿತು ಕರುಣಾಜನಕ ಘಟನೆ

ಹೌದು .. ಎಸ್ಟೇಟ್‌ನಲ್ಲಿ ಕೆಲಸ ಮಾಡುವ ಕಾರ್ಮಿಕರ ಮಕ್ಕಳಾದ ಪ್ರಣಯ್ (7) ಮತ್ತು ನಿಶಾಂತ್ (5) ಆಟ ಆಡುವ ಸಂದರ್ಭದಲ್ಲಿ ಆಕಸ್ಮಿಕವಾಗಿ ಹೊಂಡದ ನೀರಿಗೆ ಬಿದ್ದು ದುರ್ಮರಣ ಹೊಂದಿದ್ದಾರೆ.

ಸ್ಥಳೀಯರ ಪ್ರಕಾರ, ಮಕ್ಕಳಿಬ್ಬರೂ ಆಟವಾಡುತ್ತಿದ್ದು, ಪಕ್ಕದಲ್ಲಿದ್ದ ಆಳವಾದ ಹೊಂಡದತ್ತ ತೆರಳಿ ಕಾಲು ಜಾರಿ ನೀರಿಗೆ ಬಿದ್ದಿದ್ದಾರೆ. ನಂತರ ಅವರನ್ನು ಹೊರತೆಗೆದರೂ, ಬದುಕುಳಿಸಲು ಸಾಧ್ಯವಾಗಿಲ್ಲ.

ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಪ್ರಕರಣ ದಾಖಲಿಸಲಾಗಿದೆ.

RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular

Recent Comments