ಬಣಕಲ್: ಚಕ್ಕಮಕ್ಕಿ ಬದ್ರಿಯಾ ಜಮ್ಮ ಮಸೀದಿ ಪದಾಧಿಕಾರಿಗಳ ಪ್ರಕ್ರಿಯೆ ವಾರ್ಷಿಕ ಸಾಮಾನ್ಯ ಸಭೆಯಲ್ಲಿ ಉತ್ಸಾಹಭರಿತ ವಾತಾವರಣದಲ್ಲಿ ನಡೆಯಿತು. ಈ ಸಂದರ್ಭದಲ್ಲಿ ಸಭಾಧ್ಯಕ್ಷರಾಗಿ ನಾಸೀರ್ ಎಂ. ರವರನ್ನು ಆಯ್ಕೆ ಮಾಡಿ ಅವರು ಸಭೆಯ ನೇತೃತ್ವ ವಹಿಸಿದರು.

ಸಭೆಯು ನೂತನ ಸಮಿತಿ ರಚಿಸಲು ಸಂಪೂರ್ಣ ಅಧಿಕಾರವನ್ನು ಅವರಿಗೆ ನೀಡಿಲಾಯಿತು. ಸಭೆಯನ್ನು ಉದ್ದೇಶಿಸಿ ಮಾತನಾಡಿದ ನೂತನ ಅಧ್ಯಕ್ಷ ಎ.ಸಿ. ಅಯೂಬ್ ಹಾಜಿ ಅವರು, “ಸೇವೆ, ಏಕತೆ, ಪ್ರಗತಿ” ಎಂಬ ಧ್ಯೇಯವಾಕ್ಯದೊಂದಿಗೆ ಮಸೀದಿ ಹಾಗೂ ಸಮುದಾಯದ ಅಭಿವೃದ್ಧಿಗೆ ಶ್ರಮಿಸುವುದಾಗಿ ಹೇಳಿದರು.
ಸಮಾಜದ ಎಲ್ಲಾ ವರ್ಗಗಳ ಸಹಭಾಗಿತ್ವದೊಂದಿಗೆ ಬದ್ರಿಯಾ ಮಸೀದಿ ಪ್ರದೇಶವನ್ನು ಮಾದರಿ ಕೇಂದ್ರವನ್ನಾಗಿ ರೂಪಿಸುವುದು ನಮ್ಮ ಉದ್ದೇಶ ಎಂದರು.
ಸಭೆಯಲ್ಲಿ ಕಳೆದ ಸಾಲಿನ ಚಟುವಟಿಕೆಗಳ ವರದಿ ಮಂಡಿಸಲಾಯಿತು ಮತ್ತು ಸದಸ್ಯರು ಮುಂದಿನ ಸಾಲಿನ ಯೋಜನೆಗಳ ಕುರಿತು ಸಲಹೆ ನೀಡಿದರು.
ಸಭೆಯ ಅಂತ್ಯದಲ್ಲಿ ಹೊಸ ಆಡಳಿತ ಮಂಡಳಿಯನ್ನು ಘೋಷಿಸಲಾಯಿತು.
2025–26ನೇ ಸಾಲಿನ ನೂತನ ಆಡಳಿತ ಮಂಡಳಿ ಪದಾಧಿಕಾರಿಗಳಾಗಿ ನೇಮಕಾಗೊಂಡವರ ವಿವರ ಕೆಳಕಂಡತಿದೆ ಗೌರವಾಧ್ಯಕ್ಷರು,M. ಇಬ್ರಾಹೀಂ ಹಾಜಿ, ಅಧ್ಯಕ್ಷರು,ಎ.ಸಿ. ಅಯೂಬ್ ಹಾಜಿ, ಪ್ರಧಾನ ಕಾರ್ಯದರ್ಶಿ ನಝೀರ್, ಉಪಾಧ್ಯಕ್ಷ, M.A. ನಾಸೀರ್ಕಾ ರ್ಯದರ್ಶಿ ಅಸ್ಗರ್ C.A., ಸಮೀರ್, ಹಾಗೆ
ಸದಸ್ಯರುಗಳಾಗಿ: M.A. ಮಜೀದ್, S. ಮಹಮ್ಮದ್, M. ಮೊಯ್ದೀನ್, A.C. ಆಸೀಫ್, ಫಾರುಕ್ ಬಣಕಲ್, B.A. ಉಮರ್ ಬಣಕಲ್, B.E. ಯಾಕುಬ್, B.E. ಕರೀಂ, ಮಸೂದ್ ಸಬ್ಬೇನಹಳ್ಳಿ, ಆಸೀಫ್ B.A., ನವಾಝ್, C.K. ಹಸನ್,ಇರ್ಷಾದ್ ಸಬ್ಬೇನಹಳ್ಳಿ ನೇಮಕಗೊಂಡಿದ್ದಾರೆ
