Saturday, August 8, 2026
Homeಕ್ರೈಮ್ಮೂಡಿಗೆರೆ: ‎ಅಂಗನವಾಡಿ ಶಿಕ್ಷಕಿ ಸಂಪ್ರಿತಾ ಸಾವು : 50 ಲಕ್ಷ ರೂ. ಪರಿಹಾರ ಬಿಡುಗಡೆಗೆ ಆಗ್ರಹ

ಮೂಡಿಗೆರೆ: ‎ಅಂಗನವಾಡಿ ಶಿಕ್ಷಕಿ ಸಂಪ್ರಿತಾ ಸಾವು : 50 ಲಕ್ಷ ರೂ. ಪರಿಹಾರ ಬಿಡುಗಡೆಗೆ ಆಗ್ರಹ

Telegram Group
Join Now

ಮೂಡಿಗೆರೆ: ‎ಅಂಗನವಾಡಿ ಶಿಕ್ಷಕಿ ಸಂಪ್ರಿತಾ ಸಾವಿಗೆ ಸಂಬಂಧಿಸಿದಂತೆ ಸೂಕ್ತ ತನಿಖೆಯಾಗಬೇಕು ಎಂದು ಅಂಗನವಾಡಿ ಶಿಕ್ಷಕಿಯರಿಂದ ತಹಶೀಲ್ದಾರ್ ಅವರಿಗೆ ಮನವಿ ಸಲ್ಲಿಸಲಾಯಿತು.

ಈ ಸಂದರ್ಭದಲ್ಲಿ ‎ತಾ.ಅಂಗನವಾಡಿ ಕಾರ್ಯಕರ್ತೆಯರ ಮತ್ತು ಸಹಾಯಕಿಯರ ಸಂಘದ ಅದ್ಯಕ್ಷೇಯಾದ ಶೈಲಾ ಮಾತನಾಡಿ ಸಾವಿಗೀಡಾದ ಶಿಕ್ಷಕಿ ಕು. ಸಂಪ್ರಿತಾ ಕುಟುಂಬಕ್ಕೆ 50 ಲಕ್ಷ ಪರಿಹಾರ ಮತ್ತು ಜೀವನಮರಣ ಹೋರಾಟದಲ್ಲಿರುವ ಶಿಕ್ಷಕಿ ಸುಜಾತ ಅವರ ಕುಟುಂಬಕ್ಕೆ 25 ಲಕ್ಷ ಪರಿಹಾರ ಘೋಷಿಸಬೇಕು ಎಂದು ಒತ್ತಾಯಿಸಿದರು

‎ಅಪಘಾತಕ್ಕೆ ಸರಿಯಾದ ಕಾರಣ ತಿಳಿದು ಬಂದಿಲ್ಲ. ವಾಹನ ಬ್ರೆಕ್ ಫೇಲ್ ಎಂದು ಸಬೂಬು ನೀಡಿರುವುದನ್ನು ನಾವು ನಂಬುವುದಿಲ್ಲ ಎಂದರು. ಕ್ರೇನ್ ಪ್ರಭಾವಿ ವ್ಯಕ್ತಿಗೆ ಸೇರಿದ್ದು ಎಂಬುದು ತಿಳಿದಿದ್ದು, ಕೇಸನ್ನು ಮುಚ್ಚು ಹಾಕುವ ಪ್ರಯತ್ನ ಪಟ್ಟಿದ್ದಲ್ಲಿ ಮಹಿಳಾ ಶಕ್ತಿ ಏನು ಎಂಬುದನ್ನು ನೋಡಬೇಕಾಗುತ್ತದೆ ಎಂದರು.

ಈ ಅಪಘಾತಕ್ಕೆ ನಿಜವಾದ ಕಾರಣ ಎಂಬುದು ತಿಳಿಸಬೇಕು ಬದುಕಿ ಬಾಳಬೇಕಿದ್ದ ಯುವತಿ ಸಾವಿಗೆ ನ್ಯಾಯ ದೊರಕಿಸಿ ಕೊಡಬೇಕೆಂದು ಆಗ್ರಹಿಸಿದ್ದಾರೆ..

‎ ಸಂಪ್ರೀತಳ ಕುಟುಂಬಕ್ಕೆ ಇಂದು ದಾರಿ ಕಾಣದಾಗಿದ್ದು ಆದ್ದರಿಂದ ಮೃತರ ಕುಟುಂಬಕ್ಕೆ 50ಲಕ್ಷ ಪರಿಹಾರ ಜೊತೆಗೆ ಸಹೋದರನಿಗೆ ಸರ್ಕಾರಿ ಕೆಲಸ ನೀಡಬೇಕೆಂದು ಆಗ್ರಹಿಸಿದರು..

ಅದಲ್ಲದೆ ಅಂಗನವಾಡಿ ಕಾರ್ಯಕರ್ತೆಯರನ್ನು ಸಹಾಯಕಿಯರನ್ನು ಮೌಖಿಕ ಆದೇಶ ನೀಡಿ ಕೆಲಸಕ್ಕೆ ಕರೆಯಬಾರದು ಎಂದು ಆಗ್ರಹಿಸಿದರು.

ನಮ್ಮ ಮನವಿಗೆ ಸ್ಪಂದಿಸದಿದ್ದಲ್ಲಿ ಉಗ್ರ ಪ್ರತಿಭಟನೆ ನಡೆಸುವುದಾಗಿ ಎಚ್ಚರಿಕೆ ನೀಡಿದ್ದಾರೆ.

‎ಈ ಸಂದರ್ಭದಲ್ಲಿ ಶಿಕ್ಷಕಿ ಅಶ್ವಿನಿ, ಕಾರ್ಯದರ್ಶಿ ವನಜಾಕ್ಷಿ. ಶೋಭ ಸೇರಿದಂತೆ ಆನೇಕ ಶಿಕ್ಷಕಿಯರು ಕಾರ್ಯಕರ್ತೆಯರು, ಸಹಾಯಕಿಯರು ಭಾಗವಹಿಸಿದ್ದರು.

RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular

Recent Comments