ಮೂಡಿಗೆರೆ: ಬ್ಯಾರಿ ಭಾಷಾ ಮಾಸಾಚರಣೆ ಕಾರ್ಯಕ್ರಮವನ್ನು ಪಟ್ಟಣದ ತಾಲ್ಲೂಕು ಬ್ಯಾರಿ ಒಕ್ಕೂಟದ ವತಿಯಿಂದ ಶಾದಿಮಹಲ್ ನಲ್ಲಿ ಆಚರಣೆ ಮಾಡಲಾಯಿತು.

ಕಾರ್ಯಕ್ರಮ ಅಧ್ಯಕ್ಷತೆ ವಹಿಸಿ ಮಾತನಾಡಿದ ಜನಾಬ್ ಬಿ. ಎಚ್.ಮಹಮ್ಮದ್ ಭಾಷೆ ಬೆಳವಣಿಗೆಯಲ್ಲಿ ಭಾಷಾ ದಿನ ಆಚರಣೆ ಅರ್ಥಪೂರ್ಣ ಎಂದರು.
ಭಾಷೆಯ ಮಾತಿಗೆ ಸಾಮರ್ಥ್ಯ ಇರುವ ಹಾಗೆ, ಲಿಪಿಗೆ ಸಾಮರ್ಥ್ಯ ಇಲ್ಲ. ಬ್ಯಾರಿ ಭಾಷೆ ಕೊಡುಗೆ ವಿಶೇಷವಾದುದು ಎಂದರು.
ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಬ್ಯಾರಿ ಒಕ್ಕೂಟದ ಆಲಿ ಹಾಜಿ ಬ್ಯಾರಿ ಭಾಷೆಯ ಇತಿಹಾಸವು ತುಳುನಾಡಿನೊಂದಿಗಿನ ಅದರ ನಿಕಟ ಸಂಬಂಧ ಮತ್ತು ಸಮುದಾಯದ ವ್ಯಾಪಾರ ಚಟುವಟಿಕೆಗಳೊಂದಿಗೆ ಆಳವಾಗಿ ಬೆಸೆದುಕೊಂಡಿದೆ.

ಈ ಭಾಷೆಯ ಮೂಲವು ಮಲಯಾಳಂನ ಒಂದು ಉಪಭಾಷೆಯಾಗಿದ್ದು, ಇದು ಮಲಯಾಳಂ, ತುಳು, ಕನ್ನಡ, ತಮಿಳು, ಉರ್ದು ಮತ್ತು ಅರೇಬಿಕ್ ಮುಂತಾದ ಅನೇಕ ಭಾಷೆಗಳಿಂದ ಪ್ರಭಾವಿತವಾಗಿದೆ.
ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಯಾಗಿ ಆಗಮಿಸಿ ಮಾತನಾಡಿದ ರಫೀಕ್ ಮಾಸ್ಟರ್ ಸಮುದಾಯದ ಇತಿಹಾಸವು ಸುಮಾರು 1200 ವರ್ಷಗಳಷ್ಟು ಹಳೆಯದು, ಮತ್ತು ಇತ್ತೀಚೆಗೆ ಬ್ಯಾರಿ ಭಾಷೆಗಾಗಿ ಕರ್ನಾಟಕ ಬ್ಯಾರಿ ಭಾಷೆ ಸಾಹಿತ್ಯ ಅಕಾಡೆಮಿ ಸ್ಥಾಪಿಸಲಾಗಿದೆ.
ಉನ್ನತ ಶಿಕ್ಷಣ ಪಡೆದ ಹೆಚ್ಚಿನವರಲ್ಲಿ ಆಂಗ್ಲ ಭಾಷೆಯ ಮೇಲೆ ವ್ಯಾಮೋಹ ಹೆಚ್ಚಿದೆ. ಆದರೆ ಕೂಲಿ ಕಾರ್ಮಿಕರು, ಸಣ್ಣಪುಟ್ಟ ಕೆಲಸ ಮಾಡುವವರು ಮಾತೃಭಾಷೆಯಲ್ಲೇ ದಿನನಿತ್ಯ ವ್ಯವಹರಿಸುತ್ತಾರೆ ಎಂದರು
ಭಾಷೆಯ ಬೆಳವಣಿಗೆಯಲ್ಲಿ ತಾಯಂದಿರ ಪಾತ್ರ ಅಪಾರವಿದೆ.
ತಾಯಿಯಿಂದಲೇ ಮಕ್ಕಳು ಮಾತೃಭಾಷೆಯನ್ನು ಕಲಿಯುತ್ತಾರೆ.
ಹಾಗಾಗಿ ತಾಯಂದಿರಿಲ್ಲದ ಭಾಷಾ ದಿನಾಚರಣೆಯುಅರ್ಥಪೂರ್ಣವಾಗದು. ಮುಂದಿನ ದಿನಗಳಲ್ಲಿ ಎಲ್ಲಾ ಬ್ಯಾರಿ ಸಂಘಟನೆಗಳು ತಾಯಂದಿರನ್ನು ಒಳಗೊಂಡಂತೆ ಕಾರ್ಯಕ್ರಮಗಳು ಆಯೋಜಿಸಲು ಕ್ರಮ ವಹಿಸಬೇಕು ಎಂದು ಅಭಿಪ್ರಾಯಪಟ್ಟರು.
ಹುಲಿ ಹಾಳಲು ಕುಡಿದವರು ಹುಲಿಯಂತೆ ವರ್ತಿಸಬೇಕು.ಬ್ಯಾರಿ ಸಮುದಾಯದಿಂದ ಅನೇಕರು ಉನ್ನತ ಸ್ಥಾನದಲ್ಲಿ ಕರ್ತವ್ಯ ನಿರ್ವಹಿಸುತ್ತಿರುವುದು ನಮ್ಮ ಸಮುದಾಯಕ್ಕೆ ಹೆಮ್ಮೆ ಎಂದರು
ಜಾತಿ ಭೇದ. ಮತ ಪಂತ ಮರೆತು ಎಲ್ಲರನ್ನು ಗೌರವಿಸುವ ಪ್ರೀತಿಸುವ ಕೆಲಸ ಮಾಡಬೇಕು ಎಂದರು.
ಜಗತ್ತಿನಲ್ಲಿ ಸಂಸ್ಕಾರ ಬಹಳ ಮುಖ್ಯವಾಗಿದೆ.ಮುಂದಿನ ಪೀಳಿಗೆಗೆ ಸಂಸ್ಕಾರದ ಪಾಠ ಮಾಡಬೇಕು. ಎಂದರು
ಸಮಾಜ ವ್ಯವಸ್ಥೆ ಹಾಳಾಗುತ್ತಿದ್ದೂಮಕ್ಕಳು ಡ್ರಗ್ಸ್. ಬೆಟ್ಟಿಂಗ್. ಗಾಂಜಾ ಮೊಬೈಲ್ ಲವ್ ಇವುಗಳಿಂದ ಜಾಗ್ರತೆ ಆಗಬೇಕು
ಮಕ್ಕಳು ದುಷ್ಟ ಚಟಗಳಿಂದ ದೂರ ಇದ್ದು ಜಗತ್ತು ಕಟ್ಟುವ ಕನಸನ್ನು ಕಾಣಬೇಕು ಎಂದರು
ಇದೆ ಸಂದರ್ಭದಲ್ಲಿ ವೈಡಕೀಯ ರಾಜಕೀಯಸಾಮಾಜಿಕ, ಶೈಕ್ಷಣಿಕ ಕ್ಷೆತ್ರಗಳಲ್ಲಿ ಸಾಧನೆಗೈದ ಸಾಧಕರನ್ನು ಗೌರವಿಸಿ ಸನ್ಮಾನಿಸಲಾಯಿತು.
ಈ ಕಾರ್ಯಕ್ರಮದಲ್ಲಿ ಜುನಾಬ್ ಶರೀಫ್ ಎ. ಎಂ. ಪತ್ರಕರ್ತ ಅಬ್ಬಾಸ್ ಕಿರಗುಂದ, ಅಹಮದ್ ಬಾವ, ಬಿಳಗುಳ.ಸಿರಾಜ್ ಅಹಮದ್,ಜನಾಬ್ ಹಸೈನರ್ ಕೊಟ್ಟಿಗೆಹಾರ.ಜನಾಬ್ ಎ. ಸಿ.ಆಸೀಫ್ ಹಾಜಿ ಜನಾಬ್ ಮಹಮ್ಮದ್ ಆಲಿ ಹನೀಫಿ ಹಾಜಿ ಜನಾಬ್ ಅಬ್ದುಲ್ ಹಮೀದ್ ಸಬ್ಬೆನಹಳ್ಳಿ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.
ವರದಿ :ಪುನೀತ್ ಕಡಿದಾಳ್
9483811948
