ಹಾಸನ: ಬೂಕರ್ ಪ್ರಶಸ್ತಿ ವಿಜೇತೆ ಬಾನು ಮುಷ್ತಾಕ್ ಅವರು ಹಾಸನಾಂಬ ದೇವಿ ದರ್ಶನ ಪಡೆದರು.ಹಲವು ವಿರೋಧಗಳ ನಡುವೆಯೂ ಅಪ್ಪಟ ಕನ್ನಡತಿಯಂತೆ ಬಂದು ವಿಶ್ವವಿಖ್ಯಾತ ಮಯಸೂರು ದಸರಾ ಮಹೋತ್ಸವವನ್ನು ಉದ್ಘಾಟಿಸಿ ದಿಟ್ಟ ಉತ್ತರ ಕೊಟ್ಟ ಮಹಿಳೆ ಹಾಸನಾಂಬ ದೇವಿಯ ದರ್ಶನ ಪಡೆದರು.
ಆ ನಂತರ ಮಾತನಾಡಿದ ಅವರು, ಇದು ಮೊದಲನೇ ಬಾರಿ ದರ್ಶನ ಪಡೆಯುತ್ತಿಲ್ಲ. ನಮ್ಮ ಮನೆ ಮುಂದಿನ ಬೀದಿಯಲ್ಲಿದೆ. ಚಿಕ್ಕಂದಿನಿಂದಲೂ ತಾಯಿಯ ಕೈ ಬೆರಳು ಹಿಡಿದುಕೊಂಡು ದೇವಿ ದರ್ಶನಕ್ಕೆ ಬರ್ತಿದ್ದೆ. ಆಗ ಯಾರಿಗೂ ಗೊತ್ತಾಗುತ್ತಿರಲಿಲ್ಲ ಇದು ಗೊತ್ತಾಗುತ್ತಿದೆ. ಭಾವೈಕ್ಯತೆಯ ಸಂಕೇತ ಇದು ಎಂದರು.
ಬಹಳ ಹಿಂದಿನಿಂದಲೂ ಮುಸ್ಲಿಮರು ಹಸನ್ ಬಿ ಹುಸೇನ್ ಬಿ ಎಂದು ನಂಬುವ ಕಾಲವಿತ್ತು. ನಮ್ಮ ಪೂರ್ವಿಕರು ಮುಸ್ಲಿಂ ಹೆಣ್ಣುಮಕ್ಕಳನ್ನು ಕರೆದುಕೊಂಡು ಬಂದು ಹೇಳಿ ಕೊಡುತ್ತಿದ್ದರು. ಹಾಗಾಗಿ ಇದು ಭಾವೈಕ್ಯತೆಯ ಸ್ಥಳ ಎಂದರು.
