Friday, March 27, 2026
Homeಜಿಲ್ಲಾಸುದ್ದಿಮೂಡಿಗೆರೆ: ರಾಷ್ಟೀಯ ಸ್ವಯಂ ಸೇವಕ ಸಂಘ ಶತಾಬ್ದಿ ಅಂಗವಾಗಿ ಸ್ವಯಂ ಸೇವಕರಿಂದ ಸಂಭ್ರಮದ ಪಥಸಂಚಲನ

ಮೂಡಿಗೆರೆ: ರಾಷ್ಟೀಯ ಸ್ವಯಂ ಸೇವಕ ಸಂಘ ಶತಾಬ್ದಿ ಅಂಗವಾಗಿ ಸ್ವಯಂ ಸೇವಕರಿಂದ ಸಂಭ್ರಮದ ಪಥಸಂಚಲನ

ಮೂಡಿಗೆರೆ: ಪಟ್ಟಣದ ಪ್ರಮುಖ ಬೀದಿಗಳಲ್ಲಿ ರಾಷ್ಟ್ರೀಯ ಸ್ವಯಂ ಸೇವಕ ಸಂಘಟನೆ ಕಾರ್ಯಕರ್ತರು ರಾಷ್ಟೀಯ ಸ್ವಯಂ ಸೇವಕ ಸಂಘ ಆರಂಭವಾಗಿ ನೂರು ವರುಷ ಪೂರೈಸಿದ ಹಿನ್ನಲೆ ಹಾಗೂ ವಿಜಯದಶಮಿ ಅಂಗವಾಗಿ ಕಾರ್ಯಕರ್ತರು ಪಥಸಂಚಲನ ನೆರವೇರಿಸಿದರು

​ಪಟ್ಟಣದ ವೇಣುಗೋಪಾಲಸ್ವಾಮಿ ದೇವಾಲಯದಿಂದ ಆರಂಭವಾದ ಮೆರವಣಿಗೆ ಮೂಡಿಗೆರೆ ರಾಜಬೀದಿಗಳಲ್ಲಿ ಇಂದು ಸಂಜೆ ಆರ್‌ಎಸ್‌ಎಸ್‌ ವತಿಯಿಂದ ಸುಮಾರು 600 ಕ್ಕೂ ಹೆಚ್ಚು ಗಣವೇಶದಾರಿಗಳು ಪಥ ಸಂಚಲನ ನಡೆಸಿದರು

ರಾಷ್ಟ್ರೀಯ ಸ್ವಯಂಸೇವಕ ಸಂಘ (ಆರ್‌ಎಸ್‌ಎಸ್‌) ಸ್ಥಾಪನೆಯಾಗಿ 100ನೇ ವರ್ಷಾಚರಣೆ ಪೂರೈಸಿದ ಅಂಗವಾಗಿ ಸ್ವಯಂ ಸೇವಕರಿಂದ ಪಥ ಸಂಚಲನ ನಡೆಯಿತು. ಈ ಸಂದರ್ಭದಲ್ಲಿ ಪಟ್ಟಣದ ಪ್ರಮುಖ ಬೀದಿಗಳನ್ನು ಮಾತ ಭಗೀನಿಯರು ರಂಗೋಲಿ ಹಾಕಿ ಪುಷ್ಪರ್ಚನೆ ಸಲ್ಲಿಸಿ ರಾಷ್ಟ್ರೀಯ ಸ್ವಯಂ ಸೇವಕರನ್ನು ಗೌರವಿಸಿದರು.

ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಸಂಸ್ಥಾಪಕರಾದ ಕೆ.ಬಿ.ಹೆಡಗೇವಾರ್, ಎಂ.ಎಸ್‌.ಗೋಳ್ವಾಲ್ಕರ್ ಅವರ ಭಾವಚಿತ್ರದ ಮೆರವಣಿಗೆ ನಡೆಸಿದ ಸದಸ್ಯರು, ಭಗವಾಧ್ವಜಕ್ಕೆ ಗೌರವ ಸಲ್ಲಿಸಿದರು

ಎಲ್ಲ ಭೇದ ಮರೆತು ಬನ್ನಿರಿ ನಾವು ಸಮಾನ…’, ‘ದೇವರಿಗಿಲ್ಲ ಜಾತಿ ಭೇದ.. ಭಕುತರಿಗಂತೂ ಇಲ್ಲ…’ ಹಾಗೂ ಕೊನೆಯಲ್ಲಿ ಆರ್‌ಎಸ್‌ಎಸ್‌ ಗೀತೆ ‘ನಮಸ್ತೇ ಸದಾ ವತ್ಸಲೆ’ ಅನ್ನು ಸದಸ್ಯರು ಹಾಡಿದರು.

ಹಿರಿಯ ಸ್ವಯಂ ಸೇವಕರ ನೇತೃತ್ವದಲ್ಲಿ ಪಥ ಸಂಚಲನ ಕಾರ್ಯಕ್ರಮ ಅದ್ದೂರಿಯಾಗಿ ನಡೆಯಿತು.

ಚಿಕ್ಕ ಮಕ್ಕಳು ಗಣವೇಶ ಧರಿಸಿ ಕಾರ್ಯಕ್ರದಲ್ಲಿ ಭಾಗಿಯಾಗಿದ್ದು ಹಾಗೂ ಸ್ವಂತಂತ್ರ್ಯ ಹೋರಾಟಗಾರರ ಭಾವಚಿತ್ರಗಳು ಕಣ್ಮನ ಸೆಳೆಯಿತು.

ಈ ಕಾರ್ಯಕ್ರಮ ದಲ್ಲಿ ಎಂ. ಕೆ. ಪ್ರಾಣೇಶ್, ದೀಪಕ್ ದೊಡ್ಡಯ್ಯ ವಿನೋದ್ ಕಣಚೂರು, ಸುರೇಂದ್ರ ಕೋಣಗೆರೆ, ಸುದೇವ್ ಗುತ್ತ,. ಮನೋಜ್ ಹಳೇಕೋಟೆ, ಆನಂದ್ ಕಣಚೂರು, ಮಲ್ಲೇಶ್ ಕಡಿದಾಳು, ಅಜಿತ್ ಕಡಿದಾಳು ಸೇರಿದಂತೆ ಕಾರ್ಯಕರ್ತರು ಮಹಿಳೆಯರು, ಮಕ್ಕಳು ಪಾಲ್ಗೊಂಡಿದ್ದರು.

ವರದಿ : ಪುನೀತ್ ಕಡಿದಾಳ್ 

9483811948

RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular

Recent Comments

error: Content is protected !!