Monday, February 9, 2026
Homeಕ್ರೈಮ್ಎನ್ ಆರ್ ಪುರ: ಫಾರಂ ಕೋಳಿಗೆ ವಿಷ ಹಾಕಿ ನಾಯಿಗಳನ್ನ ಕೊಲ್ಲಲ್ಲು ಯತ್ನ!

ಎನ್ ಆರ್ ಪುರ: ಫಾರಂ ಕೋಳಿಗೆ ವಿಷ ಹಾಕಿ ನಾಯಿಗಳನ್ನ ಕೊಲ್ಲಲ್ಲು ಯತ್ನ!

ಚಿಕ್ಕಮಗಳೂರು: ಕಾಫಿನಾಡಿನಲ್ಲೊಂದು ಮನಕಲಕುವ ದಾರುಣ ಘಟನೆ ನಡೆದಿದ್ದು ಫಾರಂ ಕೋಳಿಗೆ ಟಿಮೆಟ್(ವಿಷ) ಹಾಕಿ 5 ನಾಯಿಗಳನ್ನ ಕೊಲ್ಲಲ್ಲು ಕಿಡಿಗೇಡಿಗಳು ಪ್ರಯತ್ನಿಸಿದ್ದಾರೆ.

ಹೌದು .. ಎನ್ ಆರ್ ಪುರ ತಾಲೂಕಿನ ಅಬ್ಬಿಗುಂಡಿಯ ಸತ್ಯನಾರಾಯಣ ಎಂಬುವರಿಗೆ ಸೇರಿದ ನಾಯಿಗಳಿಗೆ ಟಿಮೆಟ್ ಹಾಕಲಾಗಿದೆ. ಕೂಡಲೇ ಚಿಕಿತ್ಸೆ ಕೊಡಿಸಿ, ನಾಯಿಗಳನ್ನ ಬದುಕಿಸಲು ಇನ್ನಿಲ್ಲದ ಪ್ರಯತ್ನವನ್ನ ಮಾಲೀಕರು ಮಾಡಿದ್ದಾರೆ. ಆದರೆ 5ರಲ್ಲಿ 2 ನಾಯಿಗಳು ಸಾವನ್ನಪ್ಪಿದ್ದು, ಮೂರು ನಾಯಿಗಳು ಜೀವನ್ಮರಣ ಹೋರಾಟ ನಡೆಸುತ್ತಿವೆ.

ಘಟನೆಯಿಂದ ತುಂಬಾ ನೊಂದಿರೋ ಸತ್ಯನಾರಯಣ ಅವರು, ಈ ಕೃತ್ಯ ಎಸಗಿರುವ ಕಿಡಿಗೇಡಿಗಳಿಗೆ ದೇವರು ಒಳ್ಳೆ ಬುದ್ದಿ ಕೊಡಲಿ ಅಂತಾ ಬೇಡಿಕೊಂಡಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular

Recent Comments

error: Content is protected !!