ಹಾಸನ: ಸರಿಯಾದ ವೇಳೆಗೆ ಬಸ್ ಇಲ್ಲದ ಕಾರಣ ಬಸ್‌ಗಳನ್ನು ತಡೆದು ವಿದ್ಯಾರ್ಥಿಗಳು ದಿಢೀರ್ ಪ್ರತಿಭಟನೆ ನಡೆಸುತ್ತಿರುವ ಘಟನೆ ಹಾಸನ ಜಿಲ್ಲೆಯ ಬೇಲೂರು ಪಟ್ಟಣದ ಸಾರಿಗೆ ಬಸ್ ನಿಲ್ದಾಣದಲ್ಲಿ ನಡೆದಿದೆ.
ಹೌದು .. ಬೇಲೂರಿನಿಂದ ಹಾಸನ ಹಾಗೂ ಚಿಕ್ಕಮಗಳೂರಿಗೆ ಬಸ್‌ಗಳಿಲ್ಲದೆ ವಿದ್ಯಾರ್ಥಿಗಳಿಗೆ ತೊಂದರೆ ಅನುಭವಿಸುತ್ತಿದ್ದು ಶಾಲಾ-ಕಾಲೇಜುಗಳಿಗೆ ಸಮಯಕ್ಕೆ ತೆರಳಲು ಪರದಾಟ ಹಾಗೆ ಸಮರ್ಪಕ ಬಸ್ ಸೌಲಭ್ಯ ಕಲ್ಪಿಸುವಂತೆ ಒತ್ತಾಯಿಸಿ ಬಸ್‌ಗಳನ್ನು ತಡೆದು ಪ್ರತಿಭಟನೆ ನಡೆಸಲಾಗುತ್ತಿದೆ.
ವಿದ್ಯಾರ್ಥಿಗಳು ಪ್ರತಿಭಟನೆ ನಡೆಸಿದ್ದರಿಂದ ಪ್ರಯಾಣಿಕರು ಪರದಾಡುವಂತಾಗಿದ್ದು ಪ್ರತಿಭಟನಾನಿರತ ವಿದ್ಯಾರ್ಥಿಗಳು ಹಾಗೂ ಸಾರಿಗೆ ಬಸ್ ನಿರ್ವಾಹಕರ ನಡುವೆ ವಾಗ್ವಾದ ಕೂಡ ನಡೆಯುತ್ತಿದೆ. ಹಾಗೆ ಬಸ್ ಸೌಕರ್ಯ ಕಲ್ಪಿಸದಿದ್ದರೆ ಉಗ್ರ ಹೋರಾಟದ ಎಚ್ಚರಿಕೆ ಸಹ ನೀಡಿದರು.
ಬೇಲೂರಿನಲ್ಲಿ ಬಸ್ ಡಿಪೋ ಇದ್ದರೂ ಸಹ ವಿದ್ಯಾರ್ಥಿಗಳಿಗೆ ಪ್ರತಿ ಮೂರು ತಿಂಗಳಿಗೊಮ್ಮೆ ತೊಂದರೆ ಆಗುತ್ತದೆ ಎಂದು ವಿದ್ಯಾರ್ಥಿಗಳ ಅಳಲು ತೋಡಿಕೊಂಡು ಬಸ್ ಗಳನ್ನು ಕೇಳಲು ಹೋದರೆ ಅಧಿಕಾರಿಗಳ ದರ್ಪ ಮೆರೆಯುತ್ತಿದ್ದು ಇದರಿಂದ ಮನದೊಂದು ಇಂದು ಪ್ರತಿಯೊಬ್ಬ ಹಾಸನ ಮತ್ತು ಚಿಕ್ಕಮಂಗಳೂ ಕಡೆಗೆ ಹೋಗುವ ಶಾಲಾ ಕಾಲೇಜು ವಿದ್ಯಾರ್ಥಿಗಳು ಬಸ್ ಗಳನ್ನ ತಡೆದು ಉಗ್ರ ರೀತಿಯಲ್ಲಿ ಪ್ರತಿಭಟನೆ ನಡೆಸಲಾಗುತ್ತಿದೆ.
ಸ್ಥಳಕ್ಕೆ ಬಾರದ ಅಧಿಕಾರಿಗಳು ಹಾಗೆ ವಿಷಯ ತಿಳಿದು ದೂರವಾಣಿ ಕರೆಯ ಮೂಲಕ ಶಾಸಕ ಎಚ್ ಕೆ ಸುರೇಶ್ ಅಧಿಕಾರಿಗಳಿಗೆ ತರಾಟೆ ತೆಗೆದುಕೊಂಡಿದ್ದಾರೆ.
ಕೂಡಲೇ ಸ್ಥಳಕ್ಕೆ ಆಗಮಿಸಿದ ಕೆಲ ಡಿಪೋ ಅಧಿಕಾರಿಗಳು ನಾಳೆಯಿಂದ ಪ್ರತಿನಿತ್ಯ ಹಾಸನ ಮತ್ತು ಚಿಕ್ಕಮಗಳೂರು ಕಡೆಗೆ ಮೂರು ಬಸ್ ಗಳನ್ನು ಬಿಡಬೇಕು. ಇಲ್ಲದಿದ್ದರೆ ನಾನೇ ನಿಮ್ಮ ವಿರುದ್ಧ ಮೇಲಾಧಿಕಾರಿಗಳಿಗೆ ದೂರು ನೀಡುತ್ತೇನೆ ಎಂದು ಎಚ್ಚರಿಕೆ ಸಹ ನೀಡಿದರು. ಹಾಸನ ಮತ್ತು ಚಿಕ್ಕಮಗಳೂರು ಕಡೆಗೆ ಎರಡೆರಡು ಬೀಟ್ ಅಧಿಕಾರಿಗಳು ನಾಳೆ ವಿದ್ಯಾರ್ಥಿಗಳ ಸಮಸ್ಯೆಯನ್ನು ಆಲಿಸಲು ಸ್ಥಳಕ್ಕೆ ಬರುವುದಾಗಿ ಶಾಸಕ ಸುರೇಶ್ ಅವರಿಗೆ ಭರವಸೆ ಕೂಡ ನೀಡಿದರು.
