Wednesday, July 15, 2026
Homeಜಿಲ್ಲಾಸುದ್ದಿಮಲೆನಾಡು ಮತ್ತು ಕರಾವಳಿ ಜನಪರ ಒಕ್ಕೂಟವನ್ನು ಅವಮಾನಿಸಿರುವುದು ಖಂಡನೀಯ: ಅನಿಲ್ ಹೊಸಕೊಪ್ಪ

ಮಲೆನಾಡು ಮತ್ತು ಕರಾವಳಿ ಜನಪರ ಒಕ್ಕೂಟವನ್ನು ಅವಮಾನಿಸಿರುವುದು ಖಂಡನೀಯ: ಅನಿಲ್ ಹೊಸಕೊಪ್ಪ

Telegram Group
Join Now

ಶೃಂಗೇರಿ: ಮಲೆನಾಡು ಮತ್ತು ಕರಾವಳಿ ಒಕ್ಕೂಟವನ್ನು ಬಿಜೆಪಿ ಮುಖಂಡ ಶೆಟ್ಟಿಗದ್ದೆ ರಾಮಸ್ವಾಮಿ ಅವರು ಸಭೆಯಲ್ಲಿ ಅವಮಾನಿಸಿರುವುದು ಖಂಡನೀಯ ಎಂದು ಮಲೆನಾಡು ಕರಾವಳಿ ಜನಪರ ಒಕ್ಕೂಟದ ರಾಜ್ಯ ಸಂಚಾಲಕ ಅನಿಲ್ ಹೊಸಕೊಪ್ಪ ಆಕ್ರೋಶವ್ಯಕ್ತಪಡಿಸಿದರು.


ಶೃಂಗೇರಿ ಪಟ್ಟಣದ ಕನ್ನಡ ಭವನದಲ್ಲಿ ಆಯೋಜಿಸಿದ ಬಹಿರಂಗ ಸಭೆಯಲ್ಲಿ ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.ರಾಜ್ಯ ಮಟ್ಟದಲ್ಲಿ ಹೋರಾಟ ನಡೆಸುವ ನಮ್ಮ ತಂಡವನ್ನು ಅವಹೇಳನಕಾರಿಯಾಗಿ ಟೀಕಿಸಿದ್ದಾರೆ. ಮಲೆನಾಡಿಗರ ಪರ ಧ್ವನಿ ಎತ್ತಿರುವ ಒಕ್ಕೂಟಕ್ಕೆ ಅವಮಾನ ಮಾಡಿದ್ದಾರೆ. ಯಾವುದೇ ಪಕ್ಷ ಅಧಿಕಾರದಲ್ಲಿದ್ದಾಗಲೂ ಜನರ ಸಮಸ್ಯೆಗೆ ಹೋರಾಟ ನಡೆಸಿದ್ದೇವೆ.

ನಮ್ಮ ಸಭೆಗೆ ರಾಜಕೀಯ ಮುಖಂಡರು. ಶಾಸಕರು, ಮಾಜಿ ಸಚಿವರು ಬಂದಿದ್ದಾರೆ. ಇತ್ತೀಚೆಗೆ ಅರಣ್ಯ ಸಚಿವರ ಹೇಳಿಕೆ ವಿರುದ್ಧ ಚರ್ಚಿಸಲು ರಂಭಾಪುರಿ ಸ್ವಾಮೀಜಿ, ಗುಣನಾಥ ಸ್ವಾಮೀಜಿ ಭಾಗವಹಿಸಿದ್ದರು. ಇದು ಸ್ವಾಮೀಜಿಗಳಿಗೆ ಮಾಡಿದ ಅವಮಾನ ಎಂದರು.

ಒಕ್ಕೂಟದ ಕಣದಮನೆ ಜಗದೀಶ್ ಮಾತನಾಡಿ, ಪಶ್ಚಿಮ ಘಟ್ಟವನ್ನು ಯುನೆಸ್ಕೊ ಪಟ್ಟಿಗೆ ಸೇರಿಸುವ ವಿರುದ್ಧ ನಡೆದ ಒಕ್ಕೂಟದ ಹೋರಾಟದಲ್ಲಿ ಬಿಜೆಪಿಯ ಮಾಜಿ ಶಾಸಕ ಡಿ.ಎನ್ ಭಾಗವಹಿಸಿದ್ದರು. ಜೀವರಾಜ್ ಹಾಗಾದರೆ ಅವರನ್ನೂ ನೀವು ಅವಮಾನಿಸುವಿರಾ ಎಂದು ಕೇಳಿದರು.


ಒಕ್ಕೂಟದ ಬೆಂಗಳೂರು ನಗರ ಸಂಚಾಲಕ ಪ್ರವೀಣ್ ಹಗಡೂರು, ಯುವ ಕಾಂಗ್ರೆಸ್ ಅಧ್ಯಕ್ಷ ಪ್ರದೀಪ್ ಕಲ್ಲೋಳ್ಳಿ, ಕೆ.ಟಿ ಮಂಜುನಾಥ್, ಸಂಪೇಕೊಳಲು,ರತ್ನಾಕರ್, ಸಂತೋಷ್ ಕಾಳ್ಯ, ಶುಭಾ ಹೆಗ್ಡೆ, ಅವಿನಾಶ್, ಸುಬ್ಬಣ್ಣ, ಹುಲುಗಾರು, ಪ್ರದೀಪ್ ಯಡದಾಳು, ರಾಜ್ ಕುಮಾರ್ ಹೆಗ್ಡೆ ಭಾಗವಹಿಸಿದ್ದರು.

ವರದಿ: ವಿಠಲ್‌ ಶೃಂಗೇರಿ

7676798969

RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular

Recent Comments