Friday, February 20, 2026
Homeಜಿಲ್ಲಾಸುದ್ದಿಮೂಡಿಗೆರೆ: ಕುಂಬಾರ ಸಂಘದ ನೂತನ ಪದಾಧಿಕಾರಿಗಳ ನೇಮಕ

ಮೂಡಿಗೆರೆ: ಕುಂಬಾರ ಸಂಘದ ನೂತನ ಪದಾಧಿಕಾರಿಗಳ ನೇಮಕ

ಮೂಡಿಗೆರೆ: 2025-26ನೇ ಸಾಲಿನ ಮೊದಲ ಮಾಸಿಕ ಸಭೆ ಮೂಡಿಗೆರೆಯ ಕುಂಬಾರ ಸಂಘದ ಕಚೇರಿಯಲ್ಲಿ ಭಾನುವಾರ ನಡೆಯಿತು.

ಈ ಕಾರ್ಯಕ್ರಮದಲ್ಲಿ ಸಂಘದ ಅಧ್ಯಕ್ಷರು, ಸದಸ್ಯರು ಹಾಗೂ ನಿರ್ದೇಶಕರುಗಳು ಭಾಗವಹಿಸಿದ್ದು ನೂತನ ಪದಾಧಿಕಾರಿಗಳ ಜವಾಬ್ದಾರಿಗಳನ್ನ ನೀಡಲಾಯಿತು.

ಸಂಘದ ಹೊಸ ಪದಾಧಿಕಾರಿಗಳು ಮತ್ತು ಸದಸ್ಯರಿಗೆ ಈ ಸಭೆಯಲ್ಲಿ ವಿಶೇಷ ಸ್ವಾಗತ ನೀಡಲಾಗಿದ್ದು
ಕುಂಬಾರ ಸಂಘದ ನೂತನ ಸದಸ್ಯರಾದ ಜಗದೀಶ್ ಮೂಡಿಗೆರೆ, ರಮೇಶ್ D.P. ಜಾವಳಿ, ವಿನೋದ್ ಜನ್ನಾಪುರ, ಮಮತಾ ದಿನೇಶ್ ಕುಂದೂರ್, ಮತ್ತು ರಘು ಮೂಡಿಗೆರೆ ಅವರಿಗೆ ಸನ್ಮಾನಿಸಿ ಗೌರವಿಸಲಾಯಿತು.

ಈ ಸಂದರ್ಭದಲ್ಲಿ ಕುಂಬಾರ ಸಂಘದ ಅಧ್ಯಕ್ಷರಾದ ಹರೀಶ್ ಕುಮಾರ್ ಮಾತನಾಡಿ ಅವರು ಸಂಘದ ಗುರಿಗಳನ್ನು ಸಾಧಿಸುವಲ್ಲಿ ಕೈಜೋಡಿಸುವ ಬಗ್ಗೆ ಆಶಾಭಾವನೆಯನ್ನು ವ್ಯಕ್ತಪಡಿಸಿದರು ಈ ವೇಳೆ, ಹೊಸ ಸದಸ್ಯರಿಗೆ ಶಾಲು ಹಾಕಿ ಗೌರವಿಸಿ ಮತ್ತು ಸಂಘದ ಮುಂದಿನ ಯೋಜನೆಗಳ ಬಗ್ಗೆ ತಿಳಿಸಿದರು

ಸಂಘದ ಕಾರ್ಯವೈಖರಿ ಹಾಗೂ ಮುಂದಿನ ಕಾರ್ಯಕ್ರಮಗಳ ಬಗ್ಗೆ ವಿವರಗಳನ್ನು ನೀಡಿದ ಹೊಸ ಸದಸ್ಯರ ಸೇರ್ಪಡೆಗೆ ವೈಯಕ್ತಿಕ ಸ್ವಾಗತ ಕೋರಿದರು. ಸಭೆಯಲ್ಲಿ ಗುಂಪಿನ ಆಂತರಿಕ ಕಾರ್ಯವನ್ನು ಗಟ್ಟಿ ಮಾಡುವ ಬಗ್ಗೆ ವಿವರಣೆ ನೀಡಿ ಮುಂದಿನ ದಿನಗಳಲ್ಲಿ ಹಮ್ಮಿಕೊಳ್ಳುವ ವಿವಿಧ ಸಾಂಸ್ಕೃತಿಕ ಹಾಗೂ ಸಾಮಾಜಿಕ ಚಟುವಟಿಕೆಗಳ ಕುರಿತು ವಿವರಿಸಿದರು

ಈ ಕಾರ್ಯಕ್ರಮವು ಸಂಘದ ನಿರಂತರ ಪ್ರಗತಿಗೆ ಹಾಗೂ ಸಾಮೂಹಿಕ ಉದ್ದೇಶಗಳ ಸಾಧನೆಗೆ ಒಂದು ಮಹತ್ವಪೂರ್ಣ ಹಂತವಾಗಿದೆ ಎಂದರು

ಈ ಕಾರ್ಯಕ್ರಮದಲ್ಲಿ ಕುಂಬಾರ ಸಂಘಟನೆ ಉಪಾಧ್ಯಕ್ಷ ಪೂರ್ಣೇಶ್, ಗೌರವ ಅಧ್ಯಕ್ಷ ಮಂಜುನಾಥ, ನಂಜೇಶ್‌, ನಾಗೇಶ್‌ ಸೇರಿದಂತೆ ಕುಂಬಾರ ಶೆಟ್ಟಿ ಸಮುದಾಯದ ಹಲವು ಕಾರ್ಯಕರ್ತರು ಉಪಸ್ಥಿತರಿದ್ದರು

RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular

Recent Comments

error: Content is protected !!