Saturday, August 15, 2026
Homeಜಿಲ್ಲಾಸುದ್ದಿಮೂಡಿಗೆರೆ: ಚಿಂತನ ಫೌಂಡೇಷನ್ ಹಾಗೂ ಗೂಂಜ್ ಸಂಸ್ಥೆ ವತಿಯಿಂದ ವಿದ್ಯಾರ್ಥಿಗಳಿಗೆ ಆಟೋಟ ಸ್ಪರ್ಧೆ ಹಾಗೂ ಶಾಲಾ...

ಮೂಡಿಗೆರೆ: ಚಿಂತನ ಫೌಂಡೇಷನ್ ಹಾಗೂ ಗೂಂಜ್ ಸಂಸ್ಥೆ ವತಿಯಿಂದ ವಿದ್ಯಾರ್ಥಿಗಳಿಗೆ ಆಟೋಟ ಸ್ಪರ್ಧೆ ಹಾಗೂ ಶಾಲಾ ಸಾಮಾಗ್ರಿ ವಿತರಣೆ

Telegram Group
Join Now

ಮೂಡಿಗೆರೆ: ಕಿರುಗುಂಧ ಪಂಚಾಯತಿ ವ್ಯಾಪ್ತಿಯು ಸ. ಕಿ. ಪ್ರಾಥಮಿಕ  ಶಾಲೆ ಕಿರುಗುಂದ ಹಾಗೂ ಉದುಸೆ (ದಿಣ್ಣೆಕೆರೆ)ಯ ಸರ್ಕಾರಿ ಶಾಲೆಯ ಮಕ್ಕಳಿಗೆ ನೋಟ್ಬುಕ್, ಬ್ಯಾಗ್, ಓದುವುದಕ್ಕೆ ಬೇಕಾಗುವ ಸಾಮಾಗ್ರಿಗಳನ್ನು ವಿತರಿಸಲಾಯಿತು.

ಈ ಸಂದರ್ಭದಲ್ಲಿ ಚಿಂತನ ಫೌಂಡೇಷನ್ ಅಧ್ಯಕ್ಷ ಪೂವಪ್ಪ ಆನೇದಿಬ್ಬ ಮಾತನಾಡಿ ಸಮಾಜಸೇವೆ ನಮ್ಮ ಮೂಲ ಧ್ಯೇಯೋದ್ದೇಶವಾಗಿದೆ ಎಂದರು. DSS ಜಿಲ್ಲಾ ಅಧ್ಯಕ್ಷ ಸುಂದ್ರೇಶ್ ಹೊಯ್ಸಳಲು ಮಾತನಾಡಿ, ನಾವು ಸಮಾಜಸೇವೆಗೆ ಮುಂದಾಗಿರುವುದು ಹಾಗೂ ಸಮಾಜಸೇವೆಗೆ ನಮ್ಮ ಸಂಘಟನೆಯ ಕಾರ್ಯಕರ್ತರು ಸಮರ್ಥವಾಗಿ ಸಮಸ್ಯೆ ಎದುರಿಸುವಲ್ಲಿ ಸಫಲರಾಗುತ್ತಿದ್ದಾರೆ. ಮೂಡಿಗೆರೆ ಕ್ಷೇತ್ರದಲ್ಲಿ ಜನಪ್ರಿಯವಾಗಿ ಸಂಘಟನೆ ಪ್ರಬಲವಾಗುತ್ತಿದೆ ಎಂದರು.

ಕಿರುಗುಂಧ ಗ್ರಾಮದ ಹಿರಿಯ ನಾಯಕರು ರಾಮಯ್ಯ ಮಾತನಾಡಿ ಇಂತಹ ಸಂಸ್ಥೆಯ ನಮ್ಮ ಬಡವರಿಗೆ ವರದಾನವಾಗಿದೆ ಎಂದರು. ಈ ಸಂಧರ್ಭದಲ್ಲಿ ತಾಲ್ಲೂಕು ಅಧ್ಯಕ್ಷರು, ಚಂದನ್ ಆನೆದಿಬ್ಬ, ಪುನೀತ್ ಕಿರುಗುಂದ, ಪೂರ್ಣೇಶ್ ಸೇರಿದಂತೆ ಶಾಲಾ ಶಿಕ್ಷಕರು, ಶಾಲಾ ಮಕ್ಕಳು ಹಾಜರಿದ್ದರು,

RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular

Recent Comments