Tuesday, February 10, 2026
Homeಜಿಲ್ಲಾಸುದ್ದಿಮೂಡಿಗೆರೆ: ಗೋಣಿಬೀಡು ಪೊಲೀಸ್ ಇಲಾಖೆ ಹಾಗೂ ಲಯನ್ಸ್ ಸಂಸ್ಥೆ ವತಿಯಿಂದ ರಾಷ್ಟ್ರೀಯ ಏಕತಾ ಓಟ ಆಯೋಜನೆ

ಮೂಡಿಗೆರೆ: ಗೋಣಿಬೀಡು ಪೊಲೀಸ್ ಇಲಾಖೆ ಹಾಗೂ ಲಯನ್ಸ್ ಸಂಸ್ಥೆ ವತಿಯಿಂದ ರಾಷ್ಟ್ರೀಯ ಏಕತಾ ಓಟ ಆಯೋಜನೆ

ಮೂಡಿಗೆರೆ: ಉಕ್ಕಿನ ಮನುಷ್ಯ ಸರ್ದಾರ್ ವಲ್ಲಭ ಬಾಯ್ ಪಟೇಲ್ ಅವರ 150 ನೇ ಜನ್ಮ ದಿನದ ಅಂಗವಾಗಿ ಗೋಣಿಬೀಡು ವ್ಯಾಪ್ತಿಯಲ್ಲಿ ಪೊಲೀಸ್ ಇಲಾಖೆ ಹಾಗೂ ವಿವಿಧ ಸಂಘ ಸಂಸ್ಥೆ ಸಾರ್ವಜನಿಕರು ಮ್ಯಾರಾಥನ್ ಓಟ ಆಯೋಜಿಸಲಾಯಿತು

ರಾಷ್ಟ್ರೀಯ ಏಕತಾ ದಿನ ಅಂಗವಾಗಿ ಜಿಲ್ಲಾ ಪೊಲೀಸ್ ವತಿಯಿಂದ ಇಂದು (ಅ.31) ಹಮ್ಮಿಕೊಂಡಿದ್ದ ರಾಷ್ಟ್ರೀಯ ಏಕತಾ ಓಟಕ್ಕೆ  ಗೋಣಿಬೀಡು ಠಾಣಾಧಿಕಾರಿ ಹರ್ಷವರ್ಧನ್ ಅವರು ಚಾಲನೆ ನೀಡಿದರು.ಏಕತಾ ಓಟವು ಗೋಣಿಬೀಡು ವೃತ್ತ ದಿಂದ ಆರಂಭವಾಗಿ ಪ್ರಮುಖ ರಸ್ತೆಗಳು ಒಳಗೊಂಡಂತೆ ಮೈದಾನಕ್ಕೆ ಬಂದು ಮುಕ್ತಾಯವಾಯಿತು.

ಏಕತಾ ಓಟದಲ್ಲಿ ಪೊಲೀಸ್ ಅಧಿಕಾರಿ ಸಿಬ್ಬಂದಿ, ಸಾರ್ವಜನಿಕರು ಭಾಗವಹಿಸಿದ್ದರು. ಏಕತಾ ಓಟದಲ್ಲಿ ಮೊದಲ 03 ವಿಜೇತರಿಗೆ  ಬಹುಮಾನ ವಿತರಿಸಲಾಯಿತು. ಈ ಏಕತಾ ಓಟದಲ್ಲಿ ಭಾಗವಹಿಸಿ ಪ್ರಥಮ ಬಹುಮಾನ: ಹರ್ಷವರ್ಧನ್( ಸಬ್ ಇನ್ಸ್ಪೆಕ್ಟರ್ )ಪಡೆದರೆ  ದ್ವಿತೀಯ ಬಹುಮಾನ: ಗೋವರ್ಧನ್ (ಸಾರ್ವಜನಿಕರು).ತೃತೀಯ ಬಹುಮಾನ ಪಾಲಕ್ಷ(ಪೊಲೀಸ್ )ತಮ್ಮದಾಗಿಸಿಕೊಂಡರು.

ಈ ಸಂದರ್ಭದಲ್ಲಿ ಗೋಣಿಬೀಡು ಪೊಲೀಸ್ ಠಾಣಾ ಸಿಬ್ಬಂದಿಯಾದ ರಂಗೇಗೌಡ ASI, ಜಾಫರ್ ಷರೀಫ್, ಜಗದೀಶ್, ಅಶ್ವಿನಿ ಗೋಣಿಬೀಡು ಲಯನ್ಸ್ ಕ್ಲಬ್ ಅಧ್ಯಕ್ಷ ನವೀನ್. ಸಂಸ್ಥೆಯ ಸದಸ್ಯರು ಸೇರಿದಂತೆ ಗೋಣಿಬಿಡು ನಾಗರಿಕರು ಉಪಸ್ಥಿತರಿದ್ದರು.

ವರದಿ :ಪುನೀತ್ ಕಡಿದಾಳ್

9483811948

RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular

Recent Comments

error: Content is protected !!