Monday, February 9, 2026
Homeಜಿಲ್ಲಾಸುದ್ದಿಮೂಡಿಗೆರೆ: ಜಿಲ್ಲಾ ಮಟ್ಟದ ಯುವ ಜನೋತ್ಸವ ಜಾನಪದ ಫಲಿತಾಂಶ ತಡೆಹಿಡಿಯಲು ಮಿತ್ರ ಜಾನಪದ ಸಂಘಟನೆಯಿಂದ ಆಗ್ರಹ

ಮೂಡಿಗೆರೆ: ಜಿಲ್ಲಾ ಮಟ್ಟದ ಯುವ ಜನೋತ್ಸವ ಜಾನಪದ ಫಲಿತಾಂಶ ತಡೆಹಿಡಿಯಲು ಮಿತ್ರ ಜಾನಪದ ಸಂಘಟನೆಯಿಂದ ಆಗ್ರಹ

ಮೂಡಿಗೆರೆ: ಜಿಲ್ಲಾ ಮಟ್ಟದ ಯುವಜನೋತ್ಸವವನ್ನು ಜಿಲ್ಲಾ ಆಡಳಿತ ಜಿಲ್ಲಾ ಪಂಚಾಯಿತಿ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಕರ್ನಾಟಕ ರಾಜ್ಯ ಯುವ ಸಂಘಗಳ ಒಕ್ಕೂಟ ಕನ್ನಡ ಜಾನಪದ ಪರಿಷತ್ ಚಿಕ್ಕಮಗಳೂರು ಇವರ ನೇತೃತ್ವದಲ್ಲಿ ಕುವೆಂಪು ಕಲಾಮಂದಿರದಲ್ಲಿ ಶುಕ್ರವಾರ ಬೆಳಗ್ಗೆ 10 ಗಂಟೆಯಿಂದ ಸಂಜೆ 6 ಗಂಟೆ ತನಕ ಜಾನಪದ ಗೀತೆ ಮತ್ತು ಜಾನಪದ ನೃತ್ಯ ಸ್ಪರ್ಧೆ ನಡೆದಿದೆ.

ಹೌದು .. ತಂಡ ಜಾನಪದ ಗೀತೆ ಸ್ಪರ್ಧೆಯಲ್ಲಿ ಭಾಗವಹಿಸಿದ ನವೀನ್‌ ಆನೆದಿಬ್ಬ, ಚಂದ್ರಶೇಖರ್‌ ಕೆಸಿ ಅವರು ಜಂಟಿ ಸುದ್ದಿಗೋಷ್ಠಿ ನಡೆಸಿ ಜಾನಪದ ಗೀತೆಯಲ್ಲಿ ನಮ್ಮ ತಂಡವನ್ನು ಪ್ರತಿನಿಧಿಸುತ್ತೇನೆ ನಮ್ಮ ತಂಡವು ಇಲಾಖೆ ಎಲ್ಲಾ ನಿಯಮಾವಳಿಗಳಿಗೆ ಬದ್ಧವಾಗಿ ಸ್ಪರ್ಧೆಯಲ್ಲಿ ಭಾಗವಹಿಸಿರುತ್ತದೆ ಆದರೆ ಶುಕ್ರವಾರ ನಡೆದ ಜಾನಪದ ಗೀತೆ ಪದ್ಯದಲ್ಲಿ ಒಟ್ಟು ಒಂಬತ್ತು ತಂಡಗಳು ಭಾಗವಹಿಸಿದ್ದವು ಈ ಸ್ಪರ್ಧೆಗೆ ಮೂರು ತೀರ್ಪುಗಾರರಾಗಿ ಭಾಗವಹಿಸಿರುತ್ತಾರೆ.

ಆದರೆ ಈ ವೇಳೆ ಕೆಪಿ ಪೂರ್ಣಚಂದ್ರ ತೇಜಸ್ವಿ ತಂಡದಲ್ಲಿ ವಯೋಮಿತಿ ಮೀರಿದ ಕೆಲ ಯುವಕರು ಭಾಗವಹಿಸಿದ್ದಾರೆ ಎಂದು ನಮ್ಮ ತಂಡವು ಮೊದಲಿಗೆ ತಕರಾರನ್ನು ಸಲ್ಲಿಸಿದ್ದು ಆ ನಂತರ ಅವರಿಗೆ ಹಾಡಲು ಅವಕಾಶ ಮಾಡಿಕೊಟ್ಟರು ಅದರ ಫಲಿತಾಂಶ ಬಂದಿರುತ್ತದೆ ಅದಾದ ನಂತರ ಫಲಿತಾಂಶದಲ್ಲಿ ಪಾರದರ್ಶಕತೆ ಇಲ್ಲವೆಂದು ನಮಗೆ ಸಂಶಯ ಬಂದಿದ್ದರಿಂದ ತೀರ್ಪುಗಾರರು ನೀಡಿದಂತ ಕೂಡಿಕೃತ ಅಂಕಪಟ್ಟಿಯನ್ನು ತರಿಸಿಕೊಂಡು ಗಮನಿಸಿದಾಗ ಡಾ. ಶಿವಕುಮಾರ್ ಬ್ಯಾರವಳ್ಳಿ ಇವರನ್ನು ಹೊರತುಪಡಿಸಿ ಇನ್ನುಳಿದ ಇಬ್ಬರು ತೀರ್ಪುಗಾರರಾದ ಗೌರೀಶ ಹಾಗೂ ಸುಜಾತ ಇವರು ಮೊದಲು ನೀಡಿದ ಅಂಕಗಳ ಮೇಲೆ ತಿದ್ದಿರುವುದು ಕಂಡುಬಂದಿದೆ ಹಾಗಾಗಿ ನಾವುಗಳು ಕೆಪಿ ಪೂರ್ಣಚಂದ್ರ ತೇಜಸ್ವಿ ತಂಡದ ಮುಖ್ಯಸ್ಥರು ತಂಡದ ಸದಸ್ಯರು ಅಥವಾ ಇತರೆ ಯಾರೋ ಪ್ರಭಾವಿ ವ್ಯಕ್ತಿಗಳು ಪ್ರಭಾವ ಬೀರಿ ಗೌರೀಶ್ ಹಾಗೂ ಸುಜಾತ ಈ ತೀರ್ಪುಗಾರರ ಮೇಲೆ ಒತ್ತಡ ಅಥವಾ ಆಮೀಷ ತೋರಿಸಿ ಕೆಪಿ ಪೂರ್ಣಚಂದ್ರ ತೇಜಸ್ವಿ ತಂಡಕ್ಕೆ ಫಲಿತಾಂಶ ನೀಡಿರುವುದು ಕಂಡುಬರುತ್ತದೆ. ಇದರ ಪರಿಣಾಮ ನಮ್ಮ ತಂಡದ ಸೋಲಿಗೆ ಕಾರಣವಾಗಿರುವುದು ಅತ್ಯಂತ ನೋವಿನ ವಿಷಯವಾಗಿರುತ್ತದೆ ತೀರ್ಪುಗಾರರು ನೀಡಿರುವ ಮೂಲ ತೀರ್ಪಿನ ಅಂಕಗಳನ್ನು ಗಮನಿಸಿದಾಗ ಅಂಕಪಟ್ಟಿಯನ್ನು ತಿದ್ದಿರುವುದು ಸ್ಪಷ್ಟವಾಗಿ ಕಂಡುಬಂದಿರುತ್ತದೆ‌ ಎಂದು ತಿಳಿಸಿದರು.

ಹಾಗಾಗಿ ಜಾನಪದ ಗೀತೆ ಸಂದರ್ಭದಲ್ಲಿ ಹಾಲಿ ಪ್ರಥಮ ಸ್ಥಾನವನ್ನು ಪಡೆದಿರುವ ಕೆಪಿ ಪೂರ್ಣಚಂದ್ರ ತೇಜಸ್ವಿ ತಂಡವನ್ನು ರಾಜ್ಯ ಮಟ್ಟಕ್ಕೆ ಆಯ್ಕೆ ಮಾಡಿರುವ ಫಲಿತಾಂಶವನ್ನು ತಡೆಹಿಡಿದು ಜಾನಪದ ಗೀತೆಯಲಿ ತಿದ್ದುಪಡಿ ಮಾಡುವ ಪೂರ್ವದಲ್ಲಿನ ಅಂಕಿ ಪಟ್ಟಿಯನ್ನು ನಮೂದಿಸುವಂತೆ ನಮ್ಮ ತಂಡವನ್ನು ಪ್ರಥಮ ಸ್ಥಾನವನ್ನಾಗಿ ಘೋಷಣೆ ಮಾಡಬೇಕು ಎಂದು ಮನವಿ ಪತ್ರದ ಮೂಲಕ ತಿಳಿಸಲಾಗಿದೆ ಎಂದು ಹೇಳಿದರು.

ಈ ವೇಳೆ ಜಯಪಾಲ್ ಸೇರಿದಂತೆ ಮಿತ್ರ ಜಾನಪದ ಸಂಘಟನೆಯ ಕಾರ್ಯಕರ್ತರು ಉಪಸ್ಥಿತರಿದ್ದರು.

RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular

Recent Comments

error: Content is protected !!