ಮೂಡಿಗೆರೆ:ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳ ಕಾರ್ಯಕ್ಷಮತೆಗೆ ರಾಜ್ಯ ರೈತ ಸಂಘದ ಉಪಾಧ್ಯಕ್ಷ ಮಂಜುನಾಥ್ ಗೌಡ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಹೌದು .. ಪೋಡಿಗಾಗಿ ಸರ್ವೇ ಕಚೇರಿ ಮುಂಭಾಗ ರೈತ ಸಂಘದ ರಾಜ್ಯ ಉಪಾಧ್ಯಕ್ಷ ಮಂಜುನಾಥ ಗೌಡ ಏಕಾಂಗಿ ಪ್ರತಿಭಟನೆ ಮಾಡಿದರು
ಸುದ್ಧಿಗಾರರಿಗೆ ಪ್ರತಿಕ್ರಿಯಿಸಿ ಸರ್ವೆ ಇಲಾಖೆಯಲ್ಲಿ ಯಾವುದೇ ಕೆಲಸಗಳು ಆಗುತ್ತಿಲ್ಲ. ಪ್ರತಿಭಟನೆ ನಡೆಸಿದರೂ, ಜನಪ್ರತಿನಿಧಿಗಳು ಹಾಗೂ ಹಿರಿಯ ಅಧಿಕಾರಿಗಳ ಗಮನಕ್ಕೆ ತಂದರೂ ಪ್ರಯೋಜನವಾಗುತ್ತಿಲ್ಲ. ಹೀಗಾದರೆ ನಮ್ಮ ಕೆಲಸ ಮಾಡಿಸಿಕೊಳ್ಳಲು ಎಲ್ಲಿಗೆ ಹೋಗಬೇಕೆಂದು ಪ್ರಶ್ನಿಸಿದರು.
ಈ ಹಿಂದೆ ಇದ್ದ ಎಡಿಎಲ್‍ಆರ್ ಮಹಾದೇವಪ್ಪ ಅವರು 3 ತಿಂಗಳು ರಜೆಯಲ್ಲಿದ್ದು, ಅವರು ರಜೆಯಲ್ಲಿದ್ದಂತೆ ನಿವೃತ್ತಿ ಹೋದಿದ್ದಾರೆ. ಅವರ ಸ್ಥಾನಕ್ಕೆ ಸೂಪರ್‍ಡೆಂಟ್ ಅವರನ್ನು ನೇಮಿಸಲಾಗಿತ್ತು. ಅವರು ಕಡತಗಳಿಗೆ ಸಹಿ ಹಾಕುವಂತಿಲ್ಲವೆಂದು ಹೇಳುತ್ತಿದ್ದಾರೆ. ಹೊಸ ಎಡಿಎಲ್‍ಆರ್ ನೇಮಕ ಕೂಡ ಮಾಡಿಲ್ಲ. ಇದರಿಂದ ರೈತರ ಕಡತಗಳು ಸೆರ್ವೆ ಇಲಾಖೆಯಲ್ಲಿಯೇ ಉಳಿಯುವಂತಾಗಿದೆ ಎಂದು ಹೇಳಿದರು.
ನನ್ನ ಜಮೀನಿನ ಪೂಡಿ ಕಾರ್ಯಕ್ಕೆ ಸರ್ವೇ ಕಾರ್ಯ ನಡೆದು 2 ತಿಂಗಳು ಕಳೆದಿದ್ದು, ನಕಾಷೆ ಸಿದ್ದಪಡಿಸಲಾಗಿದೆ. ಆದರೆ ಮುಂದಿನ ಕಾರ್ಯಕ್ಕೆ ಎಡಿಎಲ್‍ಆರ್ ಸಹಿ ಆಗುತ್ತಿಲ್ಲ. ದಿನ ಕಚೇರಿಗೆ ಅಲೆದಾಡುವಂತಾಗಿದೆ.
ನನ್ನ ಕೆಲಸ ಯಾವಾಗ ಮಾಡಿಕೊಡುತ್ತಾರೆಂದು ಲಿಖಿತವಾಗಿ ನೀಡಿದರೆ ಇಲ್ಲಿಂದ ತೆರಳುತ್ತೇನೆ. ಇಲ್ಲವಾದರೆ ನನ್ನನ್ನು ಕಾನೂನಾತ್ಮಕವಾಗಿ ಇಲ್ಲಿಂದ ಹೊರ ಹಾಕಲಿ ಎಂದು ಪಟ್ಟು ಹಿಡಿದು ಕುಳಿತರು,
ಇಂದು ತನ್ನ ಕೆಲಸ ಮಾಡಿಕೊಡದಿದ್ದರೆ ನ.11ರಂದು ಡಿಡಿಎಲ್‍ಆರ್ ಕಚೇರಿ ಎದುರು ಪ್ರತಿಭಟನೆ ಮಾಡುವುದಾಗಿ ಎಚ್ಚರಿಕೆ ನೀಡಿದರು.
