Monday, February 9, 2026
Homeಆಧ್ಯಾತ್ಮಮೂಡಿಗೆರೆ :ಕೊಣಗೆರೆ ಗ್ರಾಮದಲ್ಲಿ ಚಾಮುಂಡೇಶ್ವರಿ ದೇವಾಲಯ ಲೋಕಾರ್ಪಣೆ

ಮೂಡಿಗೆರೆ :ಕೊಣಗೆರೆ ಗ್ರಾಮದಲ್ಲಿ ಚಾಮುಂಡೇಶ್ವರಿ ದೇವಾಲಯ ಲೋಕಾರ್ಪಣೆ

ಮೂಡಿಗೆರೆ : ತಾಲೂಕಿನ ಕೊಣಗೆರೆ ಗ್ರಾಮದಲ್ಲಿ ನೂತನವಾಗಿ ಚಾಮುಂಡೇಶ್ವರಿ ದೇವಾಲಯವನ್ನು ಗ್ರಾಮಸ್ಥರು ಭಕ್ತಿ ಪೂರ್ವಕವಾಗಿ ಇಂದು ಲೋಕಾರ್ಪಣೆ ಮಾಡಿದರು

ಹೌದು .. ಈ ಗ್ರಾಮದಲ್ಲಿ ನೂತನವಾಗಿ ನಿರ್ಮಾಣವಾದ ಚಾಮುಂಡೇಶ್ವರಿ ದೇವಾಲಯ ಲೋಕಾರ್ಪಣೆ ಅಂಗವಾಗಿ ಮೂರು ದಿನಗಳಿಂದ ದೇವಿಯ ಅನೇಕ ಪೂಜೆ ಪ್ರವಚನಗಳು ನಡೆದಿದ್ದವು.

ಈ ಸಂದರ್ಭದಲ್ಲಿ ಆಶೀರ್ವಚನ ಮಾತುಗಳನ್ನು ಆಡಿದ ಶ್ರೀ ಶ್ರೀ ರಾಜಶೇಖರ್ ಸ್ವಾಮೀಜಿ,
ದೇವಾಲಯಗಳು ಸಂಸ್ಕೃತಿ ಮತ್ತು ಪರಂಪರೆಯ ಸಂಕೇತಗಳಾಗಿವೆ. ದೇವಾಲಯ ಮರುಷ್ಟಾಪನೆಗೊಂಡಿದ್ದು ಗ್ರಾಮಕ್ಕೆ ಶುಭ ಸಂಕೇತ ಎಂದು ಅವರು ಅಭಿಪ್ರಾಯಪಟ್ಟರು. ಹಾಗೆ ದೇವಾಲಯಗಳು ಮನಸ್ಸಿಗೆ ನೆಮ್ಮದಿ ನೀಡುವ ತಾಣಗಳು ಎಂದರು.

ಹಿಂದೂ ಧರ್ಮದಲ್ಲಿ ಭಕ್ತಿ ಭಾವನೆ, ರಕ್ತಗತವಾಗಿ ಬಂದಿದೆ. ದೇವರಲ್ಲಿ ನಂಬಿಕೆ, ವಿಶ್ವಾಸ, ನಿಷ್ಠೆ ಇಟ್ಟು ಸರ್ವವ್ಯಾಪಿ ಭಗವಂತನನ್ನು ನೆನೆದರೆ ಮನಸ್ಸು ಹಗುರವಾಗಿ ಬದುಕು ಸುಗಮವಾಗುತ್ತದೆ ಎಂದರು. ಆಧುನಿಕತೆ ಬದುಕಿಗೆ ನಿಮ್ಮನ್ನು ರೂಡಿಸಿಕೊಳ್ಳದೆ ಸಂಸ್ಕೃತಿ ಬದುಕನ್ನು ರೂಡಿ ಮಾಡಿಕೊಳ್ಳುವಂತೆ ತಿಳಿಸಿದರು

ಲವ್ ಜಿಹಾದ್ ತಡೆಯುವಲ್ಲಿ ಪೋಷಕರ ಪಾತ್ರ ಬಹಳ ಮುಖ್ಯವಾಗಿದೆ. ನಮ್ಮ ಸಂಸ್ಕಾರ ಬಿಡದೆ ಸುತ್ತ ಮುತ್ತಲಿನವರ ಖುಷಿಯಾಗಿ ಇರಬೇಕು ಎಂದರು ಮಕ್ಕಳನ್ನು ಪ್ರೀತಿಯಿಂದ ಕಂಡು ಧಾರ್ಮಿಕ ವಿಚಾರಗಳನ್ನು ತಿಳಿಸಿಕೊಡಬೇಕು.

ಸಂಸಾರಕ್ಕೆ ಪ್ರೀತಿಯನ್ನು ತೋರಿದ್ದಲ್ಲಿ ಸಂಸ್ಕಾರ ಸಮೃದ್ಧಿ ಗೊಳ್ಳುತ್ತದೆ ಇಂದಿನ ಯುವ ಸಮೂಹಕ್ಕೆ ಇದು ಅಗತ್ಯ ಪ್ರಸಾದ ಎಂದು ರಾಜಶೇಖರ್ ಸ್ವಾಮೀಜಿ ಹೇಳಿದರು

ಹಾಗೆ ಎಂ. ಕೆ. ಪ್ರಾಣೇಶ್ ಮಾತನಾಡಿ, ಹಿಂದೂ ಧರ್ಮದಲ್ಲಿ ನಂಬಿಕೆ ಪೂಜೆ ಪುನಸ್ಕಾರ ಬೆಳೆದು ಬಂದಿದೆ. ನಂಬಿಕೆಗಳು ಜೀವಂತವಾಗಿರಬೇಕು ನಮ್ಮೆಲ್ಲರ ಬದುಕು ದೇವರ ಸೃಷ್ಟಿಯಿಂದ ಆಗಿದ್ದು. ನಾವುಗಳು ಸದಾ ಭಗವಂತನಿಗೆ ತಲೆ ಬಾಗುವ ಕೆಲಸ ಮಾಡಬೇಕು ಎಂದರು.

ದೇವಾಲಯಗಳ ಪುನರ್ ಪ್ರತಿಷ್ಟಾಪನೆಯಿಂದಾಗಿ ನಂಬಿಕೆಗಳನ್ನು ಹೆಚ್ಚಿಸುವಂತ ಕೆಲಸ ಮಾಡಿರುವುದಾಗಿ ತಿಳಿಸಿದರುಧಾರ್ಮಿಕ ಭಾವನೆಗಳನ್ನು ನಾವುಗಳು ಹೆಚ್ಚಿಸಿಕೊಂಡು ಶಿಥೀಲಾವ್ಯವಸ್ಥೆಯಲ್ಲಿರುವ ದೇವಾಲಗಳನ್ನು ಪುನರ್ ಪ್ರತಿಷ್ಠಾಪಿಸುವುದು ಉತ್ತಮ ಕೆಲಸವಾಗಿದೆ ಎಂದರು. ಧರ್ಮವನ್ನು ಉಳಿಸುವ ಮೊದಲ ಮೆಟ್ಟಿಲು ದೇವಾಲಗಳು ಇದನ್ನು ಯಾರು ಮರೆಯದೆ ನಿರಂತರ ಪೂಜೆ ಪುನಸ್ಕಾರ ನಡೆಯಲಿ ಎಂದರು.

ಮಕ್ಕಳನ್ನು ಮೊಬೈಲ್ ಅನಗತ್ಯ ಬಳಕೆಯಿಂದ ದೂರವಿರಿಸಿ ಪುಸ್ತಕಗಳನ್ನು ನೀಡಿ ಪುಸ್ತಕ ಓದಿದವರು ಜೇವನದಲ್ಲಿ ತಲೆ ತಗ್ಗಿಸಿ ಬದುಕುವ ಸ್ಥಿತಿ ಬರುವುದಿಲ್ಲ ಎಂದರು

ಆ ನಂತರ ಬಿ. ಬಿ. ನಿಂಗಯ್ಯ ಅವರು ಮಾತನಾಡಿ, ಕೊಣಗೆರೆ ಗ್ರಾಮಸ್ಥರು ದೇವಾಲಯವನ್ನು ಅಚ್ಚುಕಟ್ಟಾಗಿ ನಿರ್ಮಿಸಿ ಗ್ರಾಮದ ವೈಭೋಘವನ್ನು ಮತ್ತಷ್ಟು ಹೆಚ್ಚಿಸುವಲ್ಲಿ ಶ್ರಮಿಸಿದ್ದೀರಿ. ತಾಯಿಯ ಆಶೀರ್ವಾದ ಸದಾ ನಿಮ್ಮ ಮೇಲೆ ಇದ್ದು ಗ್ರಾಮದ ಜನತೆಗೆ ಶುಭವಾಗಲಿ ಎಂದರು

ಈ ಶುಭ ಸಮಾರಂಭದಲ್ಲಿ ಸಭಾಧ್ಯಕ್ಷ ಪುಟ್ಟಯ್ಯ, ಹಿರಿಯರಾದ ಎಂ. ಎಂ. ಲಕ್ಷ್ಮಣ ಗೌಡ, ಕಾಫಿ ಮಂಡಳಿ ಅಧ್ಯಕ್ಷ ದಿನೇಶ್ ದೇವರುಂದ, ರಾಘವೇಂದ್ರ ಭಟ್‌ ಸೇರಿದಂತೆ ಗಣ್ಯಾತಿ ಗಣ್ಯರು, ಕಡಿದಾಳು, ದಾರದಹಳ್ಳಿ. ಕೆಸವಳಲು ಹಾಗೂ ಸುತ್ತಮುತ್ತಲಿನ ಗ್ರಾಮಸ್ಥರು ಪೂಜೆಯಲ್ಲಿ ಭಾಗವಹಿಸಿ ದೇವಿಯ ಕೃಪೆಗೆ ಪಾತ್ರರಾಗಿ ಅನ್ನ ಪ್ರಸಾದ ಸ್ವೀಕರಿಸಿ ಪುನೀತರಾದರೂ

ವರದಿ : ಪುನೀತ್ ಕಡಿದಾಳು 

9483811948

RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular

Recent Comments

error: Content is protected !!