ಮೂಡಿಗೆರೆ: TAPCMS ನೂತನ ಅಧ್ಯಕ್ಷ-ಉಪಾಧ್ಯಕ್ಷರನ್ನು ಇಂದು ನೇಮಕ ಮಾಡಲಾಗಿದ್ದು ಅಧ್ಯಕ್ಷರಾಗಿ ಕಲ್ಲೇಶ್ ಹಾಗೂ ಉಪಾಧ್ಯಕ್ಷರಾಗಿ ಗಣೇಶ್ ಅವರನ್ನ ಅವಿರೋಧವಾಗಿ ಆಯ್ಕೆ ಮಾಡಲಾಗಿದೆ.

ನೂತನ ಅಧ್ಯಕ್ಷರಾಗಿ ಆಯ್ಕೆಯಾದ ಕಲ್ಲೇಶ್ ಮಾತನಾಡಿ, ಸದಸ್ಯರ ಬೆಂಬಲ ಕಾರ್ಯಕರ್ತರ ಸಹಕಾರದಿಂದಾಗಿ ಮೂಡಿಗೆರೆ TAPCMS ಅಧ್ಯಕ್ಷನಾಗಲು ಸಾಧ್ಯವಾಗಿದೆ ಎಂದರು. ನಗರದ TAPCMS ಚುನಾವಣೆ ನವೆಂಬರ್ 2 ರಂದು ನಡೆದಿದ್ದು ಇದರ ಬೆನ್ನಲ್ಲೇ ಟಿಎಪಿಸಿಎಂಎಸ್ ಅಧ್ಯಕ್ಷನಾಗಿ ಆಯ್ಕೆಯಾಗಲು ಸಾಧ್ಯವಾಯಿತು ಎಂದು ನೂತನ ಅಧ್ಯಕ್ಷ ಕಲ್ಲೇಶ್ ತಿಳಿಸಿದರು.
ನಗರದ ಟಿಎಪಿಸಿಎಂಎಸ್ ಕಛೇರಿಯಲ್ಲಿ ಅಧ್ಯಕ್ಷ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ಅವಿರೋಧವಾಗಿ ಆಯ್ಕೆಗೊಂಡು ಅಧಿಕಾರ ಸ್ವೀಕರಿಸಿ ಮಾತನಾಡಿದ ಅವರು, ಈ ಹಿಂದೆ ಕೂಡ ಅಧ್ಯಕ್ಷರಾದವರು TAPCMS ಏಳಿಗೆಗೆ ಶ್ರಮಿಸಿ ವಾಣಿಜ್ಯ ಮಳಿಗೆ ನಿರ್ಮಿಸಿದ್ದು, ಅದೇ ಹಾದಿಯಲ್ಲಿ ಎಲ್ಲರ ಸಹಮತದಿಂದ ಉತ್ತಮ ಕೆಲಸ ಮಾಡುವುದಾಗಿ ತಿಳಿಸಿದರು.
ಈ ಬಾರಿಯ ಚುನಾವಣೆಯಲ್ಲಿ ಎಲ್ಲರ ಸಹಕಾರದಿಂದ ಒಮ್ಮತದಿಂದ ಜನತೆ ನಮ್ಮೆಲ್ಲರನ್ನು ಆಯ್ಕೆ ಮಾಡಿದ್ದು , ಅವರ ಮಾರ್ಗದರ್ಶನದಲ್ಲಿ ರೈತರ ಪರವಾಗಿ ಶ್ರಮಿಸುವುದಾಗಿ ತಿಳಿಸಿದರು.TAPCMS ಅನ್ನು ದೊಡ್ಡ ಮಟ್ಟದಲ್ಲಿ ಕಟ್ಟುವ ಕನಸನ್ನು ನನಸು ಮಾಡುವ ನಿಟ್ಟಿನಲ್ಲಿ ಹೆಜ್ಜೆ ಹಾಕುತ್ತೇವೆ. ಅದಕ್ಕೆ ನಿಮ್ಮ ಪರಿಪೂರ್ಣ ಸಹಕಾರವಿರಲಿ ಎಂದರು.
ಉಪಾಧ್ಯಕ್ಷ ಗಣೇಶ್ ಮಾತನಾಡಿ, ತಾಲೂಕಿನಲ್ಲಿ ನಿಮ್ಮೆಲ್ಲರ ಸಹಕಾರದಿಂದ ಉಪಾಧ್ಯಕ್ಷ ಸ್ಥಾನ ನೀಡಿದ್ದು ನಮ್ಮ ಸಮಾಜದ ಮೇಲಿರುವ ಕಾಳಜಿ ತೋರುತ್ತದೆ ಎಂದರು. ಚುನಾವಣಾಧಿಕಾರಿಯಾಗಿದ್ದ ಜ್ಯೋತಿ ಲಕ್ಷ್ಮಿ ಚುನಾವಣೆ ಯಶಸ್ವಿಯಾಗಿ ನಡೆಸಿಕೊಟ್ಟರು.
ಕಾರ್ಯಕ್ರಮದಲ್ಲಿ ನಿರ್ದೇಶಕರಾದ ಅನುಕುಮಾರ್, ಚಂದ್ರೆಶ್, ವಿದ್ಯಾರಾಜು, ಶೇಖರ್ ಪೂಜಾರಿ ಸೇರಿದಂತೆ ಮುಖಂಡರಾದ ಲಕ್ಷ್ಮಣ ಗೌಡ ಬಾಳೂರು, ಗಜೇಂದ್ರ ತರುವೆ, ಕಿರಣ್ ಮಾಕೋನಹಳ್ಳಿ, ಯೋಗೇಶ್ ಪಟೇಲ್ ಪುರ, ಸುನಿಲ್ ಮಣ್ಣಿಕೆರೆ, ಮಂಜುನಾಥ್ ಬೆಟ್ಟಗೆರೆ ಸೇರಿದಂತೆ ಜೆಡಿಎಸ್- ಬಿಜೆಪಿ ಪಕ್ಷಗಳ ಗಣ್ಯರು ಕಾರ್ಯಕರ್ತರು ಇದ್ದರು
