ಮೂಡಿಗೆರೆ: ತಾಲೂಕಿನ ಘಟ್ಟದಹಳ್ಳಿ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯ ಸುತ್ತ ಮುತ್ತಲಿನ ಪರಿಸರ ಸಂಪೂರ್ಣ ಹದಗೆಟ್ಟು ಹೋಗಿದ್ದು ಸ್ವಚ್ಛತೆಗೆ ಸ್ಥಳೀಯರು ಆಗ್ರಹಿಸಿದ್ದಾರೆ.

ಈ ಕುರಿತು ಪಬ್ಲಿಕ್ ಇಂಪ್ಯಾಕ್ಟ್ ನೊಂದಿಗೆ ಮಾತನಾಡಿದ ದಿನೇಶ್, ಅಪಾರ ಪ್ರಮಾಣದಲ್ಲಿ ಗಿಡಗಂಟಿ ಬೆಳೆದು ವಿಷಕಾರಿ ಜೀವ ಜಂತುಗಳ ಕಾಟ ಹೆಚ್ಚಾಗಿದ್ದು ಮಕ್ಕಳು ಜೀವ ಭಯದಿಂದ ವಿದ್ಯಾಭ್ಯಾಸ ಮಾಡುತ್ತಿದ್ದಾರೆ ಎಂದರು.
ಶಾಲಾ ಕಟ್ಟಡದ ಸುತ್ತಮುತ್ತಲು ಹೆಜ್ಜೆ ಇಡದಷ್ಟು ಮುಳ್ಳಿನ ಕಂಟಿ ಆಳು ಎತ್ತರಕ್ಕೆ ಕಳೆ ಬೆಳೆದಿದ್ದು ಹಾವು ಚೇಳು ಕ್ರಿಮಿ ಕಿಟಗಳಿಗೆ ವಾಸಸ್ಥಾನ ವಾಗಿದೆ. ಮಕ್ಕಳಿಗೆ ಮತ್ತು ಶಾಲಾ ಶಿಕ್ಷಕರಿಗೆ ಅನುಕೂಲ ಆಗಲಿ ಎಂದು ನಿರ್ಮಾಣ ಮಾಡಿರುವ ಶೌಚಾಲಯ ಸ್ವಚ್ಛತೆ ಕಾಪಾಡದೆ ದುರ್ವಾಸನೆ ಬೀರುತ್ತಿದೆ.

ಅತ್ತ ಹೆಜ್ಜೆ ಹಾಕಬೇಕಾದರೆ ಹಾವು ಚೇಳನ್ನು ನೆನೆಯುತ್ತಲೆ ಹೆಜ್ಜೆ ಇಡುತ್ತಾ ಹೋಗಬೇಕು ಎನ್ನುವಂತೆ ವಾತಾವರಣ ಕೆಟ್ಟು ಹೋಗಿದೆ. ಶಾಲಾ ಪರಿಸರ ಸ್ವಚ್ಛತೆ ಇಲ್ಲಿ ಸಂಪೂರ್ಣ ಮಾಯವಾಗಿ ಪಾಲಕರ ಅಸಮಾಧಾನಕ್ಕೆ ಕಾರಣವಾಗಿದೆ.
ಶಾಲೆಗೆ ಪ್ರವೇಶ ಮಾಡಬೇಕಾದರೆ ಮೈ ಕೈಗೆ ಕಳೆ ಹಳ ಪರಚಿಕೊಂಡೆ ಒಳ ಹೋಗಬೇಕು ಎನ್ನುವಂತ್ತಾಗಿದೆ ಸುತ್ತ ಮುತ್ತ ಕಳೆ ಬೆಳೆದು ಶಾಲಾ ಕಟ್ಟಡವೇ ಕಾಣದಂತ್ತಾಗಿದೆ. ಆದರೂ ಅದನ್ನು ಸ್ವಚ್ಛ ಮಾಡುವ ಕೆಲಸ ಯಾರಿಂದಲೂ ನಡೆಯದೇ ಇರುವುದು ಶಾಲೆಯ ಮಕ್ಕಳಿಗೆ ಒದಗಿ ಬಂದಿರುವ ದುರ್ದೈವದ ಸಂಗತಿ ಎಂದರು.
ಸ್ವಚ್ಛತೆ ಇಲ್ಲದೆ ಶಾಲಾ ಆವರಣದ ಸುತ್ತ ಮುತ್ತ ಕಾಡು ಕುಡಿದ ಹಿನ್ನಲೆ ಅನೇಕರು ಬೆಳಗಿನ ಜಾವಾ ಮತ್ತು ಸಂಜೆ ಜನರ ಬಹಿರ್ದೆಶೆಗೆ ಆಸರೆಯಾಗಿ ಮಾರ್ಪಟ್ಟಿದೆ. ಇಲ್ಲಿ ಶಾಲೆಯಿದೆ ಎನ್ನುವ ಪರಿಜ್ಞಾನವೂ ಇಲ್ಲದೆ ಶಾಲಾ ಪರಿಸರಕ್ಕೆ ಆಪತ್ತು ತಂದೊಡ್ಡಿದ್ದಾರೆ. ಇದರಿಂದಾಗ ಮಕ್ಕಳು ಮತ್ತು ಶಿಕ್ಷಕರಿಗೆ ಹದಗೆಟ್ಟ ಪರಿಸರ, ಕೆಟ್ಟ ದುರ್ನಾತದಿಂದ ಮಾನಸಿಕ ಕಿರಿಕಿರಿಯಾಗುತ್ತಿದೆ ಎನ್ನುವ ಮಾತುಗಳು ಕೇಳಿ ಬಂದಿವೆ.

ಶಾಲೆಗೆ ಹೋಗುವ ದಾರಿಯ ಪಕ್ಕದಲ್ಲಿ ತ್ಯಾಜ್ಯ ತಂದು ಬಿಸಾಡುತ್ತಿದ್ದಾರೆ. ಅದರ ಗಬ್ಬು ವಾಸನೆಗೆ ಮೂಗು ಮುಚ್ಚಿಕೊಂಡೇ ಶಿಕ್ಷಕರು, ಮಕ್ಕಳು ಶಾಲೆಗೆ ತೆರಳಬೇಕು. ಅದನ್ನು ತಡೆಯೋರು ಯಾರೂ ಇಲ್ಲವಾಗಿದೆ. ಹೀಗೆ ಬಿಟ್ಟರೆ ಶಿಕ್ಷಕರು ಮಕ್ಕಳಿಗೆ ಪಾಠ ಮಾಡುವ ಬದಲಿಗೆ ಹಾವು ಚೇಳು ಇನ್ನಿತರ ಕ್ರಿಮಿ ಕಕೀಟಗಳನ್ನು ಓಡಿಸಿಕೊಂಡು ಇರಬೇಕು ಅಥವಾ ಅವುಗಳಿಗೆ ಪಾಠ ಮಾಡಬೇಕಾಗುತ್ತದೆ.ಶಾಲಾ ಕೋಣೆಗೆ ನುಗ್ಗಿ ಬಂದು ಮಕ್ಕಳಿಗೆ ಮತ್ತು ಶಿಕ್ಷಕರಿಗೆ ಜೀವಭಯವುಂಟು ಮಾಡಿರುವ ಘಟನೆ ನಡೆಯುವ ಸಾಧ್ಯತೆ ಸಹ ಹೆಚ್ಚಿದೆ ಎಂದರು.
ಶಾಲೆಯ ಸುತ್ತ ಮುತ್ತಲಿನ ಪರಿಸರವನ್ನು ಮುಂದೆ ಬೆಳೆದಿರುವ ಎಸ್‌ಡಿಎಂಸಿ ಮೂಲಕ ಬರುವ ಅಭಿವೃದ್ಧಿ ಅನುದಾನದಲ್ಲಿ ಖರ್ಚು ಮಾಡಿ ಸ್ವಚ್ಛ ಮಾಡಿಸಬೇಕಾಗಿತ್ತು. ಯಾಕೋ ಅವರು ಮನಸ್ಸು ಮಾಡಿಲ್ಲ. ಇದರಿಂದ ಪಾಲಕ ಪೋಷಕರಿಗೆ ಶಾಲಾ ಪರಿಸರ ನೋಡಿ ತೀವ್ರ ಬೇಸರವುಂಟು ಮಾಡಿದೆ ಎನ್ನುವ ಆರೋಪ ಕೇಳಿ ಬಂದಿದೆ. ಶಾಲೆಯ ಸುತ್ತಾಮುತ್ತಾ ಬೆಳೆದಿರುವ ಕಳೆ ಕಡಿಸಿ ಹದಗೆಟ್ಟ ಶಾಲಾ ಪರಿಸರ ಸುಧಾರಣೆಗೆ ಶಾಲಾ ಆಡಳಿತ, ಶಾಲಾಭಿವೃದ್ಧಿ ಮೇಲುಸ್ತುವಾರಿ ಸಮಿತಿ ಪದಾಧಿಕಾರಿ, ಪಂಚಾಯಿತಿ ಆಡಳಿತ ಮುಂದಾಗಬೇಕಿದೆ. ಪಾಲಕ, ಪೋಷಕರು ಶಾಲೆಯ ಪರಿಸರದ ಬಗ್ಗೆ ಕಾಳಜಿ ತೋರಬೇಕಾಗಿದೆ. ಎಂದರು
ಶಾಲೆಯ ಸುತ್ತಮುತ್ತ ನೈರ್ಮಲ್ಯ ಕೊರತೆ ಎದ್ದು ಕಾಣುತ್ತಿದ್ದೂ, ಕಿಡಿಗೇಡಿಗಳು ಶಾಲಾ ಆವರಣವನ್ನು ಅನ್ಯ ಚಟುವಟಿಕೆಗಳಿಗೆ ಬಳಸಿಕೊಳ್ಳುತ್ತಿರುವುದು ಕಂಡು ಬಂದಿದ್ದು
ಈ ಕೂಡಲೇ ಸಂಬಂಧ ಪಟ್ಟ ಇಲಾಖೆ ಎಚ್ಚೆತ್ತುಕೊಂಡು ಶಾಲೆಯ ಸ್ವಚ್ಛತೆಗೆ ಆದ್ಯತೆ ನೀಡಬೇಕು. ಮಕ್ಕಳಿಗೆ ತೊಂದರೆ ಆದಲ್ಲಿ ಪರಿಣಾಮ ಸರಿ ಇರುವುದಿಲ್ಲ ಎಂಬುದಾಗಿ ಎಚ್ಚರಿಕೆ ನೀಡಿದರು.
ವರದಿ :ಪುನೀತ್ ಕಡಿದಾಳು
9483811948
