Tuesday, March 17, 2026
Homeಜಿಲ್ಲಾಸುದ್ದಿಮೂಡಿಗೆರೆ: ಬಿಜೆಪಿ ಯುವ ಮೋರ್ಚಾ ಜಿಲ್ಲಾಧ್ಯಕ್ಷರ ಬಂಧನ ರಾಜಕೀಯ ಸೇಡಿನ ಭಾಗ: ಅವಿನಾಶ್ ಜನ್ನಾಪುರ

ಮೂಡಿಗೆರೆ: ಬಿಜೆಪಿ ಯುವ ಮೋರ್ಚಾ ಜಿಲ್ಲಾಧ್ಯಕ್ಷರ ಬಂಧನ ರಾಜಕೀಯ ಸೇಡಿನ ಭಾಗ: ಅವಿನಾಶ್ ಜನ್ನಾಪುರ

ಮೂಡಿಗೆರೆ: ಭಾರತೀಯ ಜನತಾ ಪಾರ್ಟಿ ಯುವ ಮೋರ್ಚಾ ಅಧ್ಯಕ್ಷ ಸಂತೋಷ್ ಕೋಟ್ಯಾನ್ ಅವರನ್ನು ಕೂಡಲೇ ಬಿಡುಗಡೆ ಮಾಡಲು ಬಿಜೆಪಿ ಯುವ ಮೋರ್ಚಾ ಜಿಲ್ಲಾ ಉಪಾಧ್ಯಕ್ಷ ಅವಿನಾಶ್ ಜನ್ನಾಪುರ ಒತ್ತಾಯಿಸಿದ್ದಾರೆ.

ಈ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕರ್ನಾಟಕದಲ್ಲಿ ಕಾಂಗ್ರೆಸ್ ಸರ್ಕಾರ ಪೊಲೀಸ್ ಇಲಾಖೆಯನ್ನು ಕೈಗೊಂಬೆಯಂತೆ ನಡೆಸಿಕೊಂಡಿದೆ. ಹೇಗೆ ಸ್ವತಂತ್ರ ಪೂರ್ವದಲ್ಲಿ ಬ್ರಿಟಿಷ್ ಸರ್ಕಾರದ ವಿರುದ್ಧ ಹೋರಾಟ ಮಾಡಿದವರನ್ನು ಜೈಲಿಗಟ್ಟುತ್ತಿದ್ದರು. ಅದೇ ಮಾದರಿಯಲ್ಲಿ ಈಗಿನ ಕಾಂಗ್ರೆಸ್ ಸರ್ಕಾರ ಅಧಿಕಾರವನ್ನು ದುರ್ಬಳಕೆ ಮಾಡಿಕೊಂಡು. ಸರ್ಕಾರದ ವಿರುದ್ಧ. ಸಚಿವರ ವಿರುದ್ಧ ಮಾತನಾಡಿದವರನ್ನು ಇಲ್ಲಸಲ್ಲದ ಪ್ರಕರಣವನ್ನು ದಾಖಲಿಸಿಕೊಂಡು.ಜೈಲಿಗಟ್ಟುತ್ತಿವುದು ಎಷ್ಟರ ಮಟ್ಟಿಗೆ ಸರಿ ಎಂದರು.

ಇಂತಹ ದ್ವೇಷ ಸಾಧಿಸುವ ಪಕ್ಷಕ್ಕೆ ಮುಂದಿನ ಚುನಾವಣೆಯಲ್ಲಿ ಜನರೇ ಇವರಿಗೆ ಬುದ್ದಿ ಕಲಿಸುತ್ತಾರೆ ಎಂಬ ವಿಶ್ವಾಸ ಹೊರಹಾಕಿದರು. ದ್ವೇಷದ ರಾಜಕಾರಣವನ್ನು ಆಡಳಿತ ಪಕ್ಷ ಮಾಡುತ್ತಿದ್ದು. ಬಿಜೆಪಿ ಕಾರ್ಯಕರ್ತರನ್ನು ಮೂಲೆ ಗುಂಪು ಮಾಡುವ ಹಗಲು ಕನಸು ಕಾಣುತ್ತಿದ್ದೂ ಇಂತಹ ಪ್ರಕರಣಗಳಿಗೆ ಬಗ್ಗುವ ಕಾರ್ಯಕರ್ತರು ನಾವಲ್ಲ ಎಂಬುದಾಗಿ ತಿಳಿಸಿದರು.

ಕಾರಾಗೃಹದಲ್ಲಿ ಮೋಜು ಮಸ್ತಿ ವಿಚಾರವನ್ನು ಪ್ರಶ್ನಿಸಿದ್ದಕ್ಕೆ. ಸುಳ್ಳು ಪ್ರಕರಣ ದಾಖಲಿಸಿ ಬಿಜೆಪಿ ಯುವ ಮೋರ್ಚಾ ಅಧ್ಯರನ್ನು ಬಂದಿಸಿದ್ದು ಖಂಡನೀಯ ಎಂದರು. ಪೊಲೀಸ್ ಇಲಾಖೆ ಬಳಸಿಕೊಂಡು ಕಾರ್ಯಕರ್ತರನ್ನು ಹಿಮ್ಮೆಟ್ಟಿಸುವ ಕಾಂಗ್ರೆಸ್ ಸರ್ಕಾರ ಷಡ್ಯಂತ್ರದ ಭಾಗವಾಗಿದೆ ಎಂದರು.

ಭಾರತೀಯ ಸಂವಿಧಾನದಲ್ಲಿ ಭಾರತೀಯ ಪ್ರಜೆಗೆ ಪ್ರಶ್ನಿಸುವ ಹಕ್ಕಿದೆ ಅದನ್ನು ಅವರು ಮಾಡಿದ್ದೂ. ಪೊಲೀಸ್ ಗುಂಡಾಗಿರಿ ವರ್ತನೆ ಬೇಸರದ ಸಂಗತಿ.. ಪ್ರತಿಭಟನಾ ಕಾರರ ಮೇಲೆ ಲಾಠಿ ಪ್ರಹಾರ ಎಷ್ಟರ ಮಟ್ಟಿಗೆ ಸರಿ ಎಂದು ಪ್ರಶ್ನಿಸಿದರು.

ಕೋಟ್ಯಾನ್ ವಿಚಾರದಲ್ಲಿ ಹೋರಾಟದಿಂದ ಹಿಂದೆ ಸರಿಯಲು ಸಾಧ್ಯವಿಲ್ಲ. ರಾಜ್ಯದಲ್ಲಿ ಹಿಂದೂ ವಿರೋಧಿ ಕಾಂಗ್ರೆಸ್ ಸರ್ಕಾರ ಆಡಳಿತದಲ್ಲಿ ಇದ್ದು ಪೊಲೀಸ್ ಇಲಾಖೆ ಅವರ ತಾಳಕ್ಕೆ ಕುಣಿಯುತ್ತಿದೆ. ಈ ಹೋರಾಟದಿಂದ ಒಂದು ಇಂಚನ್ನು ಸಹ ಹಿಂದೆ ಸರಿಸಲು ಸಾಧ್ಯವಿಲ್ಲ. ನಮ್ಮ ಹೋರಾಟ ಇನ್ನಷ್ಟು ಬಲಗೊಳ್ಳಲಿದೆ ಎಂದರು.

ಈ ರೀತಿಯ ದಬ್ಬಾಳಿಕೆಯ ಹಾಗೂ ಪ್ರಜಾಪ್ರಭುತ್ವ ವಿರೋಧಿ ನಡೆಗಳ ವಿರುದ್ಧ ತನ್ನ ಸಂಪೂರ್ಣ ಶಕ್ತಿ ಮತ್ತು ದೃಢ ಸಂಕಲ್ಪದೊಂದಿಗೆ ಹೋರಾಟವನ್ನು ಮುಂದುವರಿಸಲಿದೆ ಎಂದರು.

ಬಿಜೆಪಿ ಯುವ ಮೋರ್ಚಾ ಅಧ್ಯಕ್ಷರ ಬಂಧನ ಕಾಂಗ್ರೆಸ್ ಸರ್ಕಾರ ಭಿನ್ನಮತದ ಧ್ವನಿಯನ್ನು ನಿಗ್ರಹಿಸಲು ನಡೆಸುತ್ತಿರುವ ಸೇಡಿನ ರಾಜಕೀಯವಲ್ಲದೆ ಬೇರೇನೂ ಅಲ್ಲ ಎಂದು ಪ್ರತಿಪಾದಿಸುತ್ತದೆ. ಸುಳ್ಳು ಆರೋಪಗಳನ್ನು ಹೊರಿಸುವ ಮೂಲಕ ಮತ್ತು ಇಲಾಖೆಗಳನ್ನು ದುರುಪಯೋಗಪಡಿಸಿಕೊಳ್ಳುವ ಮೂಲಕ ಬೆದರಿಸುವುದು ಮತ್ತು ದಬ್ಬಾಳಿಕೆ ಮಾಡುವುದು ಆಡಳಿತದ ಕಾರ್ಯಸೂಚಿಯ ಭಾಗವಾಗಿದೆ ಎಂದರು.

ಕೋಟ್ಯಾನ್ ಬಂಧನ ವಿರೋಧಿಸಿ ರಾಜ್ಯದ ಪ್ರತಿ ತಾಲೂಕು ಗಳಲ್ಲಿ ಬೃಹತ್ ಪ್ರತಿಭಟನೆ ಹಮ್ಮಿಕೊಳ್ಳಲಾಗುತ್ತದೆ ಎಂದರು. ಕಾಂಗ್ರೆಸ್ ಸರ್ಕಾರ ದೇಶ ಹಾಗೂ ಧರ್ಮ ವಿರೋಧಿ ನಡೆಯನ್ನು ಮತ್ತೆ ಮುಂದುವರಿಸಿದೆ. ಜಾತಿನಿಂದನೆ ಆರೋಪ ಶುದ್ಧ ಸುಳ್ಳು ಅಕ್ರಮ ಕೇಸ್ ದಾಖಳಿಸಲಾಗಿದೆ ಎಂದು ಆರೋಪಿಸಿದರು.

ತನ್ನ ದ್ವೇಷ ರಾಜಕಾರಣದಿಂದ ಹಿಂದೆ ಸರಿದು ಕೂಡಲೇ ಸಂತೋಷ್ ಕೋಟ್ಯಾನ್ ಅವರನ್ನು ಬಿಡುಗಡೆ ಮಾಡಬೇಕು ಎಂದು ತಾಕೀತು ಮಾಡಿದರು

ಒಂದು ವೇಳೆ ಇದೇ ರೀತಿ ಮುಂದುವರಿದರೆ ಉದ್ದೇಶಿತವಾಗಿ ಪ್ರಕರಣ ದಾಖಲಿಸಿದರೆ ಕಾರ್ಯಕರ್ತರು ಹೆದರುವುದಿಲ್ಲ ಯುವ ಮೋರ್ಚಾ ಇನ್ನಷ್ಟು ಶಕ್ತಗೊಳ್ಳಲಿದೆ ಎಂದರು.

ಈ ಕೂಡಲೇ ಜಿಲ್ಲಾಧ್ಯಕ್ಷರನ್ನು ಬಿಡುಗಡೆಗೊಳಿಸಬೇಕು ಇಲ್ಲವಾದಲ್ಲಿ ರಾಜ್ಯದ್ಯಂತ ಪ್ರತಿಭಟನೆಯ ಎಚ್ಚರಿಕೆ ನೀಡಿದರು.

RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular

Recent Comments

error: Content is protected !!