Monday, February 9, 2026
Homeಜಿಲ್ಲಾಸುದ್ದಿಮೂಡಿಗೆರೆ: ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ವತಿಯಿಂದ ಸ್ವಾಸ್ತ್ಯ ಸಂಕಲ್ಪ ಕಾರ್ಯಕ್ರಮ

ಮೂಡಿಗೆರೆ: ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ವತಿಯಿಂದ ಸ್ವಾಸ್ತ್ಯ ಸಂಕಲ್ಪ ಕಾರ್ಯಕ್ರಮ

ಮೂಡಿಗೆರೆ: ತಾಲೂಕಿನ ಜಾವಳಿ ವಲಯದ ಕೊಟ್ಟಿಗೆಹಾರದ ಸರ್ಕಾರಿ ಪ್ರೌಢಶಾಲೆಯಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ವತಿಯಿಂದ ಇಂದು ಸ್ವಾಸ್ಥ್ಯ ಸಂಕಲ್ಪ ಕಾರ್ಯಕ್ರಮ ಹಮ್ಮಿಕೊಳ್ಳಲಾಯಿತು.

ಕಾರ್ಯಕ್ರಮದ ಅಧ್ಯಕ್ಷತತೆ ವಹಿಸಿ ಮಾತನಾಡಿದ ಶಾಲಾ ಮುಖ್ಯೋಪಾಧ್ಯಾಯಿಣಿ ಭಾಗ್ಯ ಆರೋಗ್ಯದ ಅರಿವು ಬೆಳಗಿದಾಗ ಮಾತ್ರ ಸಮಾಜ ಶ್ರೇಯೋಭಿವೃದ್ಧಿಯ ಹಾದಿ ಹಿಡಿಯುತ್ತದೆ’ ಎಂಬ ಸತ್ಯವಾಕ್ಯವನ್ನು ತಮ್ಮ ನುಡಿಗಳೊಂದಿಗೆ ತಿಳಿಸಿಕೊಟ್ಟರು.

ಕಾರ್ಯಕ್ರಮದ ಉದ್ಘಾಟಕರಾಗಿ ಆಗಮಿಸಿದ ಜಿಲ್ಲಾ ಜನಜಾಗೃತಿ ವೇದಿಕೆಯ ಸದಸ್ಯರಾದ ಗಜೇಂದ್ರ ತರುವೆ ಮಾತನಾಡಿ ಸಮಾಜದ ಪ್ರಗತಿ ಆರೋಗ್ಯದ ಹಾದಿಯಲ್ಲೇ ಅಡಗಿದೆ. ಆರೋಗ್ಯದ ಅರಿವು ಬೆಳೆಯಲು ಜಾಗೃತಿ ಅತ್ಯವಶ್ಯಕ ಎಂದರು.ವಿದ್ಯಾರ್ಥಿಗಳು ಸಮಾಜಕ್ಕೆ ಶಕ್ತಿಯಾಗಿ ಬೆಳೆಯಬೇಕು.

ಪ್ತಾಸ್ತವಿಕ ನುಡಿ ಹೇಳಿದ ಪರೀಕ್ಷಿತ್ ಜಾವಳಿ ‘ ಜಾಗೃತಿಯ ಬೆಳಕು ಮೂಡಿದಾಗಲೇ ಸಮಾಜ ಆರೋಗ್ಯ, ಅರಿವು ಮತ್ತು ಪ್ರಗತಿಯನ್ನು ಕಾಣುತ್ತದೆ ‘ ಎಂಬುದಾಗಿ ಹಲವು ಅಮೂಲ್ಯ ವಿಚಾರಗಳನ್ನು ನುಡಿಗಳನ್ನ ಹಂಚಿಕೊಂಡರು.

ಕಾರ್ಯಕ್ರಮದಲ್ಲಿ ಭಾಗಿಯಾದ ಎಲ್ಲಾ ಅತಿಥಿ ಗಣ್ಯರಿಗೆ ಸ್ಮರಣಿಕೆಗಳನ್ನು ನೀಡಿ ಗೌರವಿಸಲಾಯಿತು

ಹಾಗೆ ಈ ಕಾರ್ಯಕ್ರಮದಲ್ಲಿ ಸುರೇಶ್ ಶೆಟ್ಟಿ, ಜಾವಳಿ ವಲಯದ ಮೇಲ್ವಿಚಾರಕರಾದ ಸಂದೇಶ್, ಸೇವಾ ಪ್ರತಿನಿಧಿ ಕಾವ್ಯ, ಶಿಕ್ಷಕರು, ಪೋಷಕರು, ವಿದ್ಯಾರ್ಥಿಗಳು ಭಾಗವಹಿಸಿದ್ದರು

RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular

Recent Comments

error: Content is protected !!