ಚಿಕ್ಕಮಗಳೂರು : ವಿಶ್ವ ಹಿಂದೂ ಪರಿಷತ್ ಹಾಗೂ ಬಜರಂಗದಳ ವತಿಯಿಂದ ನಡೆಯುವ ದತ್ತಮಾಲಾ ಅಭಿಯಾನ ಸ್ಕಂದ ಪಂಚಮಿ ದಿನವಾದ ನವೆಂಬರ್ 26 ರಂದು ರಾಜ್ಯದಲ್ಲಿ ಚಾಲನೆ ಆಗಲಿದೆ ಎಂದು ವಿ. ಹಿ. ಪ. ಹಾಸನ ವಿಭಾಗದ ಸಹ ಕಾರ್ಯದರ್ಶಿ ಮಹೇಂದ್ರ ಕುಮಾರ್ ಆರ್.ಡಿ. ತಿಳಿಸಿದ್ದಾರೆ.
ಈ ಸಂಘಟನೆಯು ಈ ಬಾರಿ ಅನೇಕ ಕಾರ್ಯಕ್ರಮಗಳನ್ನು ರೂಪಿಸಿದ್ದು ಡಿಸೆಂಬರ್ 2 ರಂದು ಮಾತೆ ಅನುಸೂಯ ಪೂಜೆ ನಿಮಿತ್ತ ಚಿಕ್ಕಮಗಳೂರು ಪಟ್ಟಣದಲ್ಲಿ ಮಾತೇಯರ ನೇತೃತ್ವದಲ್ಲಿ ಬೃಹತ್ ಧಾರ್ಮಿಕ ಸಭೆ ಕಾರ್ಯಕ್ರಮ ಮತ್ತು ಸಂಕೀರ್ತನಯಾತ್ರೆ ಹಮ್ಮಿಕೊಳ್ಳಲಾಗಿದೆ.
ತದನಂತರ ದತ್ತಪೀಠಕ್ಕೆ ತೆರಳಿ ದತ್ತ ಪಾದುಕೆ ದರ್ಶನ ಪಡೆದು ಪೀಠದ ಮಹಾಪೂಜೆಯಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದು ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ.
ಡಿಸೆಂಬರ್ 3 ರಂದು ಮಧ್ಯಾಹ್ನ 2 ಘಂಟೆಗೆ ಚಿಕ್ಕಮಗಳೂರು ನಗರದ ಪ್ರಮುಖ ಬೀದಿಗಳಲ್ಲಿ ಬೃಹತ್ ಶೋಭಯಾತ್ರೆ ಆರಂಭವಾಗಲಿದೆ ಎಂದರು. ಹಿಂದೂ ಪರಂಪರೆ ಸಾರುವ ಕಲಾ ತಂಡ ಶೋಭಯಾತ್ರೆ ಮೆರಗು ನೀಡಲಿದ್ದು ಸುಮಾರು 30 ಸಾವಿರಕ್ಕೂ ಹೆಚ್ಚು ಹಿಂದೂ ಭಕ್ತರು ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುತ್ತಾರೆ.
ಇದೇ ದಿನ ಸಂಜೆ 6 ಕ್ಕೆ ಆಜಾದ್ ಪಾರ್ಕ್ ಆವರಣದಲ್ಲಿ ಡಾ. ಮಹರ್ಷಿ ಆನಂದ್ ಗುರೂಜಿ ಅವರ ಧಾರ್ಮಿಕ ಸಭೆ ನಡೆಯಲಿದ್ದು ಸಭಾ ಕಾರ್ಯಕ್ರಮದಲ್ಲಿ ಅಖಿಲಾ ಭಾರತೀಯ ವಿಶ್ವ ಹಿಂದೂ ಪರಿಷತ್ ಕಾರ್ಯದರ್ಶಿ ಗೋಪಾಲ ಜಿ ಅವರು ದಿಕ್ಸೂಚಿ ಭಾಷಣ ಮಾಡಲಿದ್ದಾರೆ
ಡಿ. 4 ರಂದು 25 ಸಾವಿರಕ್ಕೂ ಅಧಿಕ ದತ್ತ ಮಾಲಾಧಾರಿಗಳು ರಾಜ್ಯದ ನಾನಾ ಭಾಗಗಳಿಂದ ಆಗಮಿಸಿ ಪಾದುಕೆ ದರ್ಶನ ಪಡೆದು ಹೋಮ ಹವನಗಳಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದರು.
ಈ ಬಾರಿ ಜಿಲ್ಲೆಯ 40 ಭಾಗಗಳಲ್ಲಿ ಮಾಲಾಧಾರಣೆ ಮತ್ತು ದತ್ತ ಜಯಂತಿ ನಡೆಯಲಿದ್ದು ದತ್ತಾಪೀಠಕ್ಕೆ ತೆರಳುವ ಮಾರ್ಗ ಮೂಲಭೂತ ಕೊರತೆ ಬಾರದಂತೆ ನೋಡಿಕೊಳ್ಳುವಂತೆ ತಿಳಿಸಿದರು
ಈ ಸಂದರ್ಭದಲ್ಲಿ ಸಂಘಟನೆ ಕಾರ್ಯಕರ್ತರಾದ ಅಣ್ಣಪ್ಪ, ಮಂಜು ಶೆಟ್ಟಿ, ಸುರೇಶ್, ಉಮೇಶ್, ಸೋಮೇಶ್ ಸೇರಿದಂತೆ ಅನೇಕರು ಇದ್ದರು.
