ಚಿಕ್ಕಮಗಳೂರು : ನಗರದ ಸುಭಾಷ್ ಚಂದ್ರ ಬೋಸ್ ಆಟದ ಮೈದಾನದಲ್ಲಿ ರಾಣಾ ಸ್ಪೋರ್ಟ್ಸ್ ಕ್ಲಬ್ ಹಾಗೂ ಚಿಕ್ಕಮಗಳೂರ್ ಪ್ರಿಮಿಯಾರ್ ಲೀಗ್ ಸಮಿತಿ ವತಿಯಿಂದ ಲೆದರ್ ವೈಟ್ ಬಾಲ್ ಕ್ರಿಕೆಟ್ ಕ್ರೀಡಾಕೂಟ ಆಯೋಜಿಸಲಾಗಿದೆ.
ಈ ಕುರಿತು ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ರಾಣಾ ಸ್ಪೋರ್ಟ್ಸ್ ಕ್ಲಬ್ ಅಧ್ಯಕ್ಷ ಸುದರ್ಶನ್, ರಾಜ್ಯ ಪ್ರಶಸ್ತಿ ವಿಜೇತೆ ದಿ. ಗೌರಮ್ಮ ಬಸವಗೌಡ ಸ್ಮರಣಾರ್ಥ 8ನೇ ಆವೃತಿಯ ಚಿಕ್ಕಮಗಳೂರು ಪ್ರಿಮಿಯರ್ ಲೀಗ್ (CPL) ಕ್ರೀಡಾಕೂಟ ಹಮ್ಮಿಕೊಂಡಿದ್ದು ಇದೇ ನವೆಂಬರ್ ದಿನಾಂಕ 24 ರಿಂದ 30 ನೇ ದಿನಾಂಕದವರೆಗೂ ಕ್ರೀಡಾಕೂಟ ನಡೆಯಲಿದ್ದು, ಶಿವಮೊಗ್ಗ ವಲಯದಲ್ಲಿ ಬರುವ ಚಿಕ್ಕಮಗಳೂರು, ಹಾಸನ,ಶಿವಮೊಗ್ಗ ಜಿಲ್ಲೆಯ ಆಟಗಾರರು ಭಾಗವಹಿಸುತ್ತಾರೆ. ಒಟ್ಟು 5 ತಂಡಗಳು ಕ್ರೀಡಾಕೂಟದಲ್ಲಿ ಭಾಗಿಯಾಗಲಿದ್ದು ತಂಡಗಳನ್ನು ಮಾಲೀಕರು ಆಯ್ಕೆ ಮಾಡಿದ್ದೂ ಪ್ರತಿ ದಿನ ಎರಡು ಪಂದ್ಯಗಳು ಮಾತ್ರ ನಡೆಯಲಿದ್ದು ಬೆಳಗ್ಗೆ ಹಾಗೂ ಮಧ್ಯಾಹ್ನ ತಲಾ ಒಂದೊಂದು ಪಂದ್ಯ ನಡೆಯಲಿವೆ ಎಂದು ತಿಳಿಸಿಕೊಟ್ಟರು.
ಹಾಗೆ ಈ ಕ್ರೀಡಾಕೂಟದಲ್ಲಿ ಸನ್ನಿ ಬಾಯ್ಸ್, ರೈಸಿಂಗ್ ಸ್ಟಾರ್ಸ್, ಹೊಯ್ಸಳ ಟೈಗರ್ಸ್, ಮಾಸ್ಟರ್ ಬ್ಳಿಸ್, ಮಲ್ನಾಡ್ ಗ್ಲಾಡಿಯೆಟರ್ಸ್ ಈ ತಂಡಗಳು ಕ್ರೀಡಾಕೂಟದಲ್ಲಿ ಪ್ರತಿನಿಧಿಸಲಿದ್ದು ಈ ಹಿಂದಿನ ಆವೃತ್ತಿಯ ಕ್ರೀಡಾಕೂಟ ದಾನಿಗಳು,. ಕ್ರೀಡಾಭಿಮಾನಿಗಳ ಸಹಕಾರದಿಂದ ಯಶಸ್ಸು ಕಂಡಿದ್ದು ಈ ಬಾರಿಯ ಕ್ರೀಡಾಕೂಟವನ್ನು ಯಶಸ್ಸುಗೊಳಿಸಬೇಕಾಗಿ ವಿನಂತಿಸಿದರು. ಕ್ರೀಡಾಕೂಟದ ಪ್ರಥಮ ಬಹುಮಾನ 1, 50,000 ನಗದು ಹಾಗೂ ದ್ವಿತೀಯ ಬಹುಮಾನ 75, 000 ನಗದಾಗಿರುತ್ತದೆ. ಕ್ರೀಡಾಕೂಟದ ಸಮಾರೂಪ ಸಮಾರಂಭ ಭಾನುವಾರ ನಡೆಯಲಿದೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ರಾಣಾ ಸ್ಪೋರ್ಟ್ಸ್ ಕ್ಲಬ್ ಅಧ್ಯಕ್ಷ ಸುದರ್ಶನ್, ಕಾರ್ಯದರ್ಶಿ ಗೋಪಾಲಕೃಷ್ಣನ್ ಚಿಕ್ಕಮಗಳೂರ್ ಪ್ರಿಮಿಯರ್ಲೀಗ್ ಸಮಿತಿ ಅಧ್ಯಕ್ಷ ವಕೀಲರು ರೀನೇಶ್ ಕಾರ್ಯದರ್ಶಿ ಹರೀಶ್ ಸಿ. ಕೆ. ಸದಸ್ಯರಾದ ನಟರಾಜ್, ಅಭಿಷೇಕ್, ಸಚ್ಚಿದಾನಂದ, ನವೀನ್ ಭಟ್, ಸಂತೋಷ್, ಗಣೇಶ್ ಉಪಸ್ಥಿತರಿದ್ದರು.
