Tuesday, August 11, 2026
Homeಜಿಲ್ಲಾಸುದ್ದಿಮೂಡಿಗೆರೆ : ಶಾಸಕಿ "ನಮೋ" ಹಸ್ತಗಳಿಂದ ಸೇತುವೆ ನಿರ್ಮಾಣಕ್ಕೆ ಗುದ್ದಲಿ ಪೂಜೆ!

ಮೂಡಿಗೆರೆ : ಶಾಸಕಿ “ನಮೋ” ಹಸ್ತಗಳಿಂದ ಸೇತುವೆ ನಿರ್ಮಾಣಕ್ಕೆ ಗುದ್ದಲಿ ಪೂಜೆ!

Telegram Group
Join Now

ಮೂಡಿಗೆರೆ : ತಾಲೂಕಿನ ಬಾಳೂರು ಗ್ರಾಮ ಪಂಚಾಯತಿ ವ್ಯಾಪ್ತಿಯ ಬಾಳೂರು ಗ್ರಾಮ ಹಾಗೂ ಹೇಮಾವತಿ ನದಿಗೆ ಸುಗಮ ಸಂಪರ್ಕ ಕಲ್ಪಿಸುವ ಬಹು ನಿರೀಕ್ಷಿತ 50 ಲಕ್ಷ ರೂ. ಮೌಲ್ಯದ ಸೇತುವೆ ನಿರ್ಮಾಣ ಕಾರ್ಯಕ್ಕೆ ಇಂದು ಶಾಸಕಿ ನಯನ ಮೋಟಮ್ಮ ಅವರಿಂದ ಗುದ್ದಲಿ ಪೂಜೆ ನೆರವೇರಿತು.

ಗ್ರಾಮಸ್ಥರ ಹರ್ಷೋದ್ಘಾರ ನಡುವೆ ಮಾತನಾಡಿದ ಶಾಸಕಿ ನಯನ ಮೋಟಮ್ಮ ಅವರು, ಈ ಸೇತುವೆ ಬಾಳೂರಿನ ಸಂಚಾರಕ್ಕೆ ಹೊಸ ಜೀವ ತುಂಬುವ ಜೊತೆಗೆ ಕೃಷಿ ಮತ್ತು ವಿದ್ಯಾರ್ಥಿಗಳ ಸಂಚಾರಕ್ಕೆ ಹೊಸ ಬೆಳಕಾಗುತ್ತದೆ ಎಂದರು

ಬಾಳೂರಿನ ಪ್ರಗತಿ ನಮ್ಮ ಜವಾಬ್ದಾರಿ ಈ ಯೋಜನೆ ಗ್ರಾಮಾಭಿವೃದ್ಧಿಗೆ ದೊಡ್ಡ ಹೆಜ್ಜೆ ಎಂದು ಹೇಳಿದರು. ಹೊಸ ಸೇತುವೆಯ ನಿರ್ಮಾಣ ಆರಂಭದಿಂದ ಬಾಳೂರಿನ ಕನಸು ನನಸಾಗಿರುವುದಾಗಿ ಗ್ರಾಮಸ್ಥರು ಸಂತೋಷ ವ್ಯಕ್ತಪಡಿಸಿದರು.

ಗ್ರಾಮಾಭಿವೃದ್ಧಿಗೆ ಹೊಸ ಬಾಗಿಲು ತೆರೆಯಲಿರುವ ಈ ಯೋಜನೆಗೆ ಜನರು ಭರವಸೆ ಮತ್ತು ಹರ್ಷವನ್ನು ವ್ಯಕ್ತಪಡಿಸಿದರು.

ಈ ಶುಭ ಸಂದರ್ಭದಲ್ಲಿ ಉಪೇಂದ್ರ ಗೌಡ, ಬಿಜಿ ಶ್ರೀನಾಥ್, ಮಂಜುನಾಥ್, ಮಹೇಶ್ ಬಾಳೂರು, ಲಾರೆನ್ಸ್, ಸತೀಶ್ ಬಾಳೂರು, ಸುರೇಶ್, ಶರಣ್ ಪಟೇಲ್, ಬಾಲಕೃಷ್ಣ, ವಿಜೇಂದ್ರ ಗೌಡ, ಆದರ್ಶ್ ಸೇರಿದಂತೆ ಅನೇಕ ಗ್ರಾಮಸ್ಥರು ಭಾಗವಹಿಸಿ ಗುದ್ದಲಿ ಪೂಜೆಗೆ ಸಕ್ರಿಯ ಬೆಂಬಲ ನೀಡಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular

Recent Comments