ಚಿಕ್ಕಮಗಳೂರು: ವೈದಕೀಯ ಕಾಲೇಜಿನಲಿ ರಾಸಾಯನಿಕ ಸಿಂಪಡಣೆಯಿಂದ ಜೇನುಹುಳಗಳ ಸಾಮೂಹಿಕ ಮಾರಣಹೋಮ ನಡೆಸಿರುವುದರ ಕುರಿತು ಕಠಿಣ ಕಾನೂನು ಕ್ರಮಕ್ಕೆ ಆಗ್ರಹಿಸಿ ಚಿಕ್ಕಮಗಳೂರು ಅರಣ್ಯಾಧಿಕಾರಿಗಳಿಗೆ ಪರಿಸರ ಪ್ರೇಮಿ ನಾಗರಾಜ್ ಕೂವೆ ಎಂಬುವರು ದೂರನ್ನು ನೀಡಿದ್ದಾರೆ.
ಇತೀಚೆಗೆ ಚಿಕಮಗಳೂರು ಮೆಡಿಕಲ್ ಕಾಲೇಜಿನಲಿ(Chikkamagaluru Institute of Medical Sciences)
ರಾಸಾಯನಿಕ ಸಿಂಪಡಣೆಯಿಂದ ಅವೈಜ್ಞಾನಿಕವಾಗಿ ಹಲವಾರು ಜೇನುನೊಣಗಳನ್ನು ನಾಶ ಮಾಡಲಾಗಿದೆ
ಇಲ್ಲಿನ ಆಡಳಿತ ವ್ಯವಸ್ಥೆಯೇ ಮುಂದೆ ನಿಂತು ನಡೆಸಿದೆ.
ಪರಿಸರ ಸ್ನೇಹಿಯಾಗಿರಬೇಕಿದ ಮೆಡಿಕಲ್ ಕಾಲೇಜು ಅನಗತ್ಯವಾಗಿ ಜೇನು ಹುಳಗಳನ್ನು ಸಮಸ್ಯೆಯೆಂಬಂತೆ ಬಿಂಬಿಸಿದೆ. ಇಲಿಯವರೆಗೆ ಮೆಡಿಕಲ್ ಕಾಲೇಜಿನಲ್ಲಿ ಯಾವುದೇ ವಿದ್ಯಾರ್ಥಿಗಳ ತಂಟೆಗೆ ಹೋಗಿಲ್ಲ ಭಯ, ಆತಂಕಗಳಿದ್ದರೂ ಹೆಚ್ಚಿನವರು ಜೇನಿನ ಸಂರಕ್ಷಣೆಯ ಪರವಾಗಿಯೇ ಇದ್ದಾರೆ. ಆಡಳಿತ ಮಂಡಳಿ ಕೆಲವೇ ಕೆಲವು ಶ್ರೀಮಂತ ಪೋಷಕರು, ಹಾಗೂ ರಾಜಕೀಯ ಒತ್ತಡಕ್ಕೆ ಮಣಿದು ಜೇನು ನೊಣಗಳಿಗೆ ರಾಸಾಯನಿಕ ಸಿಂಪಡಿಸಿದೆ.
ಇತ್ತೀಚಿಗೆ ಚಿಕ್ಕಮಗಳೂರಿನ ಮೌಂಟೆನ್ ವ್ಯೂ ಖಾಸಗಿ ಕಾಲೇಜಿನಲ್ಲಿ ವಿದ್ಯಾರ್ಥಿ ಒಬ್ಬ ಜೇನುಗೂಡಿಗೆ ಕಲ್ಲು ಹೊಡೆದು ಸಮಸ್ಯೆಯಾಗಿತ್ತು ಹೊರತು ಯಾರಿಗೂ ಹೋಗಿ ದಾಳಿ ಮಾಡಿರಲಿಲ್ಲ. ಘಟನೆಯ ನಂತರ ಜೇನು ದಾಳಿಯ ಬಗ್ಗೆ ಕಾಲೇಜು ಮಕ್ಕಳಲ್ಲಿ ಒಂದು ಜಾಗೃತಿ ಮೂಡಿಸಬೇಕು ಇತರ ಹುಳುಗಳನ್ನು ಸಾಯಿಸಬಾರದೆಂದು ಹೇಳಿದ್ದಾರೆ
ಜೇನುಗೂಡು ಸುರಕ್ಷಿತವಾಗಿ ಬೇರೆ ಕಡೆ ವರ್ಗಾವಣೆ ಮಾಡಲು ಅವಕಾಶ ಇತ್ತು ಅದಕ್ಕಾಗಿ ಕೆಲಸ ಮಾಡುತ್ತಿರುವ ತಂಡಗಳು ಕೂಡ ಇವೆ. ಅವರನ್ನು ಸಂಪರ್ಕಿಸಬಹುದಾಗಿತ್ತು ಅವರು ಯಾವುದೇ ಕಾರಣಕ್ಕೂ ಜೇನು ನಾಶ ಮಾಡಲು ಬಿಡುತ್ತಿರಲಿಲ್ಲ ಇಂತಹ ಗೂಡುಗಳನ್ನು ಕಾಡಿಗೆ ಸುರಕ್ಷಿತವಾಗಿ ಬಿಡಲು ಬೇಕಾದ ತಜ್ಞರಿಗೆ ಪರ್ಯಾಯ ಸಾಧ್ಯತೆಗಳು ಇದ್ದವು. ಕಾಲೇಜು ಡೀನ್ ಡಾ. ಹರೀಶ್ ಆಡಳಿತ ವ್ಯವಸ್ಥೆ ದುಡುಕಿ ಏಕ ಪಕ್ಷ ನಿರ್ಧಾರ ಕೈಗೊಂಡಿದೆ.
ಕ್ರಿಮಿ ಕೀಟಗಳಿಗೆ ಮೆಸ್ ಹಾಕಿ ಜೇನುನೊಣಗಳ ಕೋಣೆಯ ಪ್ರವೇಶದಂತೆ ಸುರಕ್ಷಿತ ಕ್ರಮ ಕೈಗೊಳ್ಳುವ ಬದಲು ಆಡಳಿತ ಮಂಡಳಿ ಜೇನುನೊಣಗಳನ್ನು ನಾಶ ಮಾಡಿರುವುದು ಆಘಾತಕಾರಿ ಪರಿಸರ ಸಮತೋಲನದಲ್ಲಿ ಪ್ರಮುಖ ಪಾತ್ರ ವಹಿಸುವ ಜೇನುಗೂಡು ಮಾರಣ ಹೋಮ ನಡೆಸಿದೆ ಈ ಸಾವುಗಳಿಗೆ ಜವಾಬ್ದಾರಿ ಯಾರು ಎಂದು ಪ್ರಶ್ನೆ ಮಾಡಿದರು
ಕಾಫಿ ಹೂವಿನ ಸಮಯದಲ್ಲಿ ದೂರಾದ ಬೆಂಗಳೂರಿನಿಂದಲೂ ಜೇನು ಹುಳಗಳು ಪಶ್ಚಿಮ ಘಟ್ಟಕ್ಕೆ ವಲಸೆ ಬಂದು ಪರಾಗಸ್ಪರ್ಶ ಮಾಡುತ್ತವೆ ಎಂದು ವೈಜ್ಞಾನಿಕ ಅಧ್ಯಯನಗಳು ಹೇಳುತ್ತವೆ ಈಗ ಮೆಡಿಕಲ್ ಕಾಲೇಜ್ ಇರುವ ಜಾಗ ಹಿಂದೆ ಕಾಡು ಆಗಿತ್ತು. ಈಗ ಈ ರೀತಿ ಮಾಡಿದ್ದು ಖೇದಕರ ಎಂದು ಹೇಳಿದರು
ಜೇನು ತಜ್ಞರು ಸಾಕ್ಷ ಚಿತ್ರ ಮೊದಲಾದ ವಿಧಾನಗಳ ಮೂಲಕ ಯುವಜನರಲ್ಲಿ ಜೇನಿನ ಬಗ್ಗೆ ಹೆಚ್ಚು ಜಾಗೃತಿ ಮೂಡಿಸಿ ಅರಿವು ತುಂಬಬೇಕು ವೈದ್ಯಕೀಯ ಕಾಲೇಜು ಅವುಗಳ ಮರಣವನ್ನು ನಡೆಸಿರುವುದು ತೀವ್ರ ಖಂಡನೆ ಅರಣ್ಯ ಇಲಾಖೆ ಇದನ್ನು ಗಂಭೀರವಾಗಿ ಪರಿಗಣಿಸಿ ಸೂಕ್ತ ವಿಚಾರಣೆ ನಡೆಸಿ ಕಾನೂನು ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸುತ್ತೇವೆ
