Tuesday, August 11, 2026
Homeಜಿಲ್ಲಾಸುದ್ದಿಎನ್‌.ಆರ್‌. ಪುರ: ಆಟೋ ಚಾಲಕ & ಮಾಲೀಕರ ಕ್ಷೇಮಾಭಿವೃದ್ಧಿ ಸಂಘದಿಂದ ಅದ್ಧೂರಿ ಕನ್ನಡ ರಾಜ್ಯೋತ್ಸವ

ಎನ್‌.ಆರ್‌. ಪುರ: ಆಟೋ ಚಾಲಕ & ಮಾಲೀಕರ ಕ್ಷೇಮಾಭಿವೃದ್ಧಿ ಸಂಘದಿಂದ ಅದ್ಧೂರಿ ಕನ್ನಡ ರಾಜ್ಯೋತ್ಸವ

Telegram Group
Join Now

ಎನ್ ಆರ್ ಪುರ: ನಾಳೆ ಜೈ ಶ್ರೀ ಭುವನೇಶ್ವರಿ ಆಟೋ ಚಾಲಕರು ಮತ್ತು ಮಾಲೀಕರ ಕ್ಷೇಮಾಭಿವೃದ್ಧಿ ಸಂಘದ ವತಿಯಿಂದ 70ನೇ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮವನ್ನು ನರಸಿಂಹರಾಜಪುರದ ಮುಖ್ಯ ಆಟೋ ನಿಲ್ದಾಣ ( ಬಸ್ ನಿಲ್ದಾಣ ಆವರಣ) ದಲ್ಲಿ ಅದ್ಧೂರಿಯಾಗಿ ಆಚರಿಸಲಾಗುವುದು ಎಂದು ಆಟೋ ಚಾಲಕ ಮತ್ತು ಮಾಲೀಕರ ಸಂಘದ ಅಧ್ಯಕ್ಷರಾದ ಮಧುಸೂದನ್ ವಿ ಪಬ್ಲಿಕ್ ಇಂಪ್ಯಾಕ್ಟ್ ಗೆ ತಿಳಿಸಿದ್ದಾರೆ.

ಬೆಳಗ್ಗೆ9 ಗಂಟೆಗೆ ಧ್ವಜಾರೋಹಣ ನಂತರ ಎಂ ಶ್ರೀನಿವಾಸ್ ಅಭಿಮಾನಿ ಬಳಗ ಮತ್ತು ವಿಶ್ವನಾಥ್ ಗದ್ದೆಮನೆ ಅಭಿಮಾನಿ ಬಳಗ ಹಾಗೂ ನರಸಿಂಹರಾಜಪುರದ ರೋಟರಿ ಕ್ಲಬ್, ಲಯನ್ಸ್ ಕ್ಲಬ್ ಸಹಯೋಗದೊಂದಿಗೆ ಸ್ವಯಂಪ್ರೇರಿತ ಬೃಹತ್ ರಕ್ತದಾನ ಶಿಬಿರವನ್ನು ಹಮ್ಮಿಕೊಳ್ಳಲಾಗಿದೆ.

ನಂತರ 11 ಗಂಟೆಗೆ ಸರಿಯಾಗಿ ಬಿ ಹೆಚ್ ಕೈಮರದಿಂದ ಟಿ ಬಿ ಸರ್ಕಲ್ ವರೆಗೆ ಕನ್ನಡಾಂಬೆಯ ಭಾವಚಿತ್ರದೊಂದಿಗೆ ಎಲ್ಲಾ ಆಟೋಗಳ ಮೆರವಣಿಗೆಯನ್ನು ಆಯೋಜಿಸಲಾಗಿದ್ದು, ಸಂಜೆ ೬ ಗಂಟೆಗೆ ಸರಿಯಾಗಿ ಸಮಾರೋಪ ಸಮಾರಂಭವಿದೆ.

ನಂತರ 7 ಗಂಟೆಗೆ ಎನ್ ತಾಜ್ ಕೊಪ್ಪ ಅರ್ಪಿಸುವ ಕರ್ನಾಟಕದ ಆಯ್ದ ಕಲಾವಿದರನ್ನೊಳಗೊಂಡ ತಂಡದವರಿಂದ ಲೈವ್ ಮ್ಯೂಸಿಕ್ ಆರ್ಕೆಸ್ಟ್ರಾ ಕಾರ್ಯಕ್ರವೂ ಇರುತ್ತದೆ.

ಸರ್ವರಿಗೂ ಆದರದ ಸುಸ್ವಾಗತ ಕೋರುವವರು ಅಧ್ಯಕ್ಷರು ಮತ್ತು ಸರ್ವ ಸದಸ್ಯರು ಜೈ ಶ್ರೀ ಭುವನೇಶ್ವರಿ ಆಟೋ ಚಾಲಕರು ಮತ್ತು ಮಾಲೀಕರ ಕ್ಷೇಮಾಭಿವೃದ್ಧಿ ಸಂಘ (ರಿ) ನರಸಿಂಹರಾಜಪುರ.

ವರದಿ: ಶಶಿ ಬೆತ್ತದಕೊಳಲು

RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular

Recent Comments