Tuesday, August 11, 2026
Homeಕ್ರೈಮ್ಚಿಕ್ಕಮಗಳೂರು: ಹತ್ತಿ ಬೆಳೆ: ತೂಕದಲ್ಲಿ ವ್ಯಾಪಾರಿಯಿಂದ ರೈತರಿಗೆ ಮೋಸ!

ಚಿಕ್ಕಮಗಳೂರು: ಹತ್ತಿ ಬೆಳೆ: ತೂಕದಲ್ಲಿ ವ್ಯಾಪಾರಿಯಿಂದ ರೈತರಿಗೆ ಮೋಸ!

Telegram Group
Join Now

ಚಿಕ್ಕಮಗಳೂರು : ಲಕ್ಯಾ ಹೋಬಳಿ ಲಕ್ಕಮ್ನಳ್ಳಿ ಗ್ರಾಮದಲ್ಲಿ ಹತ್ತಿ ಬೆಳೆದ ರೈತರಿಗೆ ವ್ಯಾಪಾರಿಯು ತೂಕದಲ್ಲಿ ಮೋಸ ಮಾಡಿರುವುದು ಪತ್ತೆಯಾಗಿದೆ. ಲಕ್ಕಮ್ಮನಹಳ್ಳಿ ಗ್ರಾಮದ ರೈತರು ಜಿಲ್ಲಾ ರೈತ ಸಂಘಕ್ಕೆ ದೂರು ನೀಡಿದ್ದು , ಸ್ಥಳಕ್ಕೆ ತೆರಳಿದ ಜಿಲ್ಲಾ ಸಮಿತಿ ಪದಾಧಿಕಾರಿಗಳು ಹಾಗೂ ಲಕ್ಕಮನಳ್ಳಿ ಗ್ರಾಮಸ್ಥರು ಹತ್ತಿ ತುಂಬಿದ್ದ ವಾಹನವನ್ನು ತಡೆದಿದ್ದಾರೆ.


ಪುನಃ ಚೀಲಗಳನ್ನು ತೂಕ ಮಾಡಿದಾಗ  ಪ್ರತಿ ಚೀಲಕ್ಕೆ 20 ರಿಂದ 22 ಕೆಜಿ ತೂಕದಲ್ಲಿ ಮೋಸ ಮಾಡಿದ್ದು  ಕಂಡು ಬಂದಿದ್ದು , ವಂಚನೆ ಮಾಡಿ ಪಡೆದಿದ್ದ ಹಣವನ್ನು ರೈತರಿಗೆ ಕೊಡಿಸಲಾಗಿದೆ


ಲಕ್ಕಮನಳ್ಳಿ ಗ್ರಾಮದ ರೈತ ಕಲ್ಮರ್ಡಪ್ಪ ಉದಯ್ ಕುಮಾರ್, ಶ್ರೀದರ್ ,ಪುನೀತ್ ಎಂಬುವವರಿಂದ ಚಿತ್ರದುರ್ಗ ಜಿಲ್ಲೆಯ ಮಂಜುನಾಥ  ಹತ್ತಿ ವ್ಯಾಪಾರಿಯು ಪ್ರತಿ ಕೆಜಿಗೆ 97 ರೂಪಾಯಿನಂತೆ ಹತ್ತಿ ಕೊಂಡಿದ್ದ.


ರೈತರ ಗಮನಕ್ಕೆ ಬಾರದಂತೆ ತೂಕದಲ್ಲಿ ಮೋಸ ಮಾಡಿದ್ದು, ಹತ್ತಿಯ ಚೀಲವನ್ನು ಲಾರಿಗೆ ತುಂಬಿಸುವಾಗ ಅನುಮಾನಗೊಂಡ ರೈತರು ದೂರು ನೀಡಿದ್ದರು.


ಹತ್ತಿ ಚೀಲ ತುಂಬಿದ್ದ ಲಾರಿಯನ್ನು ತಡೆದು ಸಕ್ರಾಯ ಪಟ್ಟಣ ಪೊಲೀಸ್ ಠಾಣೆಗೆ ದೂರು ನೀಡಲಾಗಿತ್ತು. ರೈತ ಸಂಘದ ಪದಾಧಿಕಾರಿಗಳು ಹಾಗೂ ಪೊಲೀಸರ ಸಮ್ಮುಖದಲ್ಲಿ ಹತ್ತಿ ಚೀಲಗಳನ್ನು ಪುನಃ ತೂಕ ಮಾಡಿದ್ದು ಪಂಚನೆ ಬೆಳಕಿಗೆ ಬಂದಿದೆ.


ಸುಮಾರು 70,000 ರೂ.ಗಳನ್ನು  ರೈತರಿಗೆ ವ್ಯಾಪಾರಿಯಿಂದ ಕೊಡಿಸಲಾಗಿದೆ.  ಜಿಲ್ಲಾಧ್ಯಕ್ಷ ಡಿ .ಮಹೇಶ್,  ಗೌರವಾಧ್ಯಕ್ಷ ಎಂಸಿ ಬಸವರಾಜ್ ,ಕಾರ್ಯದರ್ಶಿ ಉಮೇಶ್ ಹಿರೇಗೌಜ, ಉಪಾಧ್ಯಕ್ಷ ಕುಮಾರಸ್ವಾಮಿ  ದೇವರಾಜ್ ಜೆ ಎಸ್ ಶಿವಣ್ಣ  ಸಿದ್ದೇಗೌಡ ಹಾಗೂ ಲಕ್ಕಮನಹಳ್ಳಿ ಗ್ರಾಮಸ್ಥರು ಹಾಜರಿದ್ದರು.

RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular

Recent Comments