ಮೂಡಿಗೆರೆ: ತಾಲೂಕಿನ DSBG ಕಾಲೇಜಿನ ಸಮೀಪದಲ್ಲಿ ಹಲವಾರು ವರ್ಷಗಳಿಂದ ಸಂತೆ ನಡೆಯುತ್ತಿದ್ದು ವಿದ್ಯಾರ್ಥಿಗಳಿಗೆ ವಿದ್ಯಾಭ್ಯಾಸ ಕಿರಿಕಿರಿ ಉಂಟಾಗುತ್ತಿದೆ ಎಂಬ ಆರೋಪ ವಿದ್ಯಾರ್ಥಿ ವಲಯದಲ್ಲಿ ಹಲವು ವರ್ಷಗಳಿಂದ ಕೇಳಿ ಬರುತ್ತಿತ್ತು. ಹಿಂದಿನಿಂದಲೂ ಎಬಿವಿಪಿ ಕಾರ್ಯಕರ್ತರು ಅನೇಕ ಹೋರಾಟಗಳ ಮೂಲಕ ಸರ್ಕಾರಗಳಿಗೆ ಮಾಹಿತಿ ನೀಡಿದ್ದರೂ ಸ್ಪಂದನೆಗೆ ವಿಳಂಬವಾಗುತ್ತಿತ್ತು.
ಈ ನಿಟ್ಟಿನಲ್ಲಿ ಇತ್ತೀಚಿನ ದಿನಗಳಲ್ಲಿ ನೂತನ ತಾಲೂಕು ದಂಡಾಧಿಕಾರಿ ಶ್ರೀಮತಿ ಅಶ್ವಿನಿ ಅವರಿಗೆ ಮನವಿ ಸಲ್ಲಿಸಿದ ಎಬಿವಿಪಿ ಕಾರ್ಯಕರ್ತರು ಈಗ ಅವರ ಮನವಿಗೆ ಸ್ಪಂದಿಸಿ ಇಂದು ಸಂತೆ ಆವರಣವನ್ನು ಸ್ವಚ್ಛ ಕಾರ್ಯಕ್ಕೆ ಮುಂದಾದ ತಹಶೀಲ್ದಾರ್ ಇದರಿಂದ ಇವರ ಈ ಕಾರ್ಯಕ್ಕೆ ವಿದ್ಯಾರ್ಥಿಗಳು ಮೆಚ್ಚುಗೆ ಹೊರಹಾಕಿದ್ದಾರೆ
ಈ ಕುರಿತಾಗಿ ಪ್ರತಿಕ್ರಿಯಿಸಿದ ಎಬಿವಿಪಿ ಸಾಮಾಜಿಕ ಜಾಲತಾಣ ಮುಖ್ಯಸ್ಥ ಹರ್ಷಿತ್ ಮಾತನಾಡಿ, ವಿದ್ಯಾರ್ಥಿಗಳ ಸಮಸ್ಯೆಗೆ ಸ್ಪಂದನೆ ನೀಡಿದ ಅಶ್ವಿನಿ ಅವರಿಗೆ ಧನ್ಯವಾದ ತಿಳಿಸಿದರು. ವಾರದ ಸಂತೆ ಶುಕ್ರವಾರದಂದು ನಡೆಯುತ್ತಿದೆ ವಿದ್ಯಾರ್ಥಿಗಳ ಶೈಕ್ಷಣಿಕ ಹಿತಾದೃಷ್ಟಿಯಿಂದ ಇದನ್ನ ಭಾನುವಾರ ನಡೆಸುವಂತೆ ಮನವಿ ಮಾಡಿದ್ದು ಮುಂದಿನ ಸಭೆಗಳಲ್ಲಿ ಚರ್ಚಿಸಿ ತೀರ್ಮಾನ ತೆಗೆದುಕೊಳ್ಳಲಾಗುವುದು ಎಂದು ದಂಡಾಧಿಕಾರಿಗಳು ಭರವಸೆ ನೀಡಿದ್ದಾರೆ ಎಂದರು
ಈ ಸಂದರ್ಭದಲ್ಲಿ ಎಬಿವಿಪಿ ತಾಲೂಕು ಪ್ರಮುಖ್ ಬಿ ಆರ್, ಯಶವಂತ್ ನಗರ ಕಾರ್ಯದರ್ಶಿ
ಶ್ರವನ್ ಎಚ್ ಆರ್, ಉಪಾಧ್ಯಕ್ಷ ಸಾತ್ವಿಕ್ ವಿಎಸ್, ಅಂಕುಶ್, ಸಂಜನ, ಆದಿತ್ಯ, ಅನ್ವೇಶ್ ಸೇರಿದಂತೆ ಹಲವು ABVP ಕಾರ್ಯಕರ್ತರು ಇದ್ದರು.
