ಸಕಲೇಶಪುರ: ತಾಲೂಕು ಬಾಳ್ಳುಪೇಟೆಯ ಮಂಗಳೂರು ಕ್ಲಿನಿಕ್ ಮತ್ತು ಸೋಜಾ ಮೆಡಿಕಲ್ ಸುತ್ತ ಅನುಮಾನದ ಹುತ್ತ ಸುಮಾರು ಹತ್ತು ಹದಿನೈದು ವರ್ಷಗಳ ಹಿಂದಿನ ಔಷಧಿ ಮಾತ್ರೆಗಳನ್ನು ತಮ್ಮ ಕ್ಲಿನಿಕ್ ನಲ್ಲಿ ಇಟ್ಟು ರಾತ್ರೋರಾತ್ರಿ ಬೆಳಗೋಡು ಹೋಬಳಿ ಚಂದನ ಮನೆಯ ರೈಲ್ವೆ ಬ್ರಿಡ್ಜ್ ಹಾಗೂ ಈಶ್ವರ ಹಳ್ಳಿ ಕೂಡಿಗೆಯ ಬಳಿ ಎಸೆದಿರುವುದು ಕಂಡು ಬಂದಿದೆ.
ಇದನ್ನು ಮಲೆನಾಡು ರಕ್ಷಣಾ ಸೇನೆ ಹಾಗೂ ಗ್ರಾಮಸ್ಥರು ಸೇರಿ ಅವರ ಬಳಿಯೇ ತೆಗಿಸುವ ಕೆಲಸ ಮಾಡಿದ್ದಾರೆ
ಮತ್ತು ಮುಂದಿನ ದಿನಗಳಲ್ಲಿ ಇವರ ಕ್ಲಿನಿಕ್ ಮತ್ತು ಮೆಡಿಕಲ್ ಅನ್ನು ಸೀಸ್ ಮಾಡಿ ಇವರುಗಳ ಮೇಲೆ ಮುಖದ್ದಮೆ ಹೂಡದೆ ಇದ್ದಲ್ಲಿ ಮಲೆನಾಡು ರಕ್ಷಣಾ ಸೇನೆ ಜಿಲ್ಲಾ ಅಧಿಕಾರಿಗಳ ಕಚೇರಿಯ ಮುಂದೆ ಧರಣಿ ನಡೆಸುವುದಾಗಿ ತಿಳಿಸಿದ್ದಾರೆ

