ಜಯಪುರ: ಮೇಗುಂದ ಹೋಬಳಿಯ ಮತ್ತು ಕಂದಾಯ ಇಲಾಖೆಯ ಬಹುವರ್ಷಗಳ ಕನಸು ನಸಸಾಗಿದೆ
ಜಯಪುರದಲ್ಲಿ ನಾಡಕಚೇರಿಗೆ ಸ್ವಂತ ಕಟ್ಟಡವಿಲ್ಲದೆ ಬೇರೆ ಕಟ್ಟಡಗಳಲ್ಲಿ ಇಂದಿಗೂ ಕಾರ್ಯನಿರ್ವಹಿಸುತ್ತಿದೆ.

ಮೇ ತಿಂಗಳಲ್ಲಿ ನಾಡಕಛೇರಿ ಇದ್ದ ಕಟ್ಟಡದ ಮೇಲ್ಫಾವಣಿ ಇದ್ದಕ್ಕಿದ್ದಂತೆ ಕುಸಿದು ನಾಡ ಕಚೇರಿಯ ಸಿಬ್ಬಂದಿಗಳು ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರಾಗಿದ್ದರು.

ನಾಡ ಕಛೇರಿಯ ಹೊಸ ಕಟ್ಟಡಕ್ಕೆ ಸುಮಾರು 55.23 ಲಕ್ಷ ಅನುದಾನ ಬಂದಿದ್ದು, ಇಂದು ಹೊಸ ಕಟ್ಟಡ ನಿರ್ಮಾಣಕ್ಕೆ ಶಾಸಕರಾದ ಟಿ ಡಿ ರಾಜೇಗೌಡ ಗುದ್ದಲಿ ಪೂಜೆ ಕಾರ್ಯ ನೆರವೇರಿಸಿದರು.

ನಾಡ ಕಛೇರಿ ಕಟ್ಟಡಕ್ಕೆ ಅನುದಾನವನ್ನು ತರುವಲ್ಲಿ ಯಶಸ್ವಿಯಾದ ಶಾಸಕ ಟಿಡಿ ರಾಜೇಗೌಡರನ್ನು ಕಂದಾಯ ಇಲಾಖೆಯ ವತಿಯಿಂದ ಗೌರವಿಸಲಾಯಿತು.

ಈ ಸಂಧರ್ಭದಲ್ಲಿ ಕಂದಾಯ ಇಲಾಖೆಯ ಅಧಿಕಾರಿಗಳು, ಜಯಪುರ ಗ್ರಾಮ ಪಂಚಾಯತಿ ಅಧಿಕಾರಿಗಳು, ಜಯಪುರ ಗ್ರಾಮ ಪಂಚಾಯತಿ ಸದಸ್ಯರು ಮತ್ತು ಗ್ರಾಮಸ್ಥರು ಹಾಗೂ ವಿವಿಧ ಇಲಾಖೆಯ ಅಧಿಕಾರಿಗಳು ಸಿಬ್ಬಂದಿಗಳು ಇದ್ದರು.
ನಂತರ ಜಯಪುರ ಪಟ್ಟಣದ ಮುಖ್ಯ ರಸ್ತೆ ಅಗಲೀಕರಣ ಹಾಗೂ ಹೂಗೇಬೈಲು ಸೇತುವೆಯ ಕಾಮಗಾರಿಗಳಿಗೆ ಶಂಕುಸ್ಥಾಪನೆ ಮಾಡಲಾಯಿತು.
ವರದಿ : ಶಶಿ ಬೆತ್ತದಕೊಳಲು
