ಮೂಡಿಗೆರೆ: ಶಾಸಕಿ ಶ್ರೀಮತಿ ನಯನ ಮೋಟಮ್ಮ ಅವರನ್ನು ಕುದುರೆಮುಖ ರಾಷ್ಟ್ರೀಯ ಉದ್ಯಾನವನ ಪುನರ್ವಸತಿ ಹೋರಾಟ ಸಮಿತಿಯ ವತಿಯಿಂದ ಭೇಟಿಯಾಗಿ ಮನವಿ ಸಲ್ಲಿಸಲಾಯಿತು.

ಈ ವೇಳೆ ಶಾಸಕಿ ಶ್ರೀಮತಿ ನಯನ ಮೋಟಮ್ಮ ಅವರು ಸ್ವಕ್ಷೇತ್ರದಲ್ಲಿಯೂ ಈ ರೀತಿಯ ಸಮಸ್ಯೆ ಇದ್ದೂ ಸದನದಲ್ಲಿ ಚರ್ಚಿಸುವುದಾಗಿ ತಿಳಿಸಿದ್ದಾರೆ.
ಈ ವೇಳೆ ಸುನಿಲ್ ಕೂಳೆಗದ್ದೆ ಪ್ರದೀಪ್ ನೇತೃತ್ವದ ತಂಡ ಸೇರಿ ಮುಂತಾದವರು ಹಾಜರಿದ್ದರುʼ
2005ರಲ್ಲಿ ಸರ್ಕಾರದಿಂದ ಅನುಮತಿ ಪಡೆಯುವಾಗ 2008ರ ವರೆಗೆ ಎಲ್ಲಾ ಕುಟುಂಬಗಳನ್ನು ಪುನರ್ ವಸತಿಗೊಳಿಸಿದಾಗ ಉಲ್ಲೇಖ ಮಾಡಿರುತ್ತಾರೆ ಆದರೆ 2025 ವರ್ಷ ಕಳೆದರೂ ಈವರೆಗೂ ಪುನರ್ವಸತಿ ಗೊಳಿಸುವ ಕಾರ್ಯ ಪೂರ್ಣಗೊಳಿಸುವುದಿಲ್ಲ. ಹಣದುಬ್ಬರದಿಂದ ಜಮೀನು ಮತ್ತು ಮನೆಗಳು ಸೇರಿದಂತೆ ಸರಕು ಸೇವೆಗಳ ಬೆಲೆಗಳು ಗಗನ ಕೇಳುತ್ತಿದ್ದ ಹಣದ ಮೌಲ್ಯಯು ಕಾಲಕಾಲಕ್ಕೆ ಏರಿಳಿತಕ್ಕೆ ಒಳಗಾಗುತ್ತಿದ್ದ ಶೇಕಡ ಐದರಿಂದ ಆರು ಪ್ರತಿಶತ ಹಣದ ಮೌಲ್ಯವು ಕಡಿಮೆಯಾಗಿರುತ್ತದೆ ಆದರೆ ಭೂಮಿಯ ಬೆಲೆಯು ನಾಲ್ಕೈದು ಪಟ್ಟು ಹೆಚ್ಚಾಗಿರುತ್ತದೆ ಈಗ ಕೊಡುತ್ತಿರುವ ಪುನರ್ವಸತಿ ಮೌಲ್ಯದಿಂದ ಅನೇಕ ಕುಟುಂಬಗಳು ಬೀದಿಯಲ್ಲಿ ಬೀಳುವ ಪರಿಸ್ಥಿತಿಯಲ್ಲಿದ್ದಾರೆ ಕಾರಣ ಸರ್ಕಾರ ಜಾಗವನ್ನು ಸಹ ನೀಡುತ್ತಿಲ್ಲ ಹಾಗೂ ಸರ್ಕಾರ ನೀಡುತ್ತಿರುವ ಪುನರ್ವಸತಿ ಯೋಜನೆ ಅಡಿ ನೀರು ಹಣದಿಂದ ಬೇರೆ ಜಮೀನು ಮನೆಗಳನ್ನು ಕೊಳ್ಳಲು ಆಗುವುದಿಲ್ಲ ಆದ್ದರಿಂದ ಸರ್ಕಾರ ಯೋಜನೆಗಾಗಿ ಮೂಲ ನಿವಾಸಿಗಳು ತಾವು ಕಟ್ಟಿಕೊಂಡ ಬದುಕನ್ನು ಸರ್ಕಾರಕ್ಕೆ ಬಿಟ್ಟುಕೊಟ್ಟು ದಿಕ್ಕು ದೆಸೆ ಇಲ್ಲದೆ ಬಿಟ್ಟು ಹೋಗುವ ಪರಿಸ್ಥಿತಿ ಮತ್ತು ಸರ್ಕಾರ ಕೊಡುವ ಹಣ ನೆಲೆ ನಿಲ್ಲಲು ಸಾಕಾಗದೆ ಬೀದಿಯಲ್ಲಿ ಬೀಳುವ ಪರಿಸ್ಥಿತಿ ಒದಾಗಿ ಬಂದಿದೆ
ಆದ್ದರಿಂದ ಪುನರ್ ವಸತಿ ಪ್ಯಾಕೇಜ್ ನಲ್ಲಿ ಘೋಷಿಸಿರುವ ಎಲ್ಲಾ ಮೌಲ್ಯಗಳನ್ನು 2025 ಮಾರ್ಕೆಟ್ ದರಕ್ಕೆ ಹೋಲಿಕೆ ಮಾಡಿ ಮೇಲ್ಕಂಡ ಆದೇಶಗಳನ್ನು ಪುನರ್ ಪರಿಶೀಲಿಸಿ ಹೊಸ ಆದೇಶ ಮಾಡಿಸಿಕೊಡಬೇಕಾಗಿ ಮನವಿ ಸಲ್ಲಿಸಲಾಗಿದೆ.
ವರದಿ : ವಿಠಲ್ ಶೃಂಗೇರಿ
7676798969
