Tuesday, February 10, 2026
Homeಜಿಲ್ಲಾಸುದ್ದಿಹಾಸನ: ರೈತರ ಬೆಳೆಗೆ ಬೆಂಬಲ ಬೆಲೆ & ಬೆಳೆ ಪರಿಹಾರಕ್ಕೆ ಆಗ್ರಹಿಸಿ ಬಿಜೆಪಿ ಪ್ರತಿಭಟನೆ!

ಹಾಸನ: ರೈತರ ಬೆಳೆಗೆ ಬೆಂಬಲ ಬೆಲೆ & ಬೆಳೆ ಪರಿಹಾರಕ್ಕೆ ಆಗ್ರಹಿಸಿ ಬಿಜೆಪಿ ಪ್ರತಿಭಟನೆ!

ಹಾಸನ : ರೈತರ ಬೆಳೆಗೆ ಬೆಂ‌ಬಲ ಬೆಲೆ ಹಾಗೂ ಬೆಳೆ ಪರಿಹಾರಕ್ಕೆ ಆಗ್ರಹಿಸಿ ಹಾಸನ ನಗರದ ಆರ್‌.ಸಿ.ರಸ್ತೆಯಲ್ಲಿ ಬಿಜೆಪಿಯಿಂದ ಬೃಹತ್ ಪ್ರತಿಭಟನೆ‌ ಕೈಗೊಂಡಿದೆ.

ಹೌದು .. ಬಿಜೆಪಿ ಕಚೇರಿಯಿಂದ ಹೊರಟ ಬೃಹತ್ ಪ್ರತಿಭಟನಾ ಮೆರವಣಿಗೆ ಶಾಸಕರುಗಳಾದ ಸಿಮೆಂಟ್ ಮಂಜು, ಎಚ್‌.ಕೆ.ಸುರೇಶ್, ವಿಧಾ‌ನಪರಿಷತ್ ಸದಸ್ಯ ‌ಅರುಣ್ ಕುಮಾರ್ ನೇತೃತ್ವದಲ್ಲಿ ಪ್ರತಿಭಟನೆ ನಡೆಯುತ್ತಿದೆ.

ಎತ್ತಿನ ಗಾಡಿಯಲ್ಲಿ ಆಗಮಿಸಿ ಸರ್ಕಾರದ ವಿರುದ್ಧ ಶಾಸಕರುಗಳ ಆಕ್ರೋಶ ವ್ಯಕ್ತಪಡಿಸಿದ್ದು ರಾಜ್ಯ ಸರ್ಕಾರದ ವಿರುದ್ಧ ಘೋಷಣೆ ಕೂಗಿದ ಕಾರ್ಯಕರ್ತರು. ರಾಜ್ಯದಲ್ಲಿ ಅತಿವೃಷ್ಠಿಯಿಂದ ಅಪಾರ ಪ್ರಮಾಣದ ಬೆಳೆ ಹಾನಿಯಾಗಿದೆ ಸಂಕಷ್ಟದ ನಡುವೆಯೂ ಬೆಳೆದ ಬೆಳೆಗೆ ಬೆಲೆ‌ ಸಿಗುತ್ತಿಲ್ಲ ಬೆಳಗಾವಿ ಅಧಿವೇಶನದ ಒಳಗಾಗಿ ಸೂಕ್ತ ಪರಿಹಾರ ನೀಡಿ‌ ಎಂದು ಒತ್ತಾಯ ಮಾಡಿದ್ದಾರೆ.

ಹಾಗೆ ಡಿಸಿ ಕಚೇರಿವರೆಗೆ ಮೆರವಣಿಗೆ ಮೂಲಕ ತೆರಳಿ ಬೆಳೆ ಪರಿಹಾರಕ್ಕೆ ಆಗ್ರಹಿಸಿ ಪರಿಹಾರಕ್ಕೆ ಮನವಿ ಸಲ್ಲಿಸಿದ್ದಾರೆ.

ಇದರ ನಡುವೆ ಡಿಸೆಂಬರ್ 6 ರಂದು ಸಿಎಂ ಸಿದ್ದರಾಮಯ್ಯ ಅವರು ಹಾಸನ ಭೇಟಿ ಅದರೊಳಗೆ ಹಾಸನ‌ ಜಿಲ್ಲೆಯ ರೈತರ ಬೆಳೆ ಹಾನಿಗೆ ಪರಿಹಾರ ನೀಡುವಂತೆ ಸಹ ಗಡುವು ಸೂಚಿಸಿದ್ದಾರೆ ಇಲ್ಲದಿದ್ದರೆ ಸಿಎಂ ಸಿದ್ದರಾಮಯ್ಯ ಎಂಟ್ರಿಗೆ ನಾವು ಬಿಡಲ್ಲವೆಂದು ಪಟ್ಟುಹಿಡಿದಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular

Recent Comments

error: Content is protected !!