Monday, August 10, 2026
Homeಕ್ರೈಮ್ಚಿಕ್ಕಮಗಳೂರು: ದತ್ತಜಯಂತಿ ಹಿನ್ನೆಲೆ ಕೇಸರಿಮಯವಾದ ಕಾಫಿನಾಡು: ಜಿಲ್ಲೆಯಾದ್ಯಂತ ಪೊಲೀಸ್ ಸರ್ಪಗಾವಲು

ಚಿಕ್ಕಮಗಳೂರು: ದತ್ತಜಯಂತಿ ಹಿನ್ನೆಲೆ ಕೇಸರಿಮಯವಾದ ಕಾಫಿನಾಡು: ಜಿಲ್ಲೆಯಾದ್ಯಂತ ಪೊಲೀಸ್ ಸರ್ಪಗಾವಲು

Telegram Group
Join Now

ಚಿಕ್ಕಮಗಳೂರು: ಕಾಫಿನಾಡು ಚಿಕ್ಕಮಗಳೂರಲ್ಲಿ ದತ್ತಜಯಂತಿ ಹಬ್ಬದಿಂದ ಸಂತಸ ಮನೆ ಮಾಡಿದೆ, ಮತ್ತೊಂದೆಡೆ ಪೊಲೀಸ್ ಇಲಾಖೆಗೆ ಭದ್ರತೆ ಒದಗಿಸೋದೇ ಸವಾಲಿನ ಕೆಲಸ. ಮೊದಲನೆಯದಾಗಿ ಯಾಕೆ ಸಂತಸ ಅಂದ್ರೆ, ಇದೊಂದು ಹಿಂದೂಗಳ ಹಬ್ಬ.

ಎಲ್ಲರೂ ಒಟ್ಟಾಗಿ ಸೇರಿ ಭಕ್ತಿಯಿಂದ ದತ್ತಾತ್ರೇಯನನನ್ನ ಪೂಜೆಸೋ ಸುಸಂದರ್ಭ ಅನ್ನೋದು.. ದತ್ತಪೀಠ ನಮಗೆ ಸೇರಿದ್ದು ಅಂತಾ ಹಿಂದೂ ಸಮಾಜ ಕಳೆದ ಹಲವಾರು ವರ್ಷಗಳಿಂದ ಹೋರಾಟ ಮಾಡಿಕೊಂಡು ಬರ್ತಿದೆ. ಇನ್ನೊಂದೆಡೆ ಇದು ದತ್ತ ಪೀಠವಲ್ಲ, ಈ ಸ್ಥಳ ಬಾಬಬುಡನ್ ಗಿರಿ ಅನ್ನೋದು ಮುಸ್ಲಿಂ ಸಮಾಜದ ವಾದ..

ಸದ್ಯ ಈ ವ್ಯಾಜ್ಯ ಕೋರ್ಟ್ನಲ್ಲಿದ್ದು, ಹೋರಾಟಗಳು ನಡೀತಲೇ ಇದೆ. ಹೀಗಾಗಿ ಅಂದಿನಿAದಲೂ ದತ್ತಪೀಠ, ಹಿಂದೂಗಳ ಪೀಠ ಅಂತಾ ಅದನ್ನೇ ಪಡೆದೇ ಸಿದ್ದ ಅನ್ನೋ ಧ್ಯೇಯದಿಂದ ದತ್ತಜಯಂತಿ ಆಚರಿಸಿ, ಮಾಲೆ ಧರಿಸೋದು ಸಂಪ್ರದಾಯವಾಗಿ ನಡೆದುಕೊಂಡು ಬರ್ತಿದೆ.. ಹೀಗಾಗಿ ಒಂದು ವಾರ ನಡೆಯಲಿರುವ ಈ ಸುಗ್ಗಿಯಲ್ಲಿ ಸಾವಿರಾರು ಸಂಖ್ಯೆಯಲ್ಲಿ ಭಕ್ತರು, ದತ್ತ ಮಾಲೆಯನ್ನ ಧರಿಸುತ್ತಾರೆ. ಚಿಕ್ಕಮಗಳೂರು ಸೇರಿದಂತೆ ರಾಜ್ಯದ ಹಲವೆಡೆಯಿಂದ ದತ್ತ ಮಾಲೆ ಧರಿಸೋ ಮಂದಿ, ಪ್ರತಿ ಹೋಬಳಿ ಮಟ್ಟ-ತಾಲೂಕು ಮಟ್ಟ ಜಿಲ್ಲಾ ಮಟ್ಟದಲ್ಲಿ ಸಭೆಯನ್ನ ಮಾಡಿ, ಶೋಭಾಯಾತ್ರೆ ಮಾಡಿ, ನಾಳೆ ದತ್ತಪೀಠಕ್ಕೆ ತೆರಳುತ್ತಾರೆ. ಅಲ್ಲಿ ದತ್ತಾತ್ರೇಯನಿಗೆ ನಮಿಸೋ ಮೂಲಕ ಒಂದು ವಾರದ ಕಠಿಣ ವೃತವನ್ನ ಕೈ ಬಿಡ್ತಾರೆ.

ಇಂದು ಚಿಕ್ಕಮಗಳೂರು ನಗರದಲ್ಲಿ ಬೃಹತ್ ಶೋಭಾಯಾತ್ರೆ ನಡೆಯಲಿದ್ದು, ಸಾವಿರಾರು ಮಂದಿ ಈ ಶೋಭಾಯಾತ್ರೆಯಲ್ಲಿ ಭಾಗಿಯಾಗ್ತಾರೆ. ಶೋಭಾಯಾತ್ರೆಯ ಪ್ರಮುಖ ಆಕರ್ಷಣೆ ಡಿಜೆ ಆಗಿದ್ದು, ಡಿಜೆಯಲ್ಲಿ ದತ್ತ ಭಕ್ತರ ಜೊತೆ ಯುವಕ-ಯುವತಿಯರು ಕುಣಿದು ಕುಪ್ಪಳಿಸುತ್ತಾರೆ. ಈ ದೃಶ್ಯವನ್ನ ಹತ್ತಿರದಿಂದ ಕಣ್ತುಂಬಿಕೊಳ್ಳಲು ಜನಸಾಗರವೇ ಚಿಕ್ಕಮಗಳೂರಿನತ್ತ ಹರಿದು ಬರುತ್ತೆ.

ಇನ್ನೂ ಈ ಎಲ್ಲದಕ್ಕೂ ಭದ್ರತೆಯನ್ನ ನೀಡೋದಕ್ಕಾಗಿಯೇ ಈ ಬಾರಿ ಆರು ಸಾವಿರದ ಇನ್ನೂರಕ್ಕೂ ಹೆಚ್ಚು ಮಂದಿ ಪೊಲೀಸ್ ಸಿಬ್ಬಂದಿಯನ್ನ ನಿಯೋಜನೆ ಮಾಡಲಾಗಿದೆ. ಯಾವುದೇ ಅಹಿತಕರ ಘಟನೆ ನಡೆಯದಂತೆ ಪೊಲೀಸರು ಹದ್ದಿನ ಕಣ್ಣನ್ನ ಇಟ್ಟಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular

Recent Comments